Monday, September 9, 2024

ಅಬುಧಾಬಿಯಲ್ಲಿನ ಭಾರತದ ರಾಯಭಾರಿಗಳ ಪ್ರಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ !

ಜನಪ್ರತಿನಿಧಿ (ಅಬುಧಾಬಿ) : ಯು.ಎ.ಇ. ರಾಜಧಾನಿ ಅಬುಧಾಬಿಯಲ್ಲಿರುವ ಭಾರತದ ರಾಯಭಾರಿ ಕಛೇರಿಯ ಪ್ರಾಂಗಣದಲ್ಲಿ ಭಾರತದ 78ನೇಯ ಸ್ವಾತಂತ್ರ್ಯೇೂತ್ಸವ ಕಾರ್ಯಕ್ರಮ ನಡೆಯಿತು.

ಯು.ಎ.ಇ.ಯಲ್ಲಿನ ಭಾರತದ ರಾಯಭಾರಿಗಳಾದ ಸಂಜಯ್ ಸುಧೀರ್ ಧ್ವಜಾರೋಹಣಗೈದು ಮಾತನಾಡಿ, “ಭಾರತ ವಿಶ್ವದ ಮೂರನೇಯ ಆಥಿ೯ಕ ಶಕ್ತಿಯಾಗಿ ಹೊರ ಹೊಮ್ಮುವ ಪಥದಲ್ಲಿದ್ದು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆಯನ್ನು ಪರಿಚಯಿಸಿ ಶ್ಲಾಘಿಸಿದರು.

ಯು.ಎ.ಇ.ಮತ್ತು ಭಾರತದ ನಡುವಿನ ಉತ್ತಮ ಭಾಂದವ್ಯ ಎರಡು ರಾಷ್ಟ್ರಗಳ ಅಭಿವೃದ್ಧಿಗೆ ಪೂರಕವಾಗಿ ನಿಂತಿದೆ.ಅಬುಧಾಬಿಯಲ್ಲಿನ ಮಂದಿರ ಸ್ಥಾಪನೆ ಎರಡು ರಾಷ್ಟ್ರಗಳ  ಭಾವನಾತ್ಮಕ ಬೆಸುಗೆಯಾಗಿ ನಿಂತಿದೆ ಎಂದು  ಅವರು ಅಭಿಪ್ರಾಯ ಪಟ್ಟರು. ಸ್ವಾತಂತ್ರ್ಯೋತ್ಸವದ ಶುಭಕೋರಿದರು.

ಇದೇ ಸಂದರ್ಭದಲ್ಲಿ ವಿಶೇಷ ಸಾಧಕರನ್ನು ಮತ್ತು ಯು.ಎ.ಇ.ಯಲ್ಲಿ ನೆಲಸಿರುವ ವಿವಿಧ ಸಮೂಹದ ಮುಖ್ಯಸ್ಥರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಯು.ಎ.ಇ. ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ; ಅಬುಧಾಬಿ ಪ್ರವಾಸದಲ್ಲಿರುವ ಪ್ರೊ.ಕೊಕ್ಕರ್ಣೆ  ಸುರೇಂದ್ರ ನಾಥ ಶೆಟ್ಟಿಯವರು ಹಾಗೂ ಅಬುದಾಭಿಯಲ್ಲಿ ನೆಲಸಿರುವ ಭಾರತೀಯ ಸಮುದಾಯದ ಗಣ್ಯರು  ಭಾರತದ ರಾಯಭಾರಿಗಳಾದ ಸಂಜಯ್ ಸುಧೀರ್ ರವರಿಗೆ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶುಭಾಶಯ ಕೇೂರಿದರು. ಅಬುಧಾಬಿಯಲ್ಲಿ ನೆಲೆಸಿರುವ  ಭಾರತೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!