spot_img
Tuesday, March 31, 2026
spot_img

ಕಂಡ್ಲೂರು ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಗಳ ಅನುಮೋದನೆಗೆ ಕುಂದಾಪುರ ಶಾಸಕ ಎ.ಕಿರಣ್ ಕೊಡ್ಗಿ ಹರ್ಷ

ಕುಂದಾಪುರ : ತೀರ್ಥಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಕಿಲೋ ಮೀಟರ್.79.00ರಲ್ಲಿ ಬಳ್ಕೂರು-ಕಂಡ್ಲೂರು ಮಧ್ಯೆ ವರಾಹಿ ನದಿಗೆ ಅಡ್ಡಲಾಗಿ ಇರುವ ಸೇತುವೆಯ ಮರು ನಿರ್ಮಾಣದ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳೆ ಅವರನ್ನು ಭೇಟಿ ಮಾಡಿ ತೀರ್ಥಳ್ಳಿ-ಕುಂದಾಪುರ ರಸ್ತೆಯ ರಾಜ್ಯ ಹೆದ್ದಾರಿ 52 ಆಗಿದ್ದು ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅತಿ ಹತ್ತಿರದ ರಸ್ತೆಯಾಗಿದ್ದು ಈ ರಸ್ತೆಯು ಕಿ. ಮೀ 79.00 ರಲ್ಲಿ ಬಳ್ಕೂರು-ಕಂಡ್ಲೂರು ಮಧ್ಯ ಸೇತುವೆ ಇದ್ದು ಈ ಸೇತುವೆಯನ್ನು 1972 ರಲ್ಲಿ ನಿರ್ಮಾಣವಾಗಿದ್ದು ಸೇತುವೆಯ 10 ಅಂಕಣಗಳಿದ್ದು ಒಟ್ಟು 312.00ಮೀ ಉದ್ದವಿದ್ದು ಈ ಸೇತುವೆ ಈಗಾಗಲೇ ಶಿಥಿಲ ಗೊಂಡಿರುವ ಕಾರಣ ಈ ಸೇತುವೆ ಮೇಲೆ ಅಧಿಕ ಭಾರ ಹೊತ್ತು ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಕುಸಿಯ ಬಹುದಾಗಿದ್ದು ಇದರಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಂಭವವಿರುವುದರಿಂದ ಸೇತುವೆಯ ಮರು ನಿರ್ಮಾಣಕ್ಕೆ ಅಂದಾಜು ರೂ.4000 ಲಕ್ಷಗಳ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಶಾಸಕರ ಮನವಿಗೆ ಸಚಿವರು ಶೀಘ್ರವಾಗಿ ಸ್ಪಂದಿಸಿದ್ದು ಸೇತುವೆಯ ಮರು ನಿರ್ಮಾಣಕ್ಕೆ 55 ಕೋಟಿ ಕಾಮಗಾರಿಗಳಿಗೆ ಮಂಜೂರು ಮಾಡಿದ್ದಾರೆ. ಬಳ್ಕೂರು-ಕಂಡ್ಲೂರು ಮಧ್ಯ ಸೇತುವೆಯ ಪುನರ್ ನಿರ್ಮಾಣ ಮತ್ತು ಪುನಶ್ವೇತನ ಕಾಮಗಾರಿಗಳಿಗೆ ಅನುಮೋದನೆಗೆ ಶಾಸಕರು ಹರ್ಷ ವ್ಯಕ್ತಪಡಿಸಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!