spot_img
Monday, August 10, 2026
spot_img

ಕುಂದಾಪುರ ಬಿಲ್ಲವ ಮಹಿಳಾ ಘಟಕದ ವತಿಯಿಂದ ‘ಆಷಾಢದಲ್ಲೊಂದು ದಿನ’: ಸವಿರುಚಿ ಸಂಭ್ರಮ

ಕುಂದಾಪುರ: ಕುಂದಾಪುರ ಬಿಲ್ಲವ ಮಹಿಳಾ ಘಟಕದ “ಆಷಾಢದಲ್ಲೊಂದು” ಸವಿರುಚಿ ಸಂಭ್ರಮ ಕಾರ್ಯಕ್ರಮ ಆ.೮ರಂದು ನಾರಾಯಣಗುರು ಸಭಾ ಮಂಟಪದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿಯವರ ಅಧ್ಯಕ್ಷತೆಯಲ್ಲಿ ನೆಡೆಯಿತು.

ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ವಾಸುದೇವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಷಾಢವೆಂದರೆ ಆಹಾರ ಪದಾರ್ಥಗಳಿಗಾಗಿ ಹಂಬಲಿಸುವ ಸಮಯ. ಜಡಿ ಮಳೆಯಲ್ಲಿ ಒಳಗೆ ಚಳಿಗೆ ನಡುಗುವ ಕಾಲದಲ್ಲಿ ಹಪ್ಪಳ ಮೊದಲಾದ ತಿನಿಸುಗಳೇ ಮೃಷ್ಟಾನ್ನ ಎಂದು ಹೇಳಿದ ಅವರು, ಚನ್ನೆಮಣೆ, ಪಗಡೆಯಾಟ, ಒಂಟಿಕಾಲು ಮೊದಲಾದ ಕ್ರೀಡಾ ಚಟುವಟಿಕೆಗಳು ಅಂಗಳದಲ್ಲಿಯೇ ತೆರೆದುಕೊಳ್ಳುತ್ತಿದ್ದ ಚಿತ್ರಣವನ್ನು ತೆರೆದಿಟ್ಟರು.

ಕೋಡಿ ಚಕ್ರಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಗೋಪಾಲ ಪೂಜಾರಿ, ಬಿಲ್ಲವ ಸಂಘದ ಉಪಾಧ್ಯಕ್ಷರು ಗಳಾದ ಮುಲ್ಲಿಮನೆ ರಾಮ ಪೂಜಾರಿ ಹಾಗೂ ಗಿರಿಜಾ ಮಾಣಿಗೋಪಾಲ್, ಪ್ರಧಾನ ಕಾರ್ಯದರ್ಶಿ ಯೋಗೀಶ ಪೂಜಾರಿ ಕೋಡಿ ಮತ್ತು ನಾರಾಯಣಗುರು ಯುವಕ ಮಂಡಲದ ಕಾರ್ಯದರ್ಶಿ ಸಂತೋಷ ಪೂಜಾರಿ ಬೀಜಾಡಿ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷರುಗಳಾದ ಸುಶೀಲ ಶಂಕರ್ ಪೂಜಾರಿ, ಸುಶೀಲ ಪದ್ಮನಾಭ ಉಪಸ್ಥಿತರಿದ್ದರು.

ಗುಲಾಬಿ ಜಯಸೂರ್ಯ ಪ್ರಾರ್ಥಿಸಿದರು. ಗೀತಾ ಮುಕುಂದನ್ ಸ್ವಾಗತಿಸಿದರು. ಪ್ರೇಮಾ ಆನಂದ್ ವಂದಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಗೀತಾ ಸುಧಾಕರ್ ಕಾರ್ಯಕ್ರಮ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಎಲ್ಲರಿಗೂ ಸವಿರುಚಿ ತಿನಿಸುಗಳನ್ನು ಸವಿಯುವುದರೊಂದಿಗೆ ಆಷಾಡಿ ಹಬ್ಬವನ್ನು ಸಂಭ್ರಮಿಸಿದರು.

ವಿಡಿಯೋ ವೀಕ್ಷಿಸಿ:https://www.facebook.com/share/r/1DbPT7341B/

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!