spot_img
Tuesday, September 22, 2026
spot_img

ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮಹಾಸಭೆ : ರೂ. 1 ಕೋಟಿ ನಿವ್ವಳ ಲಾಭ: ಶೇ.12 ಡಿವಿಡೆಂಡ್ ಘೋಷಣೆ

ಕುಂದಾಪುರ: ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಮೀನುಗಾರರ ಅಭಿವೃದ್ಧಿಯ ದೃಷ್ಟಿಯಿಂದ 1999ರಲ್ಲಿ ಆರಂಭಗೊಂಡು ಪ್ರಸ್ತುತ 27ನೇ ಸಹಕಾರಿ ವರ್ಷವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿದೆ. ಸದಸ್ಯರಿಗೆ ಅವಶ್ಯಕ ಸೇವೆ ನೀಡುತ್ತಾ ಸರಕಾರದ ಯೋಜನೆಗ ಪ್ರಯೋಜನವನ್ನು ಸದಸ್ಯರಿಗೆ ತಲುಪಿಸುತ್ತಾ ಸಂಘವು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ.67,16,15,201 ಠೇವಣಾತಿಯನ್ನು ಹೊಂದಿದ್ದು, ಈ ಸಹಕಾರಿ ವ ವರ್ಷದಲ್ಲಿ ರೂ.1,00,21,048.91 ನಿವ್ವಳ ಲಾಭ ಗಳಿಸಿದೆ ಎಂದು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೀವ ಎನ್.ಶ್ರೀಯಾನ್ ಹೇಳಿದರು.

ಅವರು ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ., ಹೆಮ್ಮಾಡಿ ಇದರ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಸದಸ್ಯರಿಗೆ ಶೇ.12% ಡಿವಿಡೆಂಡ್ ಘೋಷಣೆ ಮಾಡಿದರು.

ಸಂಘವು ವರದಿ ವರ್ಷದಲ್ಲಿ ರೂ.308.28 ಕೋಟಿ ಆರ್ಥಿಕ ವಹಿವಾಟು ನಡೆಸಿದೆ. ವರ್ಷಾಂತ್ಯಕ್ಕೆ 27513 ಸದಸ್ಯರನ್ನು ಹೊಂದಿದ್ದು, ರೂ.1,38,40,828 ಪಾಲುಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ರೂ.79,42,75,681 ಸಾಲ ನೀಡಿದ್ದು, ರೂ.62,91,90,239 ಸಾಲಹೊರ ಬಾಕಿ ಇದೆ. ಸಂಘವು ಎ ತರಗತಿಯಲ್ಲಿ ಆಡಿಟ್ ವರ್ಗೀಕರಣಗೊಂಡಿದೆ ಎಂದರು.

ಸಂಘವು 2025ರ ಡಿಸೆಂಬರ್ 21ರಂದು ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ 110 ವಿದ್ಯಾರ್ಥಿಗಳಿಗೆ ಒಟ್ಟು ರೂ.2,20,000 ವಿದ್ಯಾರ್ಥಿವೇತನ ನೀಡಲಾಗಿದೆ. 53 ವಿಶೇಷ ಚೇತನರಿಗೆ ಒಟ್ಟು ರೂ.2,65,000 ಸಹಾಯಧನ ನೀಡಲಾಗಿದೆ. ರಜತಮಹೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಗಿದೆ ಎಂದರು.

ಸಂಘದಲ್ಲಿ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ , ಪಿಯುಸಿಯಲ್ಲಿ ೮೫%ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದ್ದು, ಈಗಾಗಲೇ ಅರ್ಜಿಗಳು ಬಂದಿದ್ದು ಶೀಘ್ರದಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮ ಆಯೋಜಿಸಿ ಗಣ್ಯರ ಮೂಲಕ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ ಹಟ್ಟಿಯಂಗಡಿ ವರದಿ ಮಂಡಿಸಿದರು.

ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸುಮತಿ ಬಿ.ಮೊಗವೀರ, ನಿರ್ದೇಶಕರಾದ ರವೀಂದ್ರ ಜಿ.ಮೆಂಡನ್, ಶ್ರೀಮತಿ ಶ್ಯಾಮಲ ಜಿ.ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ಶ್ರೀಮತಿ ಸುಶೀಲ ಕೆ.ಮೊಗವೀರ, ಶ್ರೀಮತಿ ವನಿತಾ ಎಸ್.ಮೊಗವೀರ, ಲೋಹಿತಾಶ್ವ ಆರ್.ಕುಂದರ್, ಶ್ರೀಮತಿ ಬಾಬಿ, ಅಶೋಕ ಆರ್.ಸುವರ್ಣ ಉಪಸ್ಥಿತರಿದ್ದರು.

ಹಿರಿಯ ಸದಸ್ಯರಾದ ಎಂ.ಎಂ ಸುವರ್ಣ ರಜತಮಹೋತ್ಸವ ಯಶಸ್ಸಿಗೆ ಅಭಿನಂದಿಸಿ, ಸಂಘದ ಕಾರ್ಯವೈಖರಿ ಶ್ಲಾಘಿಸಿದರು.

ಸಂಘದ ಸಿಬ್ಬಂದಿಗಳಾದ ಗಣೇಶ್ ಬಳೆಗಾರ್, ಸಂತೋಷ್ ಆರ್.ಎಂ., ಸಂತೋಷ್ ಎಸ್.ಎಂ ಯಾದಿಗಳನ್ನು ವಾಚಿಸಿದರು. ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿ, ವಂದಿಸಿದರು.

ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ: ಸಿ.ಎಂಗೆ ಮನವಿ 
ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಿಕೊಡುವಂತೆ ನಾಡೋಜ ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಎರಡನೇ ನವರಾತ್ರಿಯಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉಚ್ಚಿಲಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ನಮ್ಮ ಸಂಘದ ನಿಯೋಗವು ಅಲ್ಲಿಗೆ ತೆರಳಿ ಮನವಿ ಸಲ್ಲಿಸಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ತಿಳಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!