spot_img
Saturday, September 19, 2026
spot_img

ವಂಡ್ಸೆ ಗಣೇಶೋತ್ಸವ ಧಾರ್ಮಿಕ ಸಭೆ: ಪ್ರತಿಭಾ ಪುರಸ್ಕಾರ, ಗುರುವಂದನೆ ಕಾರ್ಯಕ್ರಮ

ವಂಡ್ಸೆ: ಶೈಕ್ಷಣಿಕ ಸಾಧಕರನ್ನು ಅಭಿನಂದಿಸುವ ಮೂಲಕ ಸಮಾಜದಲ್ಲಿ ಸ್ಪೂರ್ತಿ ಮತ್ತು ಪ್ರೇರಪಣೆ ನೀಡಿದಂತಾಗುತ್ತದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗುರುಗಳನ್ನು ಗೌರವಿಸುವುದು ಅತ್ಯಂತ ಯೋಗ್ಯವಾದುದು. ಧಾರ್ಮಿಕ ವೇದಿಕೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರಗಳಿಗೂ ಅವಕಾಶ ದೊರೆತಾಗ ಅರ್ಥಪೂರ್ಣವಾಗುತ್ತದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ೨೪ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್,ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.

ಈ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶೈಲಜಾ ಶೆಟ್ಟಿ ವಂಡ್ಸೆ, ಹಾಗೂ ಆದರ್ಶ ಆಸ್ಪತ್ರೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುಪ್ಪಯ್ಯ ಮರಾಠಿ ವಂಡ್ಸೆ ಹಾಗೂ ವಂಡ್ಸೆ ಅಂಗನವಾಡಿಯಲ್ಲಿ ಸುದೀರ್ಘ 42 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮೂಕಾಂಬು ಅವರನ್ನು ಸನ್ಮಾನಿಸಲಾಯಿತು. ಅನ್ನಸಂತರ್ಪಣೆ ಸೇವಾಕರ್ತರ ಪರವಾಗಿ ವಿ.ನಾರಾಯಣ ನಾಯ್ಕ ನ್ಯಾಗಳಮನೆ ಅವರನ್ನು ಗೌರವಿಸಲಾಯಿತು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಆನಂದ ನಾಯ್ಕ ನ್ಯಾಗಳಮನೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ವೆಂಕಟೇಶ ಶೆಟ್ಟಿ ತೆಂಕೊಡಿಗೆ, ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ನಿರಾಮಯ ಸೊಸೈಟಿ ವಂಡ್ಸೆ ಇದರ ಅಧ್ಯಕ್ಷರಾದ ಉದಯಕುಮಾರ ಶೆಟ್ಟಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ ಹಟ್ಟಿಯಂಗಡಿ, ಚಾರ್ಟಡ್ ಅಕೌಂಟೆಂಟ್ ಪ್ರದೀಪ ಶೆಟ್ಟಿ ತೆಂಕೊಡಿಗೆಮನೆ, ಚಾರ್ಟಡ್ ಅಕೌಂಟೆಂಟ್ ಸಚಿನ್ ಎಸ್.ಶೆಟ್ಟಿ ತೆಂಕೊಡಿಗೆಮನೆ, ಉದ್ಯಮಿಗಳಾದ ನಿಶ್ಚಿತ ಶೆಟ್ಟಿ, ಪ್ರಭಾಕರ ಗಾಣಿಗ ಹರವರಿ, ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಗುಂಡು ಪೂಜಾರಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಉದಯ ಕೆ.ನಾಯ್ಕ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವಂಡ್ಸೆ ಶಾಖಾ ವ್ಯವಸ್ಥಾಪಕ ಗಣೇಶ ಬಳೆಗಾರ, ನಿವೃತ್ತ ಶಿಕ್ಷಕಿ ಆಶಾ, ಹಿರಿಯರಾದ ಲಕ್ಷ್ಮೀದೇವಿ ಕಾಮತ್ ವಂಡ್ಸೆ, ವಿ.ನಾರಾಯಣ ನಾಯ್ಕ್ ನ್ಯಾಗಳಮನೆ, ಉದ್ಯಮಿ ಜಯರಾಮ ಶೆಟ್ಟಿ ಬೆಳ್ವಾಣ, ರಂಜಿತ ಶೆಟ್ಟಿ ಕೋಡಿಯರಮನೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಠಲ ಆಚಾರ್ಯ ಸ್ವಾಗತಿಸಿದರು. ರಾಘವೇಂದ್ರ ಬಿ.ಟಿ, ಅಶ್ವಿನ್ ಮೇಲ್ಮನೆ ಅಭಿಷೇಕ್ ಮೇಲ್ಮನೆ, ಉದಯ ಕೊಡ್ಕುಳಿ, ಮಣಿಕಂಠ ಪೂಜಾರಿ ವಿವಿಧ ಪಟ್ಟಿ ವಾಚಿಸಿದರು. ಶಿಕ್ಷಕರಾದ ವಸಂತರಾಜ್ ಶೆಟ್ಟಿ ಹಾಗೂ ಗಣೇಶ ದೇವಾಡಿಗ ನೂಜಿನಮನೆ ಕಾರ್ಯಕ್ರಮ ನಿರ್ವಹಿಸಿದರು. ಅಶ್ವಿನ್ ಮೇಲ್ಮನೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!