spot_img
Saturday, September 19, 2026
spot_img

ಹಿರಿಯ ಸಾಹಿತಿ ಎ.ಎಸ್. ಎನ್. ಹೆಬ್ಬಾರ್ ಮತ್ತು ವಾಗ್ಮಿ ಡಾ. ರಾಹುಲ್ ದೇವರಾಜ್ ಶಿವಮೊಗ್ಗ ಇವರಿಗೆ ಡಾ. ಕಾರಂತ ಹುಟ್ಟೂರ ಪುರಸ್ಕಾರ

ಕೋಟ : ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟದ ಸಹಭಾಗಿತ್ವದಲ್ಲಿ ಕಳೆದ 20 ವರುಷಗಳಿಂದ ಕಾರಂತರ ಆಸಕ್ತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದ್ದು,ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2025 ರ ಪುರಸ್ಕಾರವನ್ನು ಹಿರಿಯ ವಕೀಲರು, ಕಾರಂತರ ಒಡನಾಡಿಗಳು, ಸಾಹಿತಿಗಳು, ವಾಗ್ಮಿ, ಭಾಷಣಗಾರ ಆಗಿರುವಂತ ಶ್ರೀ ಐರೋಡಿ ಶಂಕರನಾರಾಯಣ ಹೆಬ್ಬಾರ್ ರಿಗೂ , 2026ನೇ ಸಾಲಿನ ಕಾರಂತ ಹುಟ್ಟೂರ ಪುರಸ್ಕಾರವನ್ನು ಪ್ರೇರಣ ಮಾತುಗಾರ ಯುವ ಮನಸ್ಸುಗಳ ಪ್ರೇರಕ ಡಾ. ರಾಹುಲ್ ದೇವರಾಜ್ ರವರಿಗೆ ನೀಡಲು ಆಯ್ಕೆ ಮಾಡಲಾಗಿದೆ.

ಪುರಸ್ಕಾರವನ್ನು ಕಾರಂತರ ಜನ್ಮದಿನವಾದ ಅಕ್ಟೋಬರ್ 10 ರಂದು ಮದ್ಯಾಹ್ನ 3 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈಗಾಗಲೇ ವೀರಪ್ಪ ಮೊಯ್ಲಿ, ವೆಂಕಟಾಚಲ, ಕೆ. ರಾಮಕೃಷ್ಣ ಹಂದೆ, ರವಿಬೆಳಗೆರೆ, ಶ್ರೀ ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ. ಎಂ. ಹೆಗ್ಡೆ, ಪ್ರಕಾಶ್ ರೈ, ಶ್ರೀ ಪಡ್ರೆ, ಕವಿತಾ ಮಿಶ್ರ, ನಾಡೋಜ ಡಾ. ಎಸ್.ಎಲ್.ಭೈರಪ್ಪ, ಗಿರೀಶ್ ಭಾರದ್ವಜ್, ರಮೇಶ್ ಅರವಿಂದ, ಡಾ. ವಿದ್ಯಾಭೂಷಣ್, ಪ್ರೊ.ಕೃಷ್ಣೇಗೌಡ ಮೈಸೂರು ಅವರಿಗೆ ಪ್ರದಾನ ಮಾಡಲಾಗಿದೆ ಎಂದು ಪ್ರಶಸ್ತಿ ಪ್ರತಿಷ್ಟಾನದ ಗೌರವಾಧ್ಯಕ್ಷರಾದ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ , ಆಯ್ಕೆ ಸಮಿತಿಯ ಸಂಚಾಲಕರಾದ ಯು. ಎಸ್. ಶೆಣೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!