spot_img
Sunday, September 13, 2026
spot_img

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮಹಾಸಭೆ: 1,336 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ: 282 ಕೋಟಿ ಠೇವಣಿ: 7.08 ಕೋಟಿ ನಿವ್ವಳ ಲಾಭ

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 49 ವರ್ಷಗಳನ್ನು ಪೂರೈಸಿ 50ನೇ ವರ್ಷದ ಸುವರ್ಣ ಸಂಭ್ರಮದ ಸಂಭ್ರಮದಲ್ಲಿದೆ. ಸಕಾರ ಕ್ಷೇತ್ರದಲ್ಲಿ ನಮ್ಮ ಸಂಘ ಸದೃಢವಾಗಿ ಬೆಳೆದಿದೆ. ಈ ವರದಿ ವರ್ಷದಲ್ಲಿ ಸಂಘವು 1,336 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ. ನಾಲ್ಕು ಶಾಖೆಗಳ ಮೂಲಕ 282 ಕೋಟಿ ಠೇವಣಿ ಸಂಗ್ರಹಿಸಿದೆ. ವರದಿ ವರ್ಷದಲ್ಲಿ ಸಂಘವು 7.08 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಹೇಳಿದರು.

ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಸೆ.13ರಂದು ನಡೆದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ, ಉಪ್ಪುಂದ ಇದರ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಸದಸ್ಯರಿಗೆ ಶೇ.15% ಡಿವಿಡೆಂಡ್ ಘೋಷಣೆ ಮಾಡಿದರು.

ಅರ್ಥಿಕ ವರ್ಷದಲ್ಲಿ ಸಂಘವು ಸೇವಾ ಬದ್ಧತೆಯನ್ನು ಮೆರೆದು ರೂ. 258.30 ಕೋಟಿ ಸಾಲ ನೀಡಿದೆ. ರೂ.94.01 ಕೋಟಿ ಹೂಡಿಕೆಯನ್ನು ಮತ್ತು ರೂ.41.62 ಕೋಟಿ ನಿಧಿಗಳನ್ನು ಹೊಂದಿದೆ. 9780 ಸದಸ್ಯರನ್ನು ಒಳಗೊಂಡ 974 ರೈತಸಿರಿ ಸ್ವಸಹಾಯ ಗುಂಪುಗಳನ್ನು ಸಂಯೋಜಿಸಿ ಗುಂಪುಗಳಿಗೆ ಸಾಲವನ್ನು ನೀಡುತ್ತಿದೆ ಎಂದರು.

ರಾಜ್ಯದ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೇ ಕರಾವಳಿ ಭಾಗದಲ್ಲಿ ಪ್ರಪ್ರಥಮವಾಗಿ ಸಂಘದ ಮಾಲಕತ್ವದಲ್ಲಿ ಖರೀದಿಸಿದ ನಿವೇಶನದಲ್ಲಿ ವಿಶಿಷ್ಟ ವಿನ್ಯಾಸದ ರೈತ ಸಿರಿ ಅಗ್ರಿ ಮಾಲ್ ಸರ್ವ ಸರಕಿನ ಮಳಿಗೆ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಇದರ ಒಳ ವಿನ್ಯಾಸ ಮುಂದಿನ ವ್ಯವಹಾರ ವ್ಯಾಪಾರ ಅಭಿವೃದ್ಧಿ ಹಾಗೂ ಖರೀದಿ ಮತ್ತು ಮಾರಾಟದ ನಿಯಮಾವಳಿ ರಚಿಸಿ ರೈತ ಸಹಕಾರಿ ನವೋದ್ಯಮ ಯೋಜನೆ ರೂಪಿಸಿ ಸುವರ್ಣಮೋತ್ಸವದ ಸಂದರ್ಭದಲ್ಲಿ ಸೇವೆಯನ್ನು ಕಲ್ಪಿಸಲು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋರ್ ಬ್ಯಾಂಕಿಂಗ್ ತಂತ್ರಾಂಶ ಅಳವಡಿಸಿ ಸಂಘದ ಎಲ್ಲಾ ಶಾಖೆಗಳಲ್ಲಿ ಉನ್ನತ ಸೇವೆಯನ್ನು ಒದಗಿಸಲು ರೂಪಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಂಜು ದೇವಾಡಿಗ, ನಿರ್ದೇಶಕರಾದ ಈಶ್ವರ ಹಕ್ಲತೋಡ್, ಮೋಹನ ಪೂಜಾರಿ, ಬಿ.ಎಸ್ ಸುರೇಶ್ ಶೆಟ್ಟಿ, ಗುರುರಾಜ್ ಹೆಬ್ಬಾರ್, ಭರತ ದೇವಾಡಿಗ, ಹೂವ ನಾಯ್ಕ್, ಪ್ರಕಾಶ ಎನ್ ಪೂಜಾರಿ, ರಾಜೇಶ್ ದೇವಾಡಿಗ, ಉದಯಕುಮಾರ್ ಶೆಟ್ಟಿ, ಶ್ರೀಮತಿ ದೀನಿತಾ ಶೆಟ್ಟಿ, ಶ್ರೀಮತಿ ಲೀಲಾ ಪೂಜಾರ್ತಿ, ರಂಜಿತ ಕುಮಾರ್ ಶೆಟ್ಟಿ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕೃಷಿಕ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಂಚಿತವಾಗಿ ರಾರಾ ಮೆಲೋಡಿಯಸ್ ರವಿ ಉಪ್ಪುಂದ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ರಮ್ಯ ಉಪ್ಪುಂದ ಅವರು ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ವಿಷ್ಣು ಪೈ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಚಂದಯ್ಯ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!