spot_img
Sunday, September 13, 2026
spot_img

ಬೆಳ್ವೆ ಮಾದರಿ ಸಹಕಾರಿ ಸಂಘ: ಕರ್ನಾಟಕ ಬ್ಯಾಂಕ್ ನಿರ್ದೇಶಕ ನಾಗರಾಜ ಅಲ್ಸೆ| ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸೇವಾ ಸ್ಮರಣೆ ಕಾರ್ಯಕ್ರಮ

ಕುಂದಾಪುರ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಮಾದರಿಯಾದ ಕಾರ್ಯಕ್ರಮ ಈ ಸಂಘವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬಹುದು ಸಂಸ್ಥೆ ಜಾಸ್ತಿ ವರ್ಷ ಆದಷ್ಟು ಫಲ ಜಾಸ್ತಿ ಒಂದು ನಿರ್ದಿಷ್ಟ ವ್ಯಾಪ್ತಿ ಹೊಂದಿ ಅಭಿವೃದ್ಧಿ ಪಥದತ್ತ ಸಾಗುವುದು ಕಷ್ಟ. ಈ ಪ್ರದೇಶಕ್ಕೆ ಸಂಸ್ಥೆ ಒಳ್ಳೆಯ ಕೊಡುಗೆ ಕೊಟ್ಟಿದೆ ಸೇವಾ ಮನೋಭಾವನೆ ಇದ್ದರೆ ಒಳ್ಳೆಯ ಕೆಲಸ ಆಗುತ್ತದೆ. ಹಿಂದಿನವರು ಬಹಳ ಕಷ್ಟ ಪಟ್ಟಿದ್ದಾರೆ. ಈ ಸಂಸ್ಥೆ ಶತಮಾನ ಶತಮಾನ ಕಾಣಲಿ. ಲೋಪವಿಲ್ಲದೆ ಕೆಲಸ ನಿರ್ವಹಿಸಲಿ ಎಂದು ಕರ್ನಾಟಕ ಬ್ಯಾಂಕ್ ನಿರ್ದೇಶಕ ನಾಗರಾಜ ಅಲ್ಸೇ ಹೇಳಿದರು.

ಅವರು ಸೆಪ್ಟೆಂಬರ್ ೧೨ರಂದು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಭಿವೃದ್ಧಿಗೆ ಸೇವೆ ಸಲ್ಲಿಸಿದವರಿಗೆ ನೆರವೇರಿಸಿದ ಸೇವಾ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರವೇರಿಸಿ ಮಾತನಾಡಿದರು.

ಸಂಘದ ಅಧ್ಯಕ್ಷರಾದ ಎನ್. ಜಯರಾಮ್ ಶೆಟ್ಟಿ ಸುರ್ಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಮೊದಲಾಗಿ ನಾವು ಈ ಸಂಘಕ್ಕೆ ದುಡಿದವರನ್ನು, ಸೇವೆ ಸಲ್ಲಿಸಿದವರನ್ನು ಗೌರವಿಸ ಬೇಕಾದ ಕರ್ತವ್ಯ ನಮ್ಮದು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸುವರ್ಣ ಸಂಭ್ರಮದ ಕೆಲಸವನ್ನು ಯಶಸ್ವಿಯಾಗಿ ನಡೆಸಬೇಕಾಗಿದ್ದು, ಎಲ್ಲರ ಸಹಕಾರವನ್ನು ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬಿ ಸತೀಶ್ ಕಿಣಿ ಮಾತನಾಡಿ ಸಂಘವು ಸಾಕಷ್ಟು ಕೆಲಸವನ್ನು ನಿರ್ವಹಿಸಿದೆ. ರೈತರ ಪರವಾಗಿ ಕೆಲಸ ಮಾಡಿದೆ. ಈ ಹಿಂದೆ ದುಡಿದ ಕೆಲಸ ನಿರ್ವಹಿಸಿದ ಎಲ್ಲರನ್ನೂ ಗುರುತಿಸುವಂಥದ್ದು ಮಾದರಿಯದ ಕೆಲಸ ಎಂದು ಹೇಳಿದರು.

ಸಂಘದ ಮಾಜಿ ಉಪಾಧ್ಯಕ್ಷರನ್ನು ಮಾಜಿ ನಿರ್ದೇಶಕರನ್ನು ಮಾಜಿ ಸಿಬ್ಬಂದಿಗಳನ್ನು ಷರಪನ್ನು, ಕಾನೂನು ಸಲಹೆಗಾರರನ್ನು ಸ್ವಸಹಾಯ ಗುಂಪುಗಳ ಪ್ರೇರಕರನ್ನು, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳನ್ನು ಪಿಗ್ಮಿ ಏಜೆಂಟರನ್ನು ಗೌರವಿಸಲಾಯಿತು.

ವೇದಿಕೆ ಮೇಲೆ ಉಪಾಧ್ಯಕ್ಷರಾದ ಹರೀಶ್ ಕಿಣಿ ಬಿ, ಸುವರ್ಣ ಸಮಿತಿ ಅಧ್ಯಕ್ಷರಾದ ದಯಾನಂದ ಆರ್ ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ದಯಾನಂದ ಪೂಜಾರಿ, ಎಚ್ ಕೆ ಸೀತಾರಾಮ ಶೆಟ್ಟಿ, ಉದಯ ಶೆಟ್ಟಿ ಜಯದೇವ ಹೆಗಡೆ ಸವಿತಾ ಶೆಟ್ಟಿ ಸುಜಾತ ಪೂಜಾರಿ, ಕೃಷ್ಣ ನಾಯ್ಕ ಶಿವರಾಂ ಪ್ರದೀಪ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಉದಯ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!