spot_img
Friday, September 11, 2026
spot_img

ಮೂಡುಗಿಳಿಯಾರು: ಶ್ರೇಷ್ಠ ಶಿಕ್ಷಕ ಡಾ. ಎಸ್. ರಾಧಾಕೃಷ್ಣನ್ ಜಯಂತಿ

 

ದಿನಾಂಕ :05-09-2026ರಂದು ಮೂಡುಗಿಳಿಯಾರು ಗ್ರಾಮ ದೇವತೆ ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಸಭಾಂಗಣದಲ್ಲಿ ಕೋಟ-ಗಿಳಿಯಾರು ಹಿರಿಯ ನಾಗರಿಕರ ವೇದಿಕೆ, ಕೋಟ ರೋಟರಿ ಸಮುದಾಯದಳ, ಹೊನ್ನಾರಿ ಫ್ರೆಂಡ್ಸ್ ಇವರ ಸಂಯುಕ್ತ
ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅದ್ಯಕ್ಷತೆಯನ್ನುರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್. ಸೋಮಶೇಖರ ಶೆಟ್ಟಿ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಸಮುದಾಯ ದಳದ ಮಾಜಿ ಅಧ್ಯಕ್ಷರಾದ ಶರಣಯ್ಯ ಹಿರೇಮಠ ಹಿ.ನಾ.ವೇ. ವೇದಿಕೆ ಕಾರ್ಯದರ್ಶಿ ಶಂಕರ ಆಚಾರ್, ಕೋಟ-ಗಿಳಿಯಾರು ಲಯನ್ ಕ್ಲಬ್ ಕಾರ್ಯದರ್ಶಿ ಅಶೋಕ ಶೆಟ್ಟಿ ಬನ್ನಾಡಿ ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಜಿ. ಮಹಾಬಲ ಹೇರ್ಳೆ ಉದ್ಘಾಟಿಸಿ, ಶಿಕ್ಷಕ ದಿನಾಚರಣೆಗೆ ಶುಭ ಹಾರೈಸಿದರು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸ್ಥಳೀಯ ನಿವೃತ್ತ ಶಿಕ್ಷಕರಾದ ಎಚ್. ಸೋಮಶೇಖರ ಶೆಟ್ಟಿ, ಭೋಜ ಶೆಟ್ಟಿ, ಸುರೇಂದ್ರ ಶೆಟ್ಟಿ ಮತ್ತು ಕೇಶವ ಶಿಶುಮಂದಿರ ಮಾತೆ ಗಿರಿಜ, ಅಂಗನವಾಡಿ ಶಿಕ್ಷಕಿಯರಾದ, ಜಲಜ ಮತ್ತು ಗಂಗಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ| ಎಸ್. ರಾಧಾಕೃಷ್ಣನ್ ಹಾಗೂ ಶಿಕ್ಷಕರ ಕುರಿತು ರಾಷ್ಟç ಪ್ರಶಸ್ತಿ ಪುರಸ್ಕೃತರಾದ ಎಚ್. ಸೋಮಶೇಖರ ಶೆಟ್ಟಿ, ನಿವೃತ್ತ ಶಿಕ್ಷಕರಾದ ಬಿ. ಭೋಜ ಶೆಟ್ಟಿ, ಸಿ. ಸುರೇಂದ್ರ ಶೆಟ್ಟಿ ಹಿರಿಯ ನಾಗರಿಕರ ವೇದಿಕೆ ಕೋಶಾಧಿಕಾರಿಗಳಾದ ಜಿ. ಗಂಗಾಧರ ಐತಾಳ, ಕೇಶವ ಶಿಶುಮಂದಿರ ಅಧ್ಯಕ್ಷರಾದ ಜಿ. ಕೃಷ್ಣ ಹಂದೆಯವರು ಮಾತನಾಡಿದರು. ಕೃಷ್ಣಯ್ಯ ಆಚಾರ್, ಗೋಪಾಲಕೃಷ್ಣ ಜೋಗಿ, ಕೃಷ್ಣಮೂರ್ತಿ, ಭಾಸ್ಕರ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು.
ಗಿರಿಜ, ಜಲಜ, ಗಂಗಾ, ಅನಿತಾ, ಸುಶೀಲ ಶೆಟ್ಟಿ ಪ್ರಾರ್ಥನೆ ಹಾಡಿದರು. ನ್ಯಾಯವಾದಿಗಳು ಹಾಗೂ ರೋಟರಿ ಸಮುದಾಯ ದಳದ ಸಂಚಾಲಕ ಜಿ. ಮಂಜುನಾಥ ಗಿಳಿಯಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!