spot_img
Thursday, September 10, 2026
spot_img

ಬಿ. ಬಿ. ಹೆಗ್ಡೆ ಕಾಲೇಜು: ಮಾನಸಿಕ ಆರೋಗ್ಯ ಕುರಿತು ತರಬೇತಿ ಕಾರ್ಯಾಗಾರ

ಕುಂದಾಪುರ : ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು
ಮೊಬೈಲ್‌ನಿಂದ ದೂರ ಉಳಿದು ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಆ ಮೂಲಕ ಯೋಚಿಸುವ,
ಮಾತನಾಡುವ ಮತ್ತು ವರ್ತಿಸುವ ರೀತಿ ಧನಾತ್ಮಕವಾಗಿ ಬದಲಾಗಲಿ ಎಂದು ಎ.ಜೆ. ನರ್ಸಿಂಗ್‌ ಕಾಲೇಜಿನ ಸಹಾಯಕ
ಪ್ರಾಧ್ಯಾಪಕರು ಹಾಗೂ ಮನಶಾಸ್ತ್ರಜ್ಞರಾಗಿರುವ ಜೆಸಿಐ ಅಕ್ಷತಾ ಆರ್.‌ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಜೆಸಿಐ ಕುಂದಾಪುರ ಸಿಟಿಯ ಜಂಟಿ
ಆಶ್ರಯದಲ್ಲಿ ಆಯೋಜಿಸಿದ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉಪ-
ಪ್ರಾಂಶುಪಾಲ ಡಾ. ಚೇತನ್‌ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕ ರಕ್ಷಿತ್‌ ರಾವ್‌ ಗುಜ್ಜಾಡಿ, ಜೆಸಿಐ ಕುಂದಾಪುರ
ಸಿಟಿಯ ಅಧ್ಯಕ್ಷ ಕಿರಣ್ ದೇವಾಡಿಗ, ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ, ಜೆಸಿಐ ಸಪ್ತಾಹದ ಸಂಚಾಲಕ ರಾಘವೇಂದ್ರ
ಕುಲಾಲ್‌, ನಿಕಟಪೂರ್ವ ಅಧ್ಯಕ್ಷ ಯುಸೂಫ್ ಸಲೀಮ್‌, ಜೆಸಿಐನ ಪದಾಧಿಕಾರಿಗಳಾದ ನವೀನ್ ಸಂಭ್ರಮ್, ದೀಪಾ
ಉಪಸ್ಥಿತರಿದ್ದರು. ಕಾಲೇಜಿನ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಜಿ. ರಾವ್ ಸ್ವಾಗತಿಸಿ, ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!