spot_img
Monday, September 7, 2026
spot_img

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ರೂ.4.69 ಕೋಟಿ ನಿವ್ವಳ ಲಾಭ

ಶೇ.22% ಡಿವಿಡೆಂಡ್ ಘೋಷಣೆ; ರೂ.218.55 ಕೋಟಿ ಠೇವಣಿ, ರೂ.174.82 ಕೋಟಿ ಸಾಲ

ಕುಂದಾಪುರ: ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಾಧನೆಯ ಪಥದಲ್ಲಿ ಮುನ್ನೆಡೆಯುತ್ತಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ.218.55 ಕೋಟಿ ಠೇವಣಾತಿ, ರೂ.174.82 ಕೋಟಿ ಸಾಲದ ಹೊರಬಾಕಿ ದಾಖಲಾಗಿದೆ. ವರದಿ ವರ್ಷದಲ್ಲಿ ಸಂಘವು ರೂ.4.69 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಉತ್ತಮ ಆರ್ಥಿಕ ಸಾಧನೆಯನ್ನು ಪರಿಗಣಿಸಿ ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿ’ಅಲ್ಮೇಡಾ ಹೇಳಿದರು.

ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‍ನ ಸಭಾಂಗಣದಲ್ಲಿ ನಡೆದ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ 2025-26ನೇ ಸಾಲಿನ 35ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಸಾಲಿಗೆ ಹೋಲಿಸಿದರೆ ಸಂಘದ ಠೇವಣಿ ವ್ಯವಹಾರದಲ್ಲಿಯೂ ಗಣನೀಯ ಪ್ರಗತಿ ಕಂಡುಬಂದಿದೆ. ಸದಸ್ಯರ ವಿವಿಧ ಅಗತ್ಯಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಸಂಘವು ತನ್ನ ಆರ್ಥಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ ಪ್ರಗತಿಯತ್ತ ಸಾಗುತ್ತಿದೆ. ನಿರಂತರ ಸಭೆಗಳನ್ನು ನಡೆಸಿ ಸದಸ್ಯರ ಅನುಕೂಲತೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕ್ರೀಯಾಶೀಲ ಆಡಳಿತ ಮಂಡಳಿ, ನೌಕರವೃಂದದ ಸಹಕಾರದಿಂದ ಸಂಘ ನೂತನ ಶಾಖೆಗಳನ್ನತೆ ತೆರೆದು ಯಶಸ್ವಿಯಾಗಿ ಸೇವೆ ನೀಡುತ್ತಾ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಮುಂದಿನ ವರ್ಷ ಠೇವಣಿ ಹೆಚ್ಚಳದೊಂದಿಗೆ 7 ಕೋಟಿ ಲಾಭದ ಗುರಿ ಇಟ್ಟುಕೊಂಡಿದ್ದೇವೆ ಎಂದರು.
ಸಂಘದ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಿರುವ ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದು ಹಾಗೂ ಸದಸ್ಯರು ಮತ್ತು ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಯೋಜನೆಗಳನ್ನು ಆಡಳಿತ ಮಂಡಳಿ ಹೊಂದಿದೆ. ಸಂಘವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢವಾಗಿ ಬೆಳೆಸುವ ಉದ್ದೇಶದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ನಿರಂತರ ಪ್ರಗತಿಗೆ ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ, ಸಿಬ್ಬಂದಿಯ ಕಾರ್ಯತತ್ಪರತೆ ಹಾಗೂ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲಿಟ್ಟಿರುವ ವಿಶ್ವಾಸ ಮತ್ತು ನೀಡುತ್ತಿರುವ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಯಿತು.

ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಉದ್ದೇಶದಿಂದ, ಉತ್ತಮ ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನವನ್ನು ಮಹಾಸಭೆಯ ಸಂದರ್ಭದಲ್ಲಿ ವಿತರಿಸಲಾಯಿತು. ವಿದ್ಯಾರ್ಥಿವೇತನವನ್ನು ಫಾ. ಪಾವ್ಲ್ ರೇಗೋ ಅವರು ವಿತರಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಯನ್ನು ಉತ್ತೇಜಿಸುವ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಕೈಗೊಂಡಿರುವ ಈ ಉಪಕ್ರಮವು ಮೆಚ್ಚುಗೆಗೆ ಪಾತ್ರವಾಯಿತು.

ಇದೇ ಸಂದರ್ಭದಲ್ಲಿ ಬಸ್ರೂರಿನ ಪಿಯೂಸ್ ಡಿಸೋಜಾ ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅವರ ಶೈಕ್ಷಣಿಕ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಸಲ್ಲಿಸಲಾದ ಈ ಗೌರವವು ಸಭೆಯಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

ಸಭೆಯಲ್ಲಿ ಸಂಘದ ಮುಖ್ಯ ಸಲಹೆಗಾರರಾದ ವಂದನೀಯ ಫಾ. ಪಾವ್ಲ್ ರೇಗೋ ಅವರು ಉಪಸ್ಥಿತರಿದ್ದು, ಆಡಳಿತ ಮಂಡಳಿ ಹಾಗೂ ಸದಸ್ಯರಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೇಬಲ್ ಡಿ’ಆಲ್ಮೇಡಾ ಅವರು ಸದಸ್ಯರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತಂದರು. ಸದಸ್ಯರ ಪ್ರಶ್ನೆಗಳು ಹಾಗೂ ಅಭಿಪ್ರಾಯಗಳಿಗೆ ಅಧ್ಯಕ್ಷರು ಸೂಕ್ತ ಉತ್ತರ ಮತ್ತು ಅಗತ್ಯ ಸ್ಪಷ್ಟೀಕರಣವನ್ನು ನೀಡಿದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ವಿನೋದ್ ಕ್ರಾಸ್ಟೋ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ವಿಲ್ಸನ್ ಡಿಸೋಜಾ, ಡೆರಿಕ್ ಡಿಸೋಜಾ, ವೆಲೆಂಟೈನ್ ಡಿಸೋಜಾ, ಮೈಕಲ್ ಪಿಂಟೋ, ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಟೆರೆನ್ಸ್ ಸುವಾರಿಸ್, ರೋವನ್ ಡಿ’ಕೋಸ್ಟಾ, ಲಿಪ್ಟನ್ ಒಲಿವೇರ, ಶ್ರೀಮತಿ ಶಾಂತಿ ಡಾಯಾಸ್ ಹಾಗೂ ಶ್ರೀಮತಿ ಶಾಂತಿ ಆರ್. ಕರ್ವಾಲ್ಹೊ ಉಪಸ್ಥಿತರಿದ್ದರು.

ನಿರ್ದೇಶಕರಾದ ಫಿಲಿಪ್ ಡಿ’ಕೋಸ್ಟಾ ಸ್ವಾಗತಿಸಿದರು. ಕಿರಣ್ ಲೋಬೋ ವಂದಿಸಿದರು. ಶ್ರೀಮತಿ ಡೈನಾ ಡಿ’ಅಲ್ಮೇಡಾರವರು ನಿರೂಪಿಸಿದರು.

ಸಭೆಯಲ್ಲಿ ಸುಮಾರು 2,500 ಮಂದಿ ಸದಸ್ಯರು ಭಾಗವಹಿಸಿದ್ದು, ಗಣನೀಯ ಸಂಖ್ಯೆಯಲ್ಲಿ ಸದಸ್ಯರ ಉಪಸ್ಥಿತಿಯಿಂದ ಸಭೆ ಗಮನ ಸೆಳೆಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!