spot_img
Saturday, September 12, 2026
spot_img

ಸೆ.14-15: ವಂಡ್ಸೆಯಲ್ಲಿ 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ವಂಡ್ಸೆ: ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 24ನೇ ವರ್ಷದ ಗಣೇಶೋತ್ಸವ ಸೆ.14 ಸೋಮವಾರ ಮತ್ತು ಸೆ.15 ಮಂಗಳವಾರ ನಡೆಯಲಿದೆ.
ಸೆ.14ರ ಬೆಳಿಗ್ಗೆ 9.15 ಗಣಪತಿ ವಿಗ್ರಹದ ಪ್ರತಿಷ್ಠಾಪನೆ, ಮೂಡುಗಣಪತಿ ಸೇವೆ, ಗಣಹೋಮ, 10-30ಕ್ಕೆ ವಿವಿಧ ಸ್ಪರ್ಧೆಗಳು,  ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಮಂಗಳಾರತಿ, ಬಳಿಕ ಅನ್ನಸಂತರ್ಪಣೆ (ಸೇವಾಕರ್ತರು: ದಿ.ಚಂದು ಮತ್ತು ಶೀನ ನಾಯ್ಕ ನ್ಯಾಗಳಮನೆ ವಂಡ್ಸೆ ಇವರ ಸಂಸ್ಮರಣಾರ್ಥವಾಗಿ ಮಕ್ಕಳು, ಅಳಿಯ ಮೊಮ್ಮಕ್ಕಳು ಹಾಗೂ ಮರಿಮಕ್ಕಳ ಸೇವೆ) ಮಧ್ಯಾಹ್ನ 12-45ರಿಂದ ಸ್ಥಳೀಯ ಬಾಲ ಪ್ರತಿಭೆಗಳಾದ ದಿಪ್ತ ದಿನೇಶ ಕುಂದರ್, ಆಯುಷಿ ದಿವಾಕರ, ಅರುಷ್ ಸುಧೀಂದ್ರ ಆಚಾರ್ಯ, ರಿಧಿ ಕೃಷ್ಣ ಪೂಜಾರಿ, ಧೃತಿ ಗಾಣಿಗ, ಅಥರ್ವ ಮನೋಜ ಆಚಾರ್ಯ ಇವರಿಂದ ಯಕ್ಷ ನೃತ್ಯ,  ಮಧ್ಯಾಹ್ನ 3.30ರಿಂದ ಹಗ್ಗ ಜಗ್ಗಾಟ-ಮಡಿಕೆ ಒಡೆಯುವುದು,  ಸಂಜೆ 5ರಿಂದ ಪೂಜಾ ಕಾರ್ಯಕ್ರಮ,  5.30 ಶ್ರೀ ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 6.30ಕ್ಕೆ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಸಂಜೆ 7 ಗಂಟೆಗೆ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ,  ರಾತ್ರಿ 10ರಿಂದ ಸ್ಥಳೀಯರಿಂದ ಸಾಂಸ್ಕøತಿಕ ಕಾರ್ಯಕ್ರಮ, ಬಳಿಕ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಕುಶಲವ ನಡೆಯಲಿದೆ.

ಸೆ.15ರಂದು ಸಂಜೆ 3 ಗಂಟೆಯಿಂದ ವಿಸರ್ಜನಾ ಪೂಜೆ, ನಂತರ ಕುಣಿತ ಭಜನಾ ತಂಡಗಳು, ಬ್ಯಾಂಡು, ಕೀಲುಕುದುರೆ, ಚಂಡೆ, ಗೊಂಬೆ ನೃತ್ಯ ಹಾಗೂ ತೆಂಕೊಡಿಗೆ ಪ್ರಭಾಕರ ಗಾಣಿಗ ಮತ್ತು ಬಳಗದವರಿಂದ ಟ್ಯಾಬ್ಲೋಗಳೊಂದಿಗೆ ವೈಭವದ ಪುರಮೆರವಣಿಗೆ ನಡೆಯಲಿದೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಆನಂದ ನಾಯ್ಕ ನ್ಯಾಗಳಮನೆ, ಗೌರವಾಧ್ಯಕ್ಷರಾದ ವೆಂಕಟೇಶ ಶೆಟ್ಟಿ, ಕಾರ್ಯದರ್ಶಿ ವಿಠಲ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!