spot_img
Tuesday, November 3, 2026
spot_img

ಹಿರಿಯ ಕಲಾವಿದ ತೀರ್ಥಳ್ಳಿ ಗೋಪಾಲ ಆಚಾರ್ಯರಿಗೆ ‘ಗೋಳಿಗರಡಿ ಜಿ.ಚಂದು ಪೂಜಾರಿ ಪ್ರಶಸ್ತಿ’

ಕುಂದಾಪುರ: ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಗೋಳಿಗರಡಿ, ಸಾಸ್ತಾನ ಇವರು ನೀಡುವ ಕೀರ್ತಿಶೇಷ ಗೋಳಿಗರಡಿ ಜಿ. ಚಂದು ಪೂಜಾರಿ ಪ್ರಶಸ್ತಿ 2026ಕ್ಕೆ ಬಡಗುತಿಟ್ಟಿನ ಹಿರಿಯ ಪ್ರಸಿದ್ಧ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೀರ್ಥಳ್ಳಿ ಗೋಪಾಲ ಆಚಾರ್ಯರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ನ.22 ಆದಿತ್ಯವಾರ ರಾತ್ರಿ 9.30ಕ್ಕೆ ಗೋಳಿಗರಡಿ ಮೇಳದ ಪ್ರಥಮ ದೇವರ ಸೇವೆಯಾಟದ ವೇದಿಕೆಯಲ್ಲಿ ನಡೆಯಲಿದೆ.

ಯಕ್ಷಗಾನ ಕಲೆ, ಹಾಗೂ ಗೋಳಿಗರಡಿ ಮೇಳದ ಬೆಳವಣಿಗೆಯಲ್ಲಿ ದಿ.ಚಂದು ಪೂಜಾರಿ ಅವರ ಆಸಕ್ತಿ, ಕೊಡುಗೆ, ಪರಿಶ್ರಮ ಅಪಾರವಾದುದು. ಅಪ್ಪಟ ಯಕ್ಷಗಾನ ಅಭಿಮಾನಿಯಾಗಿ, ಧಾರ್ಮಿಕ, ಸಾಮಾಜಿಕ ಮುಂದಾಳುವಾಗಿ ಜನಮನ್ನಣೆ ಪಡೆದವರು. ಅವರ ಹೆಸರಲ್ಲಿ ಪ್ರತಿವರ್ಷ ಗೋಳಿಗರಡಿ ಮೇಳದ ಪ್ರಥಮ ದೇವರ ಸೇವೆಯನ್ನು ಪ್ರಶಸ್ತಿ ನೀಡುವ ಪರಿಪಾಠವನ್ನು ಪ್ರಸ್ತುತ ಮೇಳದ ಅಧ್ಯಕ್ಷರಾದ ಜಿ.ಪೂಜಾರಿ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.

ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ತೀರ್ಥಳ್ಳಿ ಗೋಪಾಲ ಆಚಾರ್ಯ ಅವರ ಅಭಿನವ ಅಭಿಮನ್ಯು ಎನ್ನುವ ಅಭಿದಾನಕ್ಕೆ ಪಾತ್ರರಾದರು. ಯಕ್ಷರಂಗದ ಸಿಡಿಲಮರಿ ಎಂದೇ ಕರೆಯಲ್ಪಡುವ ಇವರು ಇಂದಿಗೂ ಕೂಡಾ ಪುಂಡುವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುವ ಅವರು ಸಾತ್ವಿಕ ಪಾತ್ರಗಳ ಮೂಲಕವೇ ಮನೆ ಮಾತಾದವರು. 1970ರಲ್ಲಿ ತನ್ನ ತಿರುಗಾಟವನ್ನು ಆರಂಭಿಸಿದ ತೀರ್ಥಹಳ್ಳಿಯವರು ನಾಗರಕೊಡಿಗೆ, ಶಿರಸಿಯ ಪಂಚಲಿಂಗೇಶ್ವರ, ಗೋಳಿಗರಡಿ ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ನಂತರ ಪೆರ್ಡೂರು ಮೇಳದಲ್ಲಿ 31 ವರ್ಷಗಳ ಸುದೀರ್ಘಾವಧಿಯ ಕಲಾಸೇವೆ ಸಲ್ಲಿಸಿದ್ದಾರೆ. ಒಂದಿಷ್ಟು ವರ್ಷ ವೃತ್ತಿ ಮೇಳದಿಂದ ನಿವೃತ್ತರಾಗಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದ ಅವರು ಈ ವರ್ಷ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ನಡೆಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!