spot_img
Wednesday, September 23, 2026
spot_img

ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರ ಸಂಘ ಮಹಾಸಭೆ : ಒಂದು ಕೋಟಿ ಲಾಭ: 454 ಕೋಟಿ ವಾರ್ಷಿಕ ವ್ಯವಹಾರ

kundapura: ಅಮವಾಸೆಬೈಲು ವ್ಯವಸಾಯ ಸೆವಾ ಸಹಕಾರ ಸಂಘವು 73 ನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನಿರಂತರ ಪ್ರಗತಿಯನ್ನು ಕಾಣುತ್ತಾ ಬಂದಿದೆ. ಈ ವರ್ಷ 454 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ 1 ಕೋಟಿಗೂ ಮಿಕ್ಕಿ ಲಾಭಗಳಿಸಿದೆ ಎಂದು ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಹೇಳಿದರು.

ಅವರು ಸೆ. 20 ರಂದು ನಡೆದ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸಂಘವು ಸದಸ್ಯರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಕೃಷಿಕರಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾ ಬಂದಿದೆ. ಸದಸ್ಯರು ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಸಂಘದ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದರು.

ಕೃಷಿಕರಿಗೆ ಅಗತ್ಯವಿರುವ ಶೂನ್ಯಬಡ್ಡಿದರ ಸಾಲ, ಕೃಷಿ ಅಭಿವೃದ್ಧಿ ಸಾಲ, ಕೃಷಿಯೇತರ ಸಾಲ, ವಾಹನ ಸಾಲ, ಗೃಹ ನಿರ್ಮಾಣ, ಆಸ್ತಿ ಅಡಮಾನ ಸಾಲ, ಹೈನುಗಾರಿಕೆ ಸಾಲವನ್ನು ನೀಡುತ್ತಿದೆ. ಸದಸ್ಯರು ಈ ಸೌಲಭ್ಯವನ್ನು ಉಪಯೋಗಿಸಿ ಕೊಳ್ಳಬೇಕು ಎಂದರು. ಬೆಳೆ ವಿಮೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿದೆ. 3 ಕೋಟಿಗೂ ಮಿಕ್ಕಿ ಬೆಳೆ ವಿಮೆ ಬಂದಿದೆ. ನಮ್ಮ ಭಾಗದ ಒಬ್ಬ ರೈತರೇ ಐದು ಲಕ್ಷ ಪರಿಹಾರ ಪಡೆದುಕೊಂಡಿದಾರೆ. ಆದ್ದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಮಾರ್ ಭಾಗವತ ವಾರ್ಷಿಕ ವರದಿಯನ್ನು ಮಂಡಿಸಿ ವಿವಿಧ ಆರ್ಥಿಕ ತಖ್ತೆಗಳನ್ನು ಸದಸ್ಯರ ಮುಂದಿಟ್ಟರು. ಸಂಘದಲ್ಲಿ ಎಲ್ಲಾ ವರ್ಗದ ಸದಸ್ಯರು ಸೇರಿ 5267 ಸದಸ್ಯರನ್ನು ಹೊಂದಿದ್ದು, 3.50 ಕೋಟಿಗೂ ಮಿಕ್ಕಿ ಷೇರು ಬಂಡವಾಳವನ್ನು ಹೊಂದಿದೆ. ಠೇವಣಿ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ರೂ.73,64,39591.69 ಠೇವಣಿಯನ್ನು ವರದಿ ವರ್ಷಕ್ಕೆ ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸಹಾಯ ಪಡೆದು, ರೈತರಿಗೆ ರೂ.24,72,53,573 ಸಾಲವನ್ನು ವಿತರಿಸಲಾಗಿದೆ. ರೈತರಿಗೆ 30,61,19,788 ಕೃಷಿ ಸಾಲವನ್ನು ನೀಡಿದ್ದು, ರೂ.58,46,23,465-00 ಕೃಷಿಯೇತರ ಸಾಲವನ್ನು ನೀಡಿ, ಒಟ್ಟು ರೂ. 89,07,43,253 ಸಾಲ ವಿತರಿಸಲಾಗಿದೆ.

ವರದಿ ವರ್ಷಕ್ಕೆ ವಿವಿಧ ಆರ್ಥಿಕ ಸಂಘÀಗಳಲ್ಲಿ ರೂ.21,27,43,740.79 ಹೂಡಿಕೆಗಳನ್ನು ಮಾಡಲಾಗಿದೆ. ರೂ. 1,37,87,400.54 ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದೆ. ರೂ.3,85,10,349.34 ನಿಧಿಗಳನ್ನು ಹೊಂದಿದೆ. ಸಂಘವು ವ್ಯಾಪಾರ ವಹಿವಾಟುವಿನ ಮೂಲಕ ರೂ.9,17,975.71 ಲಾಭ ಗಳಿಸಿದೆ. 2025-26 ನೇ ಆರ್ಥಿಕ ವರ್ಷದಲ್ಲಿ ಸಂಘವು ಪ್ರಥಮ ಬಾರಿಗೆ ರೂ.1,05,03,799.59 ಲಾಭ ಗಳಿಸಿದೆ ಎಂದು ತನ್ನ ಸುದೀರ್ಘ ವರದಿಯಲ್ಲಿ ಸಂಘದ ಕಾರ್ಯ ಸಾಧನೆಗಳನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಸಂಘದ 11 ಜನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ನೆರವೇರಿ ಮಾತನಾಡಿದ ಶಾಸಕರಾದ ಕಿರಣ ಕುಮಾರ್ ಕೊಡ್ಗಿ ಮಾತನಾಡಿ ಸಹಕಾರಿ ಸಂಘಗಳು ಕೇವಲ ಲಾಭ ಮಾಡುವ ಉದ್ದೇಶವನ್ನು ಹೊಂದಿರದೆ ರೈತರ ನೆರವಿಗೆ ಬರಬೇಕು. ಜನರು ಸಹಕಾರಿ ಸಂಘವನ್ನು ಹೆಚ್ಚು ಅವಲಂಬಿಸುತ್ತಾರೆ. ರೈತರಿಗೆ ಶೂನ್ಯ ಬಡ್ಡಿರದಲ್ಲಿ 5 ಲಕ್ಷ, ಕೃಷಿ ಅಭಿವೃದ್ಧಿ ಸಾಲ 15 ಲಕ್ಷ ಸಿಗುವಂತಾಗಬೇಕು. ಸರಕಾರ ಈಗಾಗಲೇ ಘೋಷಣೆ ಮಾಡಿದೆ. ಆದರೆ ಅದಿನ್ನು ರೈತರನ್ನು ತಲುಪಿಲ್ಲ. ಆ ಬಗ್ಗೆ ಪ್ರಯತ್ನ ಮಾಡಬೇಕು ಎಂದು ಹೇಳಿದ ಅವರು ಪಡಿತರ ವಿತರಣೆಯ ಇಕೆವೈಸಿಯನ್ನು ಸಂಘದಲ್ಲೇ ಮಾಡಬೇಕು. ಓಟಿಪಿಗಾಗಿ ಬೇರೆ ಹೋಗುವಂತೆ ಮಾಡಬಾರದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಘವು ಜಾರಿಗೆ ತಂದ ಮರಣ ಪರಿಹಾರ ನಿಧಿ ಯೋಜನೆಯನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.

ಸಂಘ ಉಪಾಧ್ಯಕ್ಷರಾದ ಶೇಖರ ನಾಯ್ಕ್, ನಿರ್ದೇಶಕರಾದ ನಾರಾಯಣ ರಾವ್, ಎಸ್. ಮಂಜಯ್ಯ ಶೆಟ್ಟಿ, ನರಸಿಂಹ ಶೆಟ್ಟಿ, ಸತೀಶ್ ಹೆಗ್ಡೆ, ಗೋಪಾಲ ಪೂಜಾರಿ, ತಿಮ್ಮಪ್ಪ, ದಿನೇಶ್ ಶೆಟ್ಟಿಗಾರ್, ಅಕ್ಷತ ಕುಮಾರ್, ಶ್ರೀಮತಿ ಸುಜಯ ಹೆಗ್ಡೆ, ಶ್ರೀಮತಿ ರಾಧಿಕಾ ಪ್ರವೀಣ ಕುಮಾರ್ ಬಿ., ಸಹ ನಿರ್ದೇಶಕರಾದ ರಘುಪತಿ ರಾವ್, ನಾಗರಾಜ್ ಪೂಜಾರಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಸತೀಶ್ ಹೆಗ್ಡೆ ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕ ನಾರಾಯಣ ರಾವ್ ವಂದಿಸಿದರು.
ಸಿಬ್ಬಂದಿಗಳಾದ ಪ್ರಕಾಶ್, ವಿಜಯ ಕುಲಾಲ್, ದೇವೇಂದ್ರ ಶೆಟ್ಟಿ, ಸುರೇಖಾ ಭರತ್ ಕುಮಾರ್ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!