spot_img
Saturday, November 7, 2026
spot_img

ವಂಡ್ಸೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ: ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ, ವಿಶ್ವಾಸ ಕಳೆದುಕೊಳ್ಳುವಂತೆ ಮಾಡಬೇಡಿ-ಅಧಿಕಾರಿಗಳಿಗೆ ಶಾಸಕ ಗುರುರಾಜ ಗಂಟಿಹೊಳೆ ಕಿವಿಮಾತು

ವಂಡ್ಸೆ: ಅಧಿಕಾರಿಗಳೇ ಜನಸಾಮಾನ್ಯರ ಬಳಿಗೆ ಬಂದು ಆಹವಾಲು ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ಒದಗಿಸುವ ಒಳ್ಳೆಯ ಕಲ್ಪನೆ ಇದು. ಇದರ ಉಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು. ಜನಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳು ತಾಳ್ಮೆಯಿಂದ ಆಲಿಸಿ, ಪರಿಹಾರದ ಮಾರ್ಗೋಪಾಯಗಳನ್ನು ಸೂಚಿಸಬೇಕು. ಜನಸಾಮಾನ್ಯರ ಸಮಸ್ಯೆಗಳು ಪರಿಹಾರವಾಗುವುದು ಮುಖ್ಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ಶನಿವಾರ ಪ್ರಜಾಸೇವೆ ಇಲಾಖೆ, ತಾಲೂಕು ಆಡಳಿತ ಕುಂದಾಪುರ ತಾಲೂಕು, ವಂಡ್ಸೆ ಹೋಬಳಿಯ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅಧಿಕಾರಿಗಳು ಅರ್ಜಿದಾರರ ಅಹವಾಲುಗಳನ್ನು ಅವರಲ್ಲಿಯೇ ಕೇಳಿ ತಕ್ಷಣಕ್ಕೆ ಪರಿಹರಿಸಬಹುದಾದರೆ ಪರಿಹರಿಸಬೇಕು, ತಕ್ಷಣಕ್ಕೆ ಆಗದಿದ್ದರೆ ಅವರಿಗೆ ಅದನ್ನು ಅರ್ಥ ಮಾಡಿಸಿ ಹೇಳಬೇಕು. ಒಟ್ಟಾರೆಯಾಗಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಂತೂ ಇದ್ದೇ ಇರುತ್ತದೆ. ಜನಸಾಮಾನ್ಯರು ವ್ಯವಸ್ಥೆ ಬಗ್ಗೆ ವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ತಲ್ಲೂರು ಪ್ರಜಾಸೇವಾ ಆಂದೋಲನದಲ್ಲಿ 396 ಅರ್ಜಿ, ತ್ರಾಸಿಯಲ್ಲಿ 146ಅರ್ಜಿ ಸ್ವೀಕರಿಸಲಾಗಿದೆ. ಪ್ರತಿಯೊಂದು ಅರ್ಜಿಯನ್ನು ರಾಜ್ಯಮಟ್ಟದಲ್ಲಿಯೂ ಪರಿಶೀಲನೆ ಮಾಡಲಾಗುತ್ತದೆ ಎಂದರು.

ಮುಖ್ಯವಾಗಿ ೯೪ಸಿ, ಕುಮ್ಕಿ ಹಕ್ಕು, ಕುಡಿಯುವ ನೀರು, ಪಡಿತರ ಚೀಟಿ ಇತ್ಯಾದಿ ವಿಷಯಗಳ ಬಗ್ಗೆಯೇ ಹೆಚ್ಚು ಅರ್ಜಿಗಳು ಬರುತ್ತವೆ. ಕುಮ್ಕಿ ಹಕ್ಕಿನ ವಿಚಾರದಲ್ಲಿ ಸರಕಾರ ಒಪ್ಪದಿದ್ದರೂ ನಾವಂತೂ ಬದ್ದರಿದ್ದೇವೆ. ಕುಮ್ಕಿ ಹಕ್ಕು ರೈತರ ಹಕ್ಕು. ಇಂದಲ್ಲದಿದ್ದರೂ ಮುಂದಾದರೂ ಅದು ರೈತರಿಗೆ ಸಿಗುತ್ತದೆ. ಅರಣ್ಯ ಇಲಾಖೆಯಾಗಲಿ, ಕಂದಾಯ ಇಲಾಖೆ ಆಗಲಿ ಯಾರನ್ನೂ ಕೂಡಾ ಎಬ್ಬಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಪ್ರದೀಪ್ ಹುರ್ಡೇಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಾರ್ವಜನಿಕರು ಕಛೇರಿಗಳಿಗೆ ಅಲೆದಾಡುವುದು ತಪ್ಪಿಸುವುದು, ಪ್ರಜಾಸೇವೆ ವ್ಯಾಪ್ಯಿಯ ಇಲಾಖೆಗಳು ಗ್ರಾಮಕ್ಕೆ ಬಂದು ಸಾರ್ವಜನಿಕರ ಅರ್ಜಿ ಸ್ವೀಕರಿಸಿ ಅದಕ್ಕೆ ಪರಿಹಾರ ಅಥವಾ ಸೂಕ್ತ ಕಾರಣ ನೀಡಲಾಗುತ್ತದೆ. ಇದು ವಂಡ್ಸೆ ಹೋಬಳಿ ವ್ಯಾಪ್ತಿಯ ಮೂರನೇ ಸಭೆಯಾಗಿದ್ದು ತಲ್ಲೂರು ಗ್ರಾ.ಪಂ ಮಟ್ಟದಲ್ಲಿ ನಡೆದ ಸಭೆಯಲ್ಲಿ 396 ಅರ್ಜಿ ಗರಿಷ್ಠ ಸಂಖ್ಯೆಯಲ್ಲಿ ಸ್ವೀಕೃತವಾಗಿದೆ ಎಂದರು.

ಸಭೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ ಜಿ., ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಮೆಸ್ಕಾಂನ ಹರೀಶ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಂಡ್ಸೆ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪ ತಹಶೀಲ್ದಾರ್ ಎಸ್.ವಿ ವಿನಯ್ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಶಂಕರ ಆಚಾರ್ಯ ವಂದಿಸಿದರು. ಕಂದಾಯ ನಿರೀಕ್ಷಕ ರಾಘವೇಂದ್ರ ಡಿ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಯಲ್ಲಿ 183 ಅರ್ಜಿಗಳು ಸ್ವೀಕರಿಸಲಾಯಿತು.

ಶಾಸಕರು ಹಾಗೂ ಅಧಿಕಾರಿಗಳು ಪ್ರತಿಯೋರ್ವ ಅರ್ಜಿದಾರ ಸಮಸ್ಯೆಯನ್ನು ಆಲಿಸಿ ಅರ್ಜಿ ಸ್ವೀಕರಿಸಲಾಯಿತು. ಮುಖ್ಯವಾಗಿ 94ಸಿ, ಕುಡಿಯುವ ನೀರು, ರಸ್ತೆ, ಪಡಿತರ ಚೀಟಿ ಸಹಿತ ವಿವಿಧ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳನ್ನು ಸ್ವೀಕರಿಸಲಾಯಿತು. ಪ್ರಮುಖ ಬೇಡಿಕೆಗಳನ್ನು ಶಾಸಕರ ಗಮನ ಸಳೆಯಲಾಯಿತು. ವಂಡ್ಸೆಯ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಹಂಪ್ ಅಳವಡಿಕೆಯ ಬಗ್ಗೆ ಸಾರ್ವಜನಿಕರು ಗಮನ ಸಳೆದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!