spot_img
Saturday, August 8, 2026
spot_img

ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಮಿತ 94 ಲಕ್ಷ ನಿವ್ವಳ ಲಾಭ| ಇನ್ನಷ್ಟು ರೈತಸ್ನೇಹಿ ಯೋಜನೆಗಳಿಗೆ ಚಿಂತನೆ -ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಕುಂದಾಪುರ: ರೈತರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 1959ರಲ್ಲಿ ಹಿರಿಯ ಸಹಕಾರಿಗಳ ನೇತೃತ್ವದಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಮಿತ ಯಶಸ್ವಿಯಾಗಿ ಮುನ್ನೆಡೆಯುತ್ತಾ ಬಂದಿದೆ. ಮೂಲ ಉದ್ದೇಶಗಳಿಗೆ ಒತ್ತು ನೀಡುತ್ತ ಬಂದಿರುವ ಸಂಸ್ಥೆ 2010 ಬ್ಯಾಂಕಿಂಗ್ ವಿಭಾಗ ಆರಂಭಿಸಿ ಕೇಂದ್ರ ಕಛೇರಿಯಲ್ಲಿ ಸೇವೆ ನೀಡುತ್ತಿದೆ. ಬೈಂದೂರು, ಸಿದ್ಧಾಪುರ ಒಟ್ಟು ಮೂರು ಶಾಖೆಗಳ ಮೂಲಕ ಸೇವೆ ನೀಡುತ್ತಿದೆ. ಪಡಿತರ ಹಂಚಿಕೆಯ ಜೊತೆಯಲ್ಲಿ ರಸಗೊಬ್ಬರ, ಕೀಟನಾಶಕ ರೈತರ ವಿತರಿಸುವುದರೊಂದಿಗೆ ಬೇರೆ ಬೇರೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾದ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಅವರು ಕುಂದಾಪುರದ ಬಂಟರ ಸಂಕೀರ್ಣದ ಜಿ.ಕುಶಲ ಹೆಗ್ಡೆ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಮಿತ ಇದರ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರದಿ ವರ್ಷದಲ್ಲಿ ಒಟ್ಟು 5659 ಸದಸ್ಯರಿದ್ದು, ಒಟ್ಟು ರೂ.27,15,306 ಪಾಲು ಬಂಡವಾಳವನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ರೂ.30,42,29,238.50 ಠೇವಣಾತಿಗಳನ್ನು ಹೊಂದಿದೆ. ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ರೂ.25,60,85,738 ಸಾಲ ನೀಡಲಾಗಿದೆ. ವರದಿ ವರ್ಷದ ಅಂತ್ಯಕ್ಕೆ ರೂ.94.80.429.77 ನಿವ್ವಳ ಲಾಭ ಗಳಿಸಿದೆ ಎಂದರು.

2025-26ನೇ ಸಾಲಿನಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಒಟ್ಟು ರೂ.11,75,49,712.76 ವಿನಿಯೋಗಿಸಲಾಗಿದೆ. ಸಂಘದಲ್ಲಿ ಒಟ್ಟು 7 ಗೋದಾಮುಗಳಿದ್ದು, ಒಟ್ಟು 2250 ಎಂ.ಟಿ ಸಾಮಥ್ರ್ಯ ಹೊಂದಿದೆ. ಇದರಲ್ಲಿ 5 ಗೋದಾಮುಗಳನ್ನು ಪಡಿತರ ಆಹಾರ ಸಾಮಾಗ್ರಿಗಳ ಶೇಖರಣೆಗಾಗಿ ಉಪಯೋಗಿಸಲಾಗುತ್ತಿದೆ. ಸಂಘವು ಒಟ್ಟು 3.74.5 ಎಕ್ರೆ ಸ್ಥಿರಾಸ್ಥಿಯನ್ನು ಹೊಂದಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ನಿರ್ದೇಶಕರಾದ ಎಂ.ಮೋಹನದಾಸ ಶೆಟ್ಟಿ ಮಲ್ಯಾಡಿ, ಆನಂದ ಬಿಲ್ಲವ ಉಪ್ಪಿನಕುದ್ರು, ಎಸ್.ಜಯರಾಮ ಶೆಟ್ಟಿ ಬೆಳ್ವೆ, ಪ್ರಭಾಕರ ಶೆಟ್ಟಿ ಜಡ್ಕಲ್, ಉಮೇಶ ಶೆಟ್ಟಿ ಕಲ್ಗದ್ದೆ, ಸದಾನಂದ ಮೊಗವೀರ ಕಾವ್ರಾಡಿ, ಎ.ಕಿರಣ್ ಹೆಗ್ಡೆ ಅಂಪಾರು, ಪ್ರಭಾಕರ ಶೆಟ್ಟಿ ಕೆರಾಡಿ, ಸತೀಶ ಶೆಟ್ಟಿ ಕೆ.ಕುಂದಾಪುರ, ರಕ್ಷಿತ್ ಶೆಟ್ಟಿ ಕೆ.ಕಾಳಾವರ, ಕೆ.ವಿಜಯ ಕುಮಾರ ಕಾವ್ರಾಡಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎಂ.ಮಹೇಶ್ ಹೆಗ್ಡೆ ಮೊಳಹಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಸಿಬ್ಬಂದಿ ರತ್ನ ಪ್ರಾರ್ಥನೆ ನೆರವೇರಿಸಿದರು. ದೀಪ ಪ್ರಜ್ವಲನೆ ಮಾಡುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸದಸ್ಯರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಪ್ರದೀಪ ಕುಮಾರ್ ಶೆಟ್ಟಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ, ಅಂದಾಜು ಅಯ-ವ್ಯಯ ಪಟ್ಟಿಯ ಪರಿಶೀಲನೆ ಮತ್ತು ಅಂಗೀಕಾರ, ಸಾಮಾನ್ಯ ಸಭೆಯ ನಿರ್ಣಯ ವಾಚಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!