spot_img
Friday, August 7, 2026
spot_img

ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರಯುತ ಮೌಲ್ಯ ಅಳವಡಿಸಿಕೊಳ್ಳಿ : ಉದಯ ನಾಯ್ಕ 

kundapura: ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ, ಅರೆಶಿರೂರಿನಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆ ನಡೆಯಿತು.
ಪ್ರೌಢಶಾಲಾ ಹಂತದಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಕಲಿಕಾಸಕ್ತಿಯನ್ನು ಬೆಳೆಸಲು ಶಿಕ್ಷಕರೊಂದಿಗೆ ವಿದ್ಯಾರ್ಥಿ ಪೋಷಕರ ಸಹಕಾರವು ಅತ್ಯಂತ ಅಗತ್ಯ. ಸಾಧಕರ ಜೀವನದ ಯಶೋಗಾಥೆಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನಲ್ಲಿ ಅಳವಡಿಸಿಕೊಂಡು ಸತ್ಪಪ್ರಜೆಗಳಾಗಿ ರೂಪುಗೊಳ್ಳಬೆಕೆಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನತಾ ಪದವಿ ಪೂರ್ವ ಕಾಲೇಜು, ಹೆಮ್ಮಾಡಿ ಇಲ್ಲಿನ ಉಪನ್ಯಾಸಕರಾದ  ಉದಯ ನಾಯ್ಕ ಇವರು ಹೇಳಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ದಾಸರಾಗದಂತೆ ತಡೆಯುವುದು ಪೋಷಕರು ಮತ್ತು ಶಿಕ್ಷಕರ ಜವಬ್ದಾರಿಯಾಗಿದೆ. ಶಾಲೆಯಲ್ಲಿ ಶಿಕ್ಷಕರು ನೀಡುವ ಮಾರ್ಗದರ್ಶನದ ಜೊತೆಗೆ ಮನೆಯಲ್ಲಿಯೂ ಮಕ್ಕಳ ಅಭ್ಯಾಸ ಮತ್ತು ನಡವಳಿಕೆಯ ಮೇಲೆ ಪೋಷಕರು ನಿಗಾವಹಿಸಬೇಕು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಿಂದ ಶಾಲಾ ಆಡಳಿತ ಮಂಡಳಿಯವರು ಉಚಿತವಾಗಿ ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಅಧ್ಯಯನ ಮಾಡಿ ಅತೀ ಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತರಬೇಕೆಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ದಿನಕರ ನಾಯ್ಕ ಬಿ. ಇವರು ಹೇಳಿದರು.
ಪೋಷಕರ ಸಭೆಯಲ್ಲಿ ಸುಮಾರು ೨೫೦ ಪೋಷಕರು ಭಾಗವಹಿಸಿದ್ದರು. ಪ್ರಥಮ ರೂಪಣಾತ್ಮಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ಬಾರಿ ಶೇಕಡಾ ೧೦೦ ಫಲಿತಾಂಶ ದಾಖಲಿಸಿರುವುದಕ್ಕಾಗಿ ಪೋಷಕರ ಪರವಾಗಿ ಶ್ರೀಮತಿ ನಾಗರತ್ನ ಇವರು ಶಾಲಾ ಶಿಕ್ಷಕ ವೃಂದದವರಿಗೆ ಅಭಿನಂದನೆ ಸಲ್ಲಿಸಿದರು.
ಶಾಲಾ ಅಧ್ಯಾಪಕರಾದ ರಾಜೀವ ಶೆಟ್ಟಿ,  ಪ್ರಶಾಂತ್ ಶ್ಯಾನುಭಾಗ್,  ರಾಮಚಂದ್ರ ಆರ್.ವಿ.,  ಆಶಾಲತಾ,  ಸುಮಿತ್ರಾ ಹಾಗೂ ಸಿಬ್ಬಂದಿಗಳಾದ ಮೋಹನ, ಮಾಲತಿ ಉಪಸ್ಥಿತರಿದ್ದರು.  ಉದಯ ನಾಯ್ಕ ನಿರೂಪಿಸಿ,  ಭಾಸ್ಕರ್ ಭಟ್ ಸ್ವಾಗತಿಸಿ,  ರತ್ನಾಕರ ದೇವಾಡಿಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!