spot_img
Monday, March 30, 2026
spot_img

ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕ ಕೋ.ಶಿವಾನಂದ ಕಾರಂತ ನಿಧನ

ಕುಂದಾಪುರ: ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕ, ಅಂಕಣಕಾರ ಕೋ.ಶಿವಾನಂದ ಕಾರಂತ (೮೦ವ) ಫೆ.೧೧ ಬುಧವಾರ ನಿಧನರಾದರು.

ವೆಂಕಟ ಸೀತಾರಾಮ ಕಾರಂತ ಮತ್ತು ಲಕ್ಷ್ಮೀ ದೇವಿ ದಂಪತಿಗಳ ಪುತ್ರರಾಗಿ ಆಗಸ್ಟ್ ೩೧-೧೯೪೬ರಂದು ಜನಿಸಿದ ಇವರು ಬಿ.ಆರ್.ಹಿಂದೂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ, ಭಂಡಾರ್ಕಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಧಾರವಾಡದ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಗಂಗೊಳ್ಳಿ ಎಸ್.ವಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಭಾಷಣ, ನಾಟಕ ನಿರ್ದೇಶನ, ಅಭಿನಯ, ಅಂಕಣ ಬರಹ, ಕಥೆ ರಚನೆಯಲ್ಲಿ ತೊಡಗಿಸಿಕೊಂಡು ಪ್ರಸಿದ್ಧ ಸಾಹಿತಿಯಾಗಿ, ಮೂರು ದಶಕಗಳಿಂದ ಅಂಕಣ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಆಕಾಶವಾಣಿಯ ಚಿಂತನ, ಸಂಪನ್ಮೂಲ ವ್ಯಕ್ತಿಯಾಗಿದ್ದರು.

10 ಕಥೆಗಳು, ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನಂದ, ಸಂಜೆಗತ್ತಲಲ್ಲಿ ಬಕುಳ ವೃಕ್ಷ, ಕಲ್ಪನೆಯ ಕಡಲು, ಹಳೆತಲೆಮಾರಿನವರು ಇವರ ಪ್ರಕಟಿತ ಕೃತಿಗಳು.

ಮೃತರು  ಪತ್ನಿ ಕುಸುಮಾ ಕಾರಂತ, ಪುತ್ರಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!