spot_img
Friday, February 13, 2026
spot_img

ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮ ಸ್ವರಾಜ್ಯಕ್ಕೆ ಅಘಾತ, ಗ್ರಾ.ಪಂ.ಚುನಾವಣೆ ಮುಂದೂಡಿ ಆಡಳಿತಾಧಿಕಾರಿ ನೇಮಕ-ಸಂವಿಧಾನ ಹಾಗೂ ಕಾನೂನು ಉಲ್ಲಂಘನೆ-ಉದಯ ಕುಮಾರ್ ಶೆಟ್ಟಿ

ವಿಬಿಜಿ-ರಾಮ್-ಜಿ ಕಾಯಿದೆಯಿಂದ ಸ್ಥಳೀಯ ಸರ್ಕಾರಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಅಂಶಗಳನ್ನು ಹಿಂಪಡೆಯಲು ಆಗ್ರಹ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಗ್ರಾಮ ಪಂಚಾಯತ್ ಅಧಿಕಾರವಧಿ ಮುಗಿಯುತ್ತಿದ್ದರೂ ಚುನಾವಣೆ ಮುಂದೂಡಿ ಆಡಳಿತಾಧಿಕಾರಿ ನೇಮಕ ಮಾಡಲು ಮುಂದಾಗಿರುವುದು ಹಾಗೂ ಎಂ.ಜಿ.ಎನ್.ಆರ್.ಇ.ಜಿ.ಎ ರದ್ದುಗೊಳಿಸಿ ವಿಬಿಜಿ-ರಾಮ್-ಜಿ ಜಾರಿ ಮೂಲಕ ಸಂವಿಧಾನ ಮತ್ತು ಕಾನೂನು ಉಲ್ಲಂಘನೆಯಾಗುತ್ತಿದೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮ ಸ್ವರಾಜ್ಯದ ಮೇಲೆ ಆಗುತ್ತಿರುವ ಅಘಾತವಾಗಿದ. ಇದು ಗ್ರಾಮಸಭೆ ಹಾಗೂ ಗ್ರಾಮ ಪಂಚಾಯತ್‍ಗಳ ಸಂವಿಧಾನಾತ್ಮಕ ಅಧಿಕಾರವನ್ನು ನೇರವಾಗಿ ಕುಂದಿಸುವ ಎರಡು ಗಂಭೀರ ಬೆಳವಣಿಗಳು ತೀವ್ರ ಆತಂಕಕಾರಿಯಾಗಿದ್ದು ಪಂಚಾಯತ್ ರಾಜ್ ಒಕ್ಕೂಟ ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.

ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಯಾವುದೇ ಕಾರಣವಿಲ್ಲದೆ ರಾಜ್ಯ ಸರ್ಕಾರವು ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿ ಆಡಳಿತಾಧಿಕಾರಿ ನೇಮಕ ಮಾಡಿದೆ. ರಾಜ್ಯ ಸರ್ಕಾರದ ಕ್ರಮ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ8ರ ಉಲ್ಲಂಘನೆಯಾಗಿದೆ. ಆಡಳಿತಾಧಿಕಾರಿ ಹಾಗೂ ಆಡಳಿತ ಸಮಿತಿ ನೇಮಕವು ಗ್ರಾಮ ಪಂಚಾಯತ್ ಸ್ಥಾಪನೆಯಾದ ತರುವಾಯ ಕೂಡಲೇ ಯಾವುದೋ ಕಾರಣದಿಂದಾಗಿ ಪಂಚಾಯತ್ ಅನ್ನು ರಚಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ. ಅಸ್ತಿತ್ವದಲ್ಲಿರುವ ಚುನಾಯಿತ ಪಂಚಾಯತ್‍ಗಳಿಗೆ ಅಲ್ಲ ಎಂದರು.

ಭಾರತೀಯ ಸಂವಿಧಾನದ ವಿಧಿ 243ಇ ಪಂಚಾಯತ್‍ಗಳ ಅವಧಿಯನ್ನು ಅತ್ಯಂತ ಸ್ಪಷ್ಟವಾಗಿ ನಿರ್ಧರಿಸಿದ್ದು ಪ್ರತಿಯೊಂದು ಪಂಚಾಯಿತಿಗೂ ಐದು ವರ್ಷಗಳ ಅವಧಿ ಮಾತ್ರ. ಪಂಚಾಯತ್ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಪ್ರಾಥಮಿಕ ಕರ್ತವ್ಯ. ಅದಕ್ಕೆ ಅಗತ್ಯವಿರುವ ಎಲ್ಲಾ ಪ್ರಕಿಯೆ ನಡೆಸಲು ವಿಫಲವಾದುದಕ್ಕೆ ಪರಿಹಾರವಾಗಿ ಆಡಳಿತಾಧಿಕಾರಿ ನೇಮಕ ಮಾಡುವುದು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದ ಎಂದರು.

ಆಡಳಿತಾಧಿಕಾರಿ ನೇಮಕದಿಂದ 15ನೇ ಹಣಕಾಸು ಆಯೋಗದ ಅನುದಾನ ಕಡಿತವಾಗಲಿದೆ. ಇಷ್ಟರ ತನಕ 15ನೇ ಹಣಕಾಸು ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಆಯ್ಕೆಯಾದ ಜನಪ್ರತಿನಿಧಿ ಸಂಸ್ಥೆ ಇಲ್ಲದ ಗ್ರಾಮ ಪಂಚಾಯತ್‍ಗಳಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವುದಿಲ್ಲ. ಮಾರ್ಚ್ ಅಂತ್ಯದೊಳಗೆ ಚುನಾವಣೆ ನಡೆಸದಿದ್ದರೆ ಗ್ರಾಮ ಪಂಚಾಯತ್‍ಗಳು 15ನೇ ಹಣಕಾಸು ಅನುದಾನದಿಂದ ವಂಚಿತವಾಗಲಿವೆ ಎಂದರು.

ಕೇಂದ್ರ ಸರ್ಕಾರ ಎಂ.ಜಿ.ಎನ್.ಆರ್.ಇ.ಜಿ.ಎ ರದ್ದುಗೊಳಿಸಿ ವಿಬಿಜಿ-ರಾಮ್-ಜಿ ಜಾರಿ ಮಾಡಿರುವುದರಿಂದ ಗ್ರಾಮ ಸಭೆಯ ಅಧಿಕಾರವನ್ನು ದುರ್ಬಲಗೊಳಿಸಿ, ಗ್ರಾಮ ಸ್ವರಾಜ್ಯದ ತಳಹದಿಯನ್ನೇ ಬುಡಮೇಲು ಮಾಡುವ ಕೆಲವು ಅಂಶಗಳನ್ನು ಒಳಗೊಂಡಿದೆ. ಯೋಜನೆಯ ಹೆಸರು ಬದಲಾವಣೆ ಮಾಡಿದ ಬಗ್ಗೆ ನಮ್ಮ ಆಕ್ಷೇಪವಿಲ್ಲ, ಗ್ರಾಮ ಸ್ವರಾಜ್ಯ ಕಾಯ್ದೆಯ ಆಶಯವೇ ಹೊಸ ಕಾಯಿದೆಯಲ್ಲಿ ದುರ್ಬಲಗೊಳ್ಳಲಿದೆ. ಇದರಲ್ಲಿನ ನ್ಯೂನತೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು, ಸ್ಥಳೀಯ ಸರ್ಕಾರಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಅಂಶಗಳನ್ನು ಕಾಯಿದೆಯಿಂದ ತಕ್ಷಣವೇ ಹಿಂಪಡೆಯಬೇಕು ಎಂದರು.

ಗ್ರಾಮ ಸ್ವರಾಜ್ಯವನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಅಂದೋಲನ ಮತ್ತು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಒಪ್ಪಿಕೊಳ್ಳುವುದಿಲ್ಲ, ಇದು ಪ್ರಜಾಪ್ರಭುತ್ವದ ಬೇರುಗಳ ರಕ್ಷಣೆಯ ಪ್ರಶ್ನೆಯಾಗಿದೆ ಎಂದರು.

ದಿ ಕನ್ಸನ್ರ್ಸ ಫಾರ್ ವರ್ಕಿಂಗ್ ಚಿಲ್ಡ್ರನ್ ಇದರ ಸಹನಿರ್ದೇಶಕರು, ಗ್ರಾ.ಪಂ.ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯ ಸದಸ್ಯರಾದ ಕೃಪಾ ಎಂ.ಎಂ ಮಾತನಾಡಿ, ವಿಬಿಜಿ-ರಾಮ್-ಜಿ ಕಾಯಿದೆಯಿಂದ ಸ್ವರಾಜ್ಯ ಕಾಯ್ದೆಯ ಆಶಯಗಳು ದುರ್ಬಲಗೊಳ್ಳುವ ಅಪಾಯವಿದೆ. ವಿಕಸಿತ ಭಾರತ ರಾಷ್ಟ್ರೀಯ ಗಾಮೀಣ ಮೂಲಸೌಕರ್ಯ ಸ್ಪ್ಯಾಕ್ ಮಾರ್ಗದರ್ಶನದಂತೆ ಗ್ರಾಮ ಪಂಚಾಯತ್ ಯೋಜನೆ ರೂಪಿಸಬೇಕು, ಅದಕ್ಕೆ ಗ್ರಾಮಸಭಾದಿಂದ ಒಪ್ಪಿಗೆ ಪಡೆಯಬೇಕು ಎಂದಿದ. ಇದು ಗ್ರಾಮಸಭಾದ ಹಕ್ಕಿಗೆ ಷರತ್ತುಬದ್ದ ಕಡಿವಾಣ ಹಾಕಿದಂತಾಗಿದೆ. ಇದರಿಂದ ಪಂಚಾಯತ್ ರಾಜ್ ಸಂಸ್ಥೆಗಳ ಸ್ವಾಯತ್ತತೆ ಕುಗ್ಗಿ, ಕೆಳಮಟ್ಟದಿಂದ ಮೇಲ್ಮಟ್ಟದ ವಿಕೇಂದ್ರೀಕೃತ ಯೋಜನಾ ಪ್ರಕ್ರಿಯೆ ದುರ್ಬಲಗೊಳ್ಳುತ್ತದೆ. ಅಷ್ಟು ಮಾತ್ರವಲ್ಲದ ಎ.ಐ ಬಳಕೆಯ ಬಗ್ಗೆಯೂ ಉಲ್ಲೇಖವಿದ್ದು ವಿಕಸಿತ ಭಾರತ@2047 ಎಂಬ ದೃಷ್ಟಿಕೋನಕ್ಕೆ ಹೊಂದಿಕೊಂಡಿರುವ ವಿವಿಧ ಇಲಾಖೆ, ಯೋಜನೆಗಳ ಸಮನ್ವಯ ಆಧಾರಿತ. ಭವಿಷ್ಯಕ್ಕೆ ಸಿದ್ಧವಾದ ಸ್ಥಳೀಯ ಅಭೀವೃದ್ಧಿ ಯೋಜನೆ. ವಿಕಸಿತ ಗ್ರಾಮ ಪಂಚಾಯತ್‍ಗಳು ಜಿಐಎಸ್ ಆಧಾರಿತ ಸಾಧನಗಳು, ಪಿಎಂ ಗತಿ ಶಕ್ತಿ ಲೇಯರ್‍ಗಳು ಹಾಗೂ ಇತರ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳನ್ನು ಬಳಸಿಕೊಂಡು ಗ್ರಾಮ ಪಂಚಾಯತ್‍ಗಳಿಂದ ತಯಾರಿಸಲ್ಪಡಬೇಕು ಮತ್ತು ಅನುಮೋದನೆಗಾಗಿ ಗ್ರಾಮಸಭೆಯ ಮುಂದೆ ಮಂಡಿಸಬೇಕು, ಇವೆಲ್ಲವೂ ಗ್ರಾಮದ ಅಗತ್ಯಕ್ಕೆ ಅನುಗುಣವಾಗಿ ರೂಪಿಸುವ ಯೋಜನೆಯ ಪರಿಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ ಎಂದರು.

ಹೊಸ ಕಾಯಿದೆ ಉದ್ಯೋಗ ಭರವಸೆಯನ್ನು ತಲೆಕೆಳಗಾಗಿಸುವ ಸಾಧ್ಯತೆಗಳಿವೆ. ಅಂಗವಿಕಲತೆ ಇರುವವರು, ವೃದ್ಧರಿಗೆ ಸಿಗಬೇಕಾದ ಆದಾಯ ಭದ್ರತೆಗೆ ಕತ್ತರಿ ಹಾಕುತ್ತದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ವಂಡ್ಸೆ ವಲಯ ಸಂಚಾಲಕ ಕಿರಣ್ ಹೆಗ್ಡೆ, ಕುಂದಾಪುರ ವಲಯ ಸಂಚಾಲಕ ವಕ್ವಾಡಿ ರಮೇಶ ಶೆಟ್ಟಿ ಉಪಸ್ಥಿತರಿದ್ದರು,

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!