spot_img
Saturday, March 28, 2026
spot_img

ಫೆ.19ರಿಂದ 21: ಮುನಿಯಾಲು ಸಂಜೀವಿನಿ ಗೋದಾಮದ ನಾಗಬನದಲ್ಲಿ ಸಾಂಪ್ರಾದಾಯಿಕ ದೊಂದಿ ಬೆಳಕಿನ ಶ್ರೀಮನ್ನಾಗಮಂಡಲ

ಹೆಬ್ರಿ : ಹೆಬ್ರಿ ತಾಲೂಕು ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ ಹಿಂದೆ ನಡೆಯುತ್ತಿದ್ದ ಸಾಂಪ್ರಾದಾಯಿಕ ಪರಂಪರೆಯ ದೊಂದಿ ಬೆಳಕಿನಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ ಫೆ.೧೯ ರಿಂದ ಫೆ.೨೧ರವರೆಗೆ ನಡೆಸಲು ನಿಶ್ಚಯಿಸಲಾಗಿದೆ. ಈ ಅಪರೂಪದ ನಾಗಮಂಡಲದ ಸಂದರ್ಭದಲ್ಲಿ ಕೃಷಿಕ್ಷೇತ್ರವನ್ನು ಉತ್ತೇಜಿಸುವ ಸಲುವಾಗಿ ಸಾಧಕರ ರೈತರೋರ್ವರಿಗೆ ರೈತಪೀಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಗೋಧಾಮ ಪ್ರವರ್ತಕ ಡಾ.| ಜಿ. ರಾಮಕೃಷ್ಣ ಆಚಾರ್ ಹೇಳಿದರು.

ಅವರು ಫೆ.9ರಂದು ಗೋಧಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶ್ರೀಮತಿ ಸವಿತಾ ಆರ್. ಆಚಾರ್ ಹಾಗೂ ಡಾ. ಜಿ. ರಾಮಕೃಷ್ಣ ಆಚಾರ್, ಶ್ರೀಮತಿ ಅನುಷಾ ಆಚಾರ್, ಪ್ರಜ್ವಲ್ ಆಚಾರ್, ಶ್ರೀಮತಿ ಪೂಜಾ ಆಚಾರ್-ತೇಜಸ್ ಆಚಾರ್, ರಕ್ಷಿತ್ ಆಚಾರ್ ಹಾಗೂ ಕುಟುಂಬದ ಆಶ್ರಯದಲ್ಲಿ ‘ಏಕಪವಿತ್ರ ಶ್ರೀಮನ್ನಾಗಮಂಡಲ, ಪ್ರಕೃತಿಯಿಂದ ಪ್ರಕೃತಿಗೆ’ ಎಂಬ ಧಾರ್ಮಿಕ ಸೇವೆ ನಡೆಯಲಿದೆ ಎಂದರು.

ಫೆ. ೧೯ರಂದು ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿದೆ, ಫೆ.೨೦ರಂದು ಕೃಷಿ ಮಂಡಲ ಕಾರ್ಯಕ್ರಮ ನಡೆಯಲಿದೆ. ಕರಾವಳಿಯ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆ, ಯುವ ಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆ, ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಾಸಾತಿಯ ಅನುಭವ ಎಂಬ ವಿಷಯಗಳ ಬಗ್ಗೆ ಕೃಷಿ ವಿಚಾರಗೋಷ್ಠಿಗಳು ನಡೆಯಲಿದೆ. ಮಿತ್ತಬಾಗಿಲು ಪದ್ಮಶ್ರೀ ಬಿ.ಕೆ. ದೇವರಾಯರವರಿಗೆ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೊಲ್ಲಾಪುರದ ಸಿದ್ಧಗಿರಿ ಮಠದ ಶ್ರೀ ಅದೃಶ್ಯ ಕಾಳಸಿದ್ದೇಶ್ವರ ಸ್ವಾಮೀಜಿ ಹಾಗೂ ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷಡಾ| ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಈ ಪ್ರಯುಕ್ತ ನಡೆಯುವ ಸಭಾಮಂಡಲದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಉಡುಪಿ ಶ್ರೀ ಅದಮಾರು ಮಠದ ಶ್ರೀ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ನಾಗಮಂಡಲ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸಾಣೂರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್, ಆಧ್ಯಾತ್ಮಿಕ ಚಿಂತಕರಾದ ರೂಪ ಐಯ್ಯರ್, ಆನೆಗುಂದಿ ಮಹಾಸಂಸ್ಥಾನದ ಅಧ್ಯಕ್ಷ ಶ್ರೀಧರ್ ಆಚಾರ್ಯ ಭಾಗವಹಿಸಲಿದ್ದಾರೆ. ಗಾನ ವಲ್ಲರಿ, ಸಂಕೀರ್ತನ ಸುರಭಿ ಕಾರ್ಯಕ್ರಮಗಳು ನಡೆಯಲಿದೆ. ನಾಗಮಂಡಲದಂದು ಸುಮಾರು ೨೫ಸಾವಿರ ಕೃಷಿ ಆಸಕ್ತಿಯುಳ್ಳ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಈ ಸಂದರ್ಭದಲ್ಲಿ ಸಮಗ್ರ ಕೃಷಿ ಅಧ್ಯಯನ ದೃಷ್ಠಿಯಿಂದ ಆರಂಭಿಸಲಾದ ಸಂಜೀವಿನಿ ಗೋಧಾಮ ಮುನಿಯಾಲು ಮತ್ತು ಕೃಷಿ ಕ್ಷೇತ್ರದ ಸಾಧಕ ಡಾ| ಜಿ. ರಾಮಕೃಷ್ಣ ಆಚಾರ್ ಅವರ ಸಾಧನೆಯಲ್ಲಿ ದಾಖಲಿಸಿ ರಚಿಸಿರುವ ಡಾ| ನರೇಂದ್ರ ರೈ ದೇರ್ಲ ಅವರ ಕೃತಿ ರೈತ ಪೀಠ ಇದು ಈನೆಲದ ಜ್ಞಾನಪೀಠ ಲೋಕಾರ್ಪಣೆಗೊಳ್ಳಲಿದೆ ಎಂದರು.

ಸುದ್ಧಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ರಕ್ಷಿತ್ ಆಚಾರ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!