spot_img
Friday, March 27, 2026
spot_img

ಬ್ಲಾಕ್ ಕಾಂಗ್ರೆಸ್ ಕುಂದಾಪುರ: ಅಗಲಿದ ರಾಜು ದೇವಾಡಿಗರಿಗೆ ನುಡಿ ನಮನ

  ಕುಂದಾಪುರ :ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ದೇವಾಡಿಗರು , ಓರ್ವ ಸಜ್ಜನ ರಾಜಕಾರಣಿ , ಸಾಮಾಜಿಕ ನ್ಯಾಯಕ್ಕಾಗಿ ದುಡಿದವರು . ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ , ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದವರು. ಓರ್ವ ಶಾಸಕನಾಗುವ ಎಲ್ಲಾ ಗುಣಗಳನ್ನು ಹೊಂದಿದವರು. ಅವರ ಅಗಲುವಿಕೆ ಸಮಾಜಕ್ಕೆ ಆದ ನಷ್ಟವೆಂದು , ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಹಿರಿಯ ಕಾಂಗ್ರೆಸ್ಸಿಗ ಕೆದೂರು ಸದಾನಂದ ಶೆಟ್ಟಿ ಹೇಳಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜು ದೇವಾಡಿಗ ರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಮೊಳಹಳ್ಳಿ ದಿನೇಶ ಹೆಗ್ಡೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುಮನ , ಸಾಮಾಜಿಕ ಕಾರ್ಯಕರ್ತ ಗುಲ್ವಾಡಿ ಪ್ರಭಾಕರ ಶೆಟ್ಟಿ ಶ್ರದ್ಧಾಂಜಲಿಯ ಮಾತುಗಳನ್ನು ಆಡಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ , ಮಹಿಳಾ ಬ್ಲಾಕ್ ಅಧ್ಯಕ್ಷ ದೇವಕಿ ಸಣ್ಣಯ್ಯ , ಅನಗಳ್ಳಿ ಪಂಚಾಯತ್ ಅಧ್ಯಕ್ಷೆ ಸವಿತಾ , ಕೆ ಡಿ ಪಿ ಸದಸ್ಯರಾದ ರಮೇಶ ಶೆಟ್ಟಿ , ಪಂಚಾಯತ್ ಸದಸ್ಯರಾದ ವಿಜಯಾದರ್ ಕೆವಿ , ಗೀತಾ , ಪುರಸಭಾ ಸದಸ್ಯರಾದ ಶ್ರೀಧರ್ ಶೇರೀಗಾರ್ , ಪ್ರಭಾವತಿ ಶೆಟ್ಟಿ , ಶಶಿ ರಾಜ್ ಪೂಜಾರಿ , ಅಶೋಕ್ ಸುವರ್ಣ , ಸದಾನಂದ ಖಾರ್ವಿ , ಶಶಿಧರ ನಂದಿಬೆಟ್ಟು , ಗ್ಯಾರಂಟಿ ಸಮಿತಿಯ ಸದಸ್ಯರಾದ ಗಣೇಶ್ ವಿ , ಆಶಾ ಕರ್ವಾಲೊ , ಪ್ರಮುಖರಾದ ರೇವತಿ ಶೆಟ್ಟಿ , ರೋಶನ್ ಶೆಟ್ಟಿ , ಸೀಮಾ ಪೂಜಾರಿ , ಅರುಣ್ ಪಟೇಲ್ ,ಕೇಶವ ಭಟ್ , ಸುನಿಲ್ ಪೂಜಾರಿ , ಜೋಸೆಫ್ ರೆಬೆಲ್ಲೊ , ರಿಯಾಜ್ ಕೋಡಿ , ಅಶ್ವತ್ ಕುಮಾರ್ , ಕೆ ರಾಧಾ ಶೆಟ್ಟಿಗಾರ್ , ವಿವೇಕಾನಂದ , ಜೋಯ್ ರೆಬೆಲ್ಲೊ , ಕಾರ್ತಿಕ್ , ವಿನಯ , ಎಡಾಲ್ಫ್ ಡಿಕೊಸ್ಟಾ , ನಿತಿನ್ ಡಿಸೋಜಾ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!