spot_img
Tuesday, November 10, 2026
spot_img

ನ.15ಕ್ಕೆ ಸಿದ್ಧಾಪುರದಲ್ಲಿ ಜನ್ಸಾಲೆ ಯಕ್ಷಪರ್ವ: ಪ್ರಶಸ್ತಿ ಪ್ರದಾನ

ಸಿದ್ದಾಪುರ: ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ರಿ., ಸಿದ್ಧಾಪುರ ಇದರ 4ನೇ ವರ್ಷದ ಜನ್ಸಾಲೆ ಯಕ್ಷಪರ್ವ-2026 ನಂಬರ್ 15 ಭಾನುವಾರ ಮಧ್ಯಾಹ್ನ 2 ರಿಂದ ಸಿದ್ಧಾಪುರದ ರಂಗನಾಥ ಸಭಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಯಕ್ಷ ರಾಘವ ಪ್ರಶಸ್ತಿ, ಕಲಾ ಗೌರವ, ವೈದ್ಯಕೀಯ ನೆರವು, ಗೃಹ ನಿರ್ಮಾಣಕ್ಕೆ ನೆರವು, ಪ್ರತೀಕ್ಷಾ ಪುರಸ್ಕಾರ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದರಬಾದ್ ಹೋಟಲ್ ಉದ್ಯಮಿ ಕೃಷ್ಣಮೂರ್ತಿ ಮಂಜರು ವಹಿಸಲಿದ್ದಾರೆ. ಕಮಲಶಿಲೆ ದೇವಸ್ಥಾನದ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯಕ್ಷಗಾನ ವಿಮರ್ಶಕ ಪ್ರೊ.ಎಸ್.ವಿ ಉದಯಕುಮಾರ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಕಲಾಪೋಷಕರು, ಉದ್ಯಮಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಡಗುತಿಟ್ಟಿನ ಹಿರಿಯ ಚಂಡೆವಾದಕರಾದ ರಾಮಕೃಷ್ಣ ಮಂದಾರ್ತಿ ಅವರಿಗೆ ಯಕ್ಷರಾಘವ ಪ್ರಶಸ್ತಿ, ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಹೆಚ್.ಎಚ್.ಬಲ್ಲಾಳ್ ಅವರಿಗೆ ಕಲಾ ಕಾಮಧೇನು ಪ್ರಶಸ್ತಿ, ಯಕ್ಷಗಾನ ಪ್ರಸಂಗಕರ್ತ ಪ್ರೊ.ಪವನ್ ಕಿರಣಕೆರೆ ಅವರಿಗೆ ಕವಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಈ ಸಂದರ್ಭದಲ್ಲಿ ಉಮೇಶ ಸುವರ್ಣ ಗೋಪಾಡಿ, ಶಿವಶಂಕರ್ ಬಲಿಪ, ಗೋಪಾಲ ಗಾಣಿಗ ಆಜ್ರಿ, ಅಶೋಕ್ ಭಟ್ ಸಿದ್ಧಾಪುರ, ವಿದ್ಯಾಧರ ರಾವ್ ಜಲವಳ್ಳಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ಶಂಕರ್ ಹೆಗಡೆ ನೀಲ್ಕೋಡು ಇವರಿಗೆ ಕಲಾ ಗೌರವ ಸಲ್ಲಿಸಲಾಗುವುದು. ಸುಧಾಕರ ಕೊಠಾರಿ ಯಳಜಿತ್, ನಾಗರಾಜ್ ಯಡಮೊಗೆ, ಕುಮಾರ್ ಅಮೀನ್ ಕೊಕ್ಕರ್ಣೆ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಸತೀಶ್ ಹಾಲಾಡಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು, ನಾಲ್ವರು ಕಲಾವಿದರಿಗೆ ಆರ್ಥಿಕ ನೆರವು ವಿತರಿಸಲಾಗುವುದು. ಸಂಘಟಕರಾದ ಮನೋಜ್ ಭಟ್ ಸಿದ್ಧಾಪುರ, ಗುರುದತ್ತ ಸಾಲಿಗ್ರಾಮ ಅವರಿಗೆ ಸಂಘಟನಾ ಚತುರ ಪ್ರಶಸ್ತಿ ನೀಡಲಾಗುವುದು.

ಮಧ್ಯಾಹ್ನ 2 ಗಂಟೆಯಿಂದ ಯಕ್ಷಕಾವ್ಯ ಯಾನ-ರಾಘವ ನರಪತೇ ನಡೆಯಲಿದೆ. ಸಂಜೆ 6.30ರಿಂದ ಯಕ್ಷಗಾನ ಪ್ರದರ್ಶನ-ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಕಲಾ ತಂಡ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತುಳಸಿ ಜಲಂಧರ, ಗದಾಪರ್ವ ನಡೆಯಲಿದೆ ಎಂದು ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!