spot_img
Tuesday, November 10, 2026
spot_img

ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ: ಕನ್ನಡ ರಾಜ್ಯೋತ್ಸವ ಆಚರಣೆ

ಕುಂದಾಪುರ: ಕನ್ನಡದ ಲೇಖಕಿಯರು ಬೆಳೆಯಬೇಕಾದರೆ ಮೊದಲು ಅವರನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅವರ ಕೃತಿಗಳ ಕುರಿತು ಅವಲೋಕನ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕುಂದಾಪುರದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ’ ಆ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಪ್ರಶಂಸನೀಯ’ ಎಂದು ಖ್ಯಾತ ಲೇಖಕಿ ಮತ್ತು ಭಾಷಣಕಾರ್ತಿ ಡಾ.ರೇಖಾ ಬನ್ನಾಡಿ ಹೇಳಿದರು.

ಅವರು ರೋಟರಿ ಮಿಡ್ ಟೌನ್, ಕುಂದಾಪುರದವರ ಸಹಯೋಗದಲ್ಲಿ ’ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ಯವರು ಹಮ್ಮಿಕೊಂಡ ’ಕನ್ನಡ ರಾಜ್ಯೋತ್ಸವ 26’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ರೋ. ಸಚಿನ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷೆ ಡಾ.ಪಾರ್ವತಿ ಜಿ.ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮತಿ ಶೆಣೈ ಮತ್ತು ವಿಮಲಾ ನಾವಡ ಸುಮನಾ ಹೇರ್ಳೆ ಸಾಹಿತ್ಯಾವಲೋಕನ’ ನಡೆಸಿಕೊಟ್ಟರು. ಕಥೆಗಾರ್ತಿ ಶಾಂತಾ ಸುರೇಶ್ ಹೆಬ್ಬಾರ್ ಮತ್ತು ಕವಯಿತ್ರಿ ಸುಶೀಲಾ ಎಲ್.ಶೆಟ್ಟಿ ಯವರನ್ನು ಸುರಗಂಗಾ ಕನ್ನಡ ರಾಜ್ಯೋತ್ಸವ ಪುರಸ್ಕಾರ’ವನ್ನಿತ್ತು ಸನ್ಮಾನಿಸಲಾಯಿತು. ಸನ್ಮಾನ ಪತ್ರಗಳನ್ನು ಶ್ರೀದೇವಿ ಹಂದೆ ಮತ್ತು ಲೇಖಾ ಹೊಳ್ಳ ವಾಚಿಸಿದರು. ಸುಪ್ರಸನ್ನ ನಕ್ಕತ್ತಾಯರು ರಚಿಸಿದ ಕಲಾಕೃತಿಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಮೂಕಾಂಬಿಕಾ ಉಡುಪ ಮತ್ತು ನಿಮಿತಾ ಶೆಟ್ಟಿಯವರು ಭಾವಗೀತೆಗಳನ್ನು ಹಾಡಿದರು. ವೇದಿಕೆಯು ಏರ್ಪಡಿಸಿದ್ದ ’ಕನ್ನಡ ಕೈಬರಹ ಸ್ಪರ್ಧೆ’ಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಂಗೀತ ವಿದುಷಿ ನಳಿನಿ ವಿ.ರಾವ್ ಮತ್ತು ಬಳಗದವರು ನಾಡಗೀತೆ ಹಾಡಿದರು. ಸುಮಲತಾ ಸುರೇಶ್ ಸ್ವಾಗತಿಸಿದರು. ಜೆಸ್ಸಿ ಎಲಿಜಬೆತ್ ವಂದಿಸಿದರು. ಸುಜಾತಾ ರಮೇಶ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಸುಪ್ರೀತಾ ಪುರಾಣಿಕ್-ಮಹಾಲಕ್ಷ್ಮಿ ಸೋಮಯಾಜಿ ಮತ್ತು ಬಳಗದವರಿಂದ ’ ಕರ್ನಾಟಕ ವೈಭವ’ ಅನ್ನುವ ಸಂಗೀತ-ನೃತ್ಯ ರೂಪಕ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!