Wednesday, September 11, 2024

ಅಂಕೋಲದ ಶಿರೂರು ಗುಡ್ಡ ಕುಸಿತದಿಂದ ಸ್ಥಗಿತಗೊಂಡಿದ್ದ ಹೆದ್ದಾರಿ ಏಕಮುಖ ಸಂಚಾರಕ್ಕೆ ಮುಕ್ತ !

ಜನಪ್ರತಿನಿಧಿ (ಅಂಕೋಲ) :  ರಾಷ್ಟ್ರೀಯ ಹೆದ್ದಾರಿ 66ರ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಪರಿಣಾಮದಿಂದ ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು 16 ದಿನಗಳ ಬಳಿಕ ಈಗ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಜುಲೈ 16 ಅಂಕೋಲದ ಶಿರೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಮಂಗಳೂರು ಹಾಗೂ ಗೋವಾಗೆ ಸಂಪರ್ಕ ಕಲ್ಪಸಿಕೊಡುವ ಪ್ರಮುಖ ಹೆದ್ದಾರಿ ಸ್ಥಗಿತಗೊಂಡಿತ್ತು.

ಈ ದುರ್ಘಟನೆಯಲ್ಲಿ ಹನ್ನೊಂದು ಮಂದಿ ನಾಪತ್ತೆಯಾಗಿದ್ದರು, ಕೇರಳ ಮೂಲದ ಡ್ರೈವರ್ ಅರ್ಜುನ್, ಸ್ಥಳೀಯ ಜಗನ್ನಾಥ್ ಮತ್ತು ಗಂಗೆಕೊಳ್ಳದ ಲೊಕೇಶ ಪತ್ತೆ ಕಾರ್ಯಚರಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂಬ ಮಾಹಿತಿ ಇದೆ. ಎಂಟು ಮಂದಿಯ ಮೃತದೇಹ ಪತ್ತೆಯಾಗಿತ್ತು.

ಹೆದ್ದಾರಿ ಮೇಲೆ ಗುಡ್ಡ ಜರಿದಿರುವ ಕಾರಣದಿಂದ ವಿಪತ್ತು ನಿರ್ವಹಣಾ ಕಾರ್ಯ ಮಾಡಿ ಈಗ ಸದ್ಯಕ್ಕೆ ಏಕಮುಖ ಸಂಚಾರಕ್ಕೆ ಮುಕ್ತಿಗೋಳಿಸಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ವಾಹನ ಸಂಚಾರಕ್ಕೆ ಅಧಿಕೃತವಾಗಿ ಅನುಮತಿಸಿದ್ದಾರೆ. ಚತುಷ್ಪಥ ಹೆದ್ದಾರಿ ಗುತ್ತಿಗೆ ಪಡೆದಿರುವ ಐ ಆರ್ ಬಿ ಸಂಸ್ಥೆಗೆ ಎರಡೂ ಬದಿಗಳಲ್ಲಿ ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

ನದಿ ಅಂಚಿನ ಏಕಮುಖ ರಸ್ತೆಯನಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ, ಮತ್ತೆ ಮಣ್ಣು ಕುಸಿಯುವ ಆತಂಕದಿಂದ ಗುಡ್ಡದಂಚಿನ ಇನ್ನೊಂದು ಬದಿಯ ರಸ್ತೆಯಲ್ಲಿ ಪೂರ್ಣ ಪ್ರಮಾಣದ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸದೇ ಹಾಗೆಯೇ ಇಡಲಾಗಿದೆ. ತಾತ್ಕಾಲಿಕ ತಡೆಗೋಡೆಗಳನ್ನು ಹಾಕಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!