Tuesday, October 8, 2024

SC, ST ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗಿದೆ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಜನಪ್ರತಿನಿಧಿ (ನವ ದೆಹಲಿ) : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಲ್ಲಿನ ಅತ್ಯಂತ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಇಂದು(ಗುರುವಾರ) ಮಹತ್ವಪೂರ್ಣ ತೀರ್ಪು ನೀಡಿ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಸೇರಿ ಏಳು ನ್ಯಾಯಾಧೀಶರಿರುವ ಸಾಂವಿಧಾನಿಕ ನ್ಯಾಯಪೀಠ ಈ SC, ST ಒಳ ಮೀಸಲಾತಿ ನೀಡುವ  ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ತೀರ್ಪು ಕೊಟ್ಟಿದೆ.

ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಎಸ್‌ಸಿ ಹಾಗೂ ಎಸ್‌ಟಿಗಳಲ್ಲಿಯೇ ಒಳ ಮೀಸಲಾತಿ ನೀಡಬಹುದು ಹಾಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಜಾರಿಗೆ ತರಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ನ್ಯಾಯಪೀಠದಲ್ಲಿದ್ದ ಏಳು ನ್ಯಾಯಮೂರ್ತಿಗಳ ಪೈಕಿ ಆರು ನ್ಯಾಯಮೂರ್ತಿಗಳು ಒಳಮೀಸಲಾತಿ ನೀಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಒಪ್ಪಿಗೆ ನೀಡುವ ಪರವಾಗಿ ತೀರ್ಪು ನೀಡಿದ್ದು, ನ್ಯಾ. ಬೇಲಾ ತ್ರಿವೇದಿ ಒಬ್ಬರು ಮಾತ್ರ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಹಾಗಾಗಿ 6:1 ರ ಅನುಪಾತದಡಿ, ಉಪವರ್ಗೀಕರಣ ಆಧಾರಿತ ಮೀಸಲಾತಿ ನೀಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ.

ಈ ಬಹುಮತದ ತೀರ್ಪು ಈ ಹಿಂದೆ ಒಳ ಮೀಸಲಾತಿಯನ್ನು ತಿರಸ್ಕರಿಸಿದ್ದ ಇವಿ ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ನ್ಯಾಯಪೀಠ ನೀಡಿದ್ದ 2004ರ ತೀರ್ಪನ್ನು ರದ್ದುಗೊಳಿಸಿದೆ.

ಮೀಸಲಾತಿ ವರ್ಗದ ಸಮುದಾಯಗಳ ಒಳ ಮೀಸಲಾತಿ ಒಳಗೊಂಡಿರುವ ಪಂಜಾಬ್ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ(ಸೇವೆಗಳಲ್ಲಿ ಮೀಸಲಾತಿ) ಕಾಯ್ದೆ, 2006 ರ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!