spot_img
Saturday, December 7, 2024
spot_img

ಕಾರ್ಕಳ ವರ್ಧಮಾನ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ & ಗೈಡ್ಸ್  ಉದ್ಘಾಟನೆ| ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಗೈಡ್ಸ್ ಸಹಕಾರಿ-ಪಿ ಜಿ ಆರ್ ಸಿಂಧ್ಯಾ

ಕಾರ್ಕಳ: ಭಾರತೀಯರಾದ ನಾವು ಸೇವೆಯೇ ಪರಮ ಧರ್ಮವೆಂಬ ತತ್ವವನ್ನು  ಸ್ವೀಕಾರ ಮಾಡಿ ಬಾಳುವವರು. ಇಂತಹ ಸೇವಾ ಮನೋಭಾವ ಗುಣಗಳನ್ನು  ವಿದ್ಯಾರ್ಥಿಗಳಿಗೆ ಎಳವೆಯಿಂದಲೇ   ಶಿಕ್ಷಕರ ಕಲಿಸಿಬೇಕಿದೆ. ಬದುಕಿನ ಸಾರ್ಥಕತೆಗೆ ಮಾನವೀಯ ಮೌಲ್ಯಗಳು ಭೂಷಣವಾಗಿದೆ. ಇಂತಹ  ಸದ್ಗುಣಗಳಿಗೆ ವ್ಯಕ್ತಿತ್ವ ವಿಕಸನಗಳಿಗೆ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳು ಸಹಕಾರಿಯಾಗಿದೆ ಎಂದು ಭಾರತ್  ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಅವರು ಹೇಳಿದರು.
 ಅವರು ಕಾರ್ಕಳದ ವರ್ಧಮಾನ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಸಾಣೂರು ಇಲ್ಲಿ ಜರಗಿದ ಶೈಕ್ಷಣಿಕ ವರ್ಷದ  ಸ್ಕೌಟ್ಸ್ ಗೈಡ್ಸ್ ಚಟುವಟಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್  ಗೈಡ್ಸ್ ರಾಜ್ಯ ಸಂಸ್ಥೆಯು ರಾಜ್ಯದ ಎಲ್ಲಾ  ಜಿಲ್ಲೆಗಳಿಗೆ ತಾಲೂಕುಗಳಿಗೆ ಸ್ಕೌಟ್ ಗೈಡ್ಸ್ ಚಟುವಟಿಕೆಗಳಿಗಾಗಿ  ವಿಶೇಷವಾದಂತಹ ಕಾರ್ಯಕ್ರಮ ಗಳನ್ನು ರೂಪಿಸಿ  ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.  ಈ ನಿಟ್ಟಿನಲ್ಲಿ ಇಂದು ರಾಜ್ಯದ ಗ್ರಾಮೀಣ ನಗರ ಮಹಾನಗರಗಳಲ್ಲಿ  ಸ್ಕೌಟ್ಸ್ ಗೈಡ್ ಚಟುವಟಿಕೆಗಳು ವಿದ್ಯಾರ್ಥಿಗಳಿಂದ ವಿಶೇಷವಾಗಿ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಇಂದು  ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಯುವ ನಾಯಕತ್ವ ಸೇವಾ ಮನೋಭಾವನೆ ಆತ್ಮ ವಿಶ್ವಾಸ ಇತರರ ಬಗ್ಗೆ ಅನುಕಂಪ  ಈ ಎಲ್ಲಾ ಮಾನವೀಯ ಗುಣಗಳನ್ನು ಕಲಿಸುತ್ತಾ ಬರುತ್ತಿದೆ. ಈ ಸಾಧನೆಯಲ್ಲಿ ಕಾರ್ಕಳದ ವರ್ಧಮಾನ ಶಾಲೆಯು ಸಮಸ್ತ ವಿದ್ಯಾರ್ಥಿಗಳನ್ನು ಸ್ಕೌಟ್ಸ್ ಗೈಡ್ಸ್ ಚಳುವಳಿಯಲ್ಲಿ ತೊಡಗಿಸಿಕೊಂಡಿರುವುದು ‌ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
 ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಿರಿಯ ನ್ಯಾಯವಾದಿ ಎಂ ಕೆ ವಿಜಯ್ ಕುಮಾರ್ ಅವರು ವಹಿಸಿ ಇಂದು  ರಾಜ್ಯವ್ಯಾಪಿ ಸ್ಕೌಟ್ಸ್ ಗೈಡ್ಸ್ ಚಳುವಳಿ ಅಭೂತಪೂರ್ವ ಆದರ್ಶ ವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ‌. ಅಂತೆಯೇ ದೇಶದಲ್ಲಿ ಕರ್ನಾಟಕ ರಾಜ್ಯದ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳು ಒಂದು ಮಾದರಿಯಾಗಿ ಮೂಡಿಬಂದಿದೆ  ಪ್ರತಿಯೊಬ್ಬ ವಿದ್ಯಾರ್ಥಿಯು ಈ ‌ಸೇವಾ ಸಂಸ್ಥೆಯನ್ನು ಸೇರಿ ತಮ್ಮ ಬದುಕಿನಲ್ಲಿ ವಿಶೇಷವಾದಂತಹ ವ್ಯಕ್ತಿತ್ವವನ್ನು ಪಡೆಯಬೇಕು  ಎಂದು ಹೇಳಿದರು.
 ‌ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸ್ಕೌಟ್ಸ್  ಗೈಡ್ಸ್ ಮುಖ್ಯ ಕಮಿಷನರ್ ಜಯಕರ ಶೆಟ್ಟಿ ಇಂದ್ರಾಳಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧನೆಯನ್ನು ಮಾಡುವುದಕ್ಕೆ ಇದು ಯೋಗ್ಯವಾದ ಸಮಯ . ಇಂತಹ ಅವಕಾಶವನ್ನು ಒಳ್ಳೆಯ ಸಮಾಜ ನಿರ್ಮಾಣ ಕಾರ್ಯಗಳಿಗೆ ನಾವು ವಿನಿಯೋಗಿಸಬೇಕು . ನಮ್ಮ ಬದುಕಿನ ಅರ್ಥವನ್ನು ಇತರರಿಗೆ ತಿಳಿಸುವಂತಾಗಬೇಕು ಇಂತಹ ಅವಕಾಶಗಳನ್ನು ಸ್ಕೌಟ್ಸ್. ಗೈಡ್ಸ್  ಸಂಸ್ಥಯನ್ನು ಸೇರಿ ಒಳ್ಳೆಯ  ಅವಕಾಶವನ್ನು ಪಡೆಯಬಹುದು  ಎಂದು ಹೇಳಿದರು .
ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ ಬಿ.ಎ  ಶುಭ ಹಾರೈಸಿದರು. ಉಡುಪಿ ಜಿಲ್ಲಾ ಗೈಡ್ ಕಮೀಷನರ್ ಶ್ರೀಮತಿ ಜ್ಯೋತಿ ಜೆ ಪೈ ರಾಜ್ಯ ಸಂಸ್ಥೆಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ ರಾಜ್ಯ ಸಹ ಸಂಘಟನಾ ಆಯುಕ್ತೆ ಸುಮನಾಶೇಖರ್   ಕಾರ್ಕಳ ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಜಗದೀಶ ಹೆಗ್ಡೆ ಕೋಶಾಧಿಕಾರಿ ಸತೀಶ್ ಶೆಟ್ಟಿ ಉಪಾಧ್ಯಕ್ಷೆ ಸಾವಿತ್ರಿ ಮನೋಹರ್ ಸಹಾಯಕ ಜಿಲ್ಲಾ ಆಯುಕ್ತರಾದ ವೃಂದಾ ಹರಿಪ್ರಕಾಶ್ ಶೆಟ್ಟಿ ,ಬೋಳ ಗೀತಾ ಸುಧೀರ್ ಕಾಮತ್ ,ಶ್ವೇತಾ ಕಾಮತ್ ,ಕಾರ್ಯದರ್ಶಿ ಗಣೇಶ್ ಜಾಲ್ಸೂರು ಜೊತೆ ಕಾರ್ಯದರ್ಶಿ, ಸೀಮಾ ಕಾಮತ್ ನಿಕಟ ಪೂರ್ವ ಕಾರ್ಯದರ್ಶಿ ನವೀನ್ ಕುಮಾರ್  ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹಾಗೂ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಇವರನ್ನು ವರ್ಧಮಾನ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಫ್ಲಾಕ್ ಲೀಡರ್  ಶಶಿಕಲಾ ಹೆಗ್ಡೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಸಂಚಾಲಕ ನಿವೃತ್ತ ಬ್ಯಾಂಕ್  ಅಧಿಕಾರಿ  ಕುಮಾರಯ್ಯ ಹೆಗ್ಡೆ ಅತಿಥಿ ಗಳನ್ನು ಹೂ ನೀಡಿ ಗೌರವಿಸಿದರು. ಗೈಡ್ ಕ್ಯಾಪ್ಟನ್  ಪ್ರಿಯಾ ಎಸ್.ನಾಯಕ್ ಹಾಗೂ ಕಬ್ ಮಾಸ್ಟರ್ ಸ್ವಾತಿಯವರು  ಅತಿಥಿಗಳ ಪರಿಚಯವಿತ್ತರು  ಬನ್ನಿಸ್ ಲೀಡರ್ ಸ್ಮಿತಾ ಅವರು ಧನ್ಯವಾದವಿತ್ತರು. ಸ್ಕೌಟ್ ಮಾಸ್ಟರ್ ಕರ್ತವ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸೌಮ್ಯ ದೀಪಿಕಾ ವಾಣಿ, ಅನಿತಾ, ಗ್ರೀಷ್ಮ ಹಾಗೂ ಪ್ರವೀಣ ರವರು ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!