spot_img
Saturday, April 26, 2025
spot_img

ವಿಶ್ವ ವಿನಾಯಕ ಸಿ.ಎಸ್.ಇ ಸ್ಕೂಲ್: ವಿಶ್ವ ಪರಿಸರ ದಿನಾಚರಣೆ

ತೆಕ್ಕಟ್ಟೆ: ಜೂನ್ 10ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಶಾಲಾ ಮೇನೆಂಜಿಂಗ್ ಡೈರೆಕ್ಟರ್ ಎಂ. ಪ್ರಭಾಕರ ಶೆಟ್ಟಿಯವರು ಮಾತನಾಡಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ಪೋಷಿಸಿದರೆ ಮಾತ್ರ ಹಸಿರನ್ನು ಉಳಿಸಿ ಜೀವ ಸಂಕುಲದ ರಕ್ಷಣೆ ಸಾಧ್ಯ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ ಆಲ್ಮೇಡಾರವರು ಮಾತನಾಡಿ ಸಸ್ಯ ಸಂಪತ್ತನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ತಿಳಿಸಿದರು.

ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಹೆಚ್. ರವರು ಮಾತನಾಡಿ ಪರಿಸರ ನೈರ್ಮಲ್ಯ ಹಾಗೂ ಪ್ರಾಣಿ ಸಂಕುಲದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಾದ ಝಾರಾ ಮತ್ತು ಸಾಕ್ಷಿ ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಜೀವ ಸಂಕುಲದ ಉಳಿವಿಗೆ ಪ್ರಕೃತಿಯಲ್ಲಿನ ಗಿಡ ಮರಗಳ ಮಹತ್ವದ ಕುರಿತು ಭಾಷಣ ಮಾಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ತಂದ ವಿವಿಧ ಗಿಡಗಳನ್ನು ಶಾಲಾ ವಠಾರದಲ್ಲಿ ನೆಡುವುದರ ಮೂಲಕ ಪರಿಸರದ ಕುರಿತು ಜಾಗೃತಿಯನ್ನು ಮೂಡಿಸಲಾಯಿತು.

ಕಾರ್‍ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀವೈಷ್ಣವಿ ಕಾರ್‍ಯಕ್ರಮ ನಿರೂಪಿಸಿದರು, ಅಮೂಲ್ಯ ಸ್ವಾಗತಿಸಿದರು ಸನಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!