spot_img
Monday, February 9, 2026
spot_img

ಹಾಲಾಡಿ ವಿಶೇಷ ಗ್ರಾಮ ಸಭೆ |ಹಾಲಾಡಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಬ್ಯಾಂಕ್ ಅಪ್ ಬರೋಡಾ ಸ್ಥಳಾಂತರಕ್ಕೆ ಸರ್ವಾನುಮತದ ಆಗ್ರಹ

ಹಾಲಾಡಿ: ಹಾಲಾಡಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆ ಪ್ರಥಮ ಮಹಡಿಯಲ್ಲಿದ್ದು, ಮೂಲ ಸೌಕರ್ಯಗಳ ಸಮಸ್ಯೆ ಹಾಗೂ ಹಿರಿಯರು, ವಿಶೇಷಚೇತನರಿಗೆ ಬ್ಯಾಂಕ್‍ಗೆ ಹೋಗಲು ಅನಾನೂಕುಲವಾಗಿದ್ದು ಪಕ್ಕದಲ್ಲಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಬ್ಯಾಂಕನ್ನು ಸ್ಥಳಾಂತರ ಮಾಡುವ ಕುರಿತು ವಿಶೇಷ ಗ್ರಾಮ ಸಭೆ ಸೋಮವಾರ ನಡೆಯಿತು. ಅನಾನೂಕುಲಕರವಾದ ಕಟ್ಟಡದಲ್ಲಿರುವ ಬ್ಯಾಂಕನ್ನು ಅನುಕೂಲಕರವಾದ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಗ್ರಾಮಸ್ಥರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೋರಾಡಿ ಮಾತನಾಡಿ, 2006ರ ತನಕ ಗ್ರಾಮ ಪಂಚಾಯತ್ ಕಟ್ಟಡದಲ್ಲಿಯೇ ಬ್ಯಾಂಕ್ ಆಫ್ ಬರೋಡ ಶಾಖೆ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈಗ ಬ್ಯಾಂಕ್ ಇರುವ ಕಟ್ಟಡವೂ ಕೂಡಾ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು ಪ್ರಥಮ ಮಹಡಿಯಲ್ಲಿ ಬ್ಯಾಂಕ್ ಇರುವುದರಿಂದ ಜನಸಾಮಾನ್ಯರಿಗೆ, ವಿಶೇಷ ಚೇತನರಿಗೆ ವ್ಯವಹಾರಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ದೂರುಗಳು ಗ್ರಾ.ಪಂ.ಗೆ ಬರುತ್ತಿವೆ. ಹಾಲಾಡಿ ಗ್ರಾಮ ಪಂಚಾಯತ್‍ಗೆ ಶಾಶ್ವತ ಆದಾಯದ ದೂರದೃಷ್ಟಿಯಿಂದ ಕಟ್ಟಡ ನಿರ್ಮಾಣಕ್ಕೆ ಮುಂದಾದೆವು. ಈ ಬಗ್ಗೆ ಸತತ ಸಾಮಾನ್ಯ ಸಭೆಯಲ್ಲಿ ನಿರ್ಣಯಗಳನ್ನು ಮಾಡಲಾಗಿತ್ತು. ಉದ್ಯೋಗ ಖಾತರಿ ಯೋಜನೆಯನ್ನು ಗ್ರಾಮ ಪಂಚಾಯತ್ ಭವನ ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇಲ್ಲದ ಕಾರಣ, ಇಲ್ಲಿಯವರೆಗೆ ಪಾವತಿಯಾದ ಮೊತ್ತ ರೂ.387760ನ್ನು ಗ್ರಾಮ ಪಂಚಾಯತ್ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಪಾವತಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಪರಿಶೋಧನೆ ಸಂದರ್ಭದಲ್ಲಿ ಈ ಕಾಮಗಾರಿಗೆ ಬಳಕೆಯಾದ ಅನುದಾನವನ್ನು ಬಗ್ಗೆ ಸೂಚಿಸಲಾಗುತ್ತದೆ ಎಂದರು.

ಆದರೆ ಈ ಬಗ್ಗೆ ವಿನಾಕಾರಣ ಆಕ್ಷೇಪವೆತ್ತಿದ್ದು ಆಕ್ಷೇಪಗಳು ನಿರಾಧರವಾಗಿದೆ. ನಾನು ಕಳೆದ 37 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಒಂದು ರೂಪಾಯಿಯ ಭ್ರಷ್ಟಚಾರವನ್ನೂ ಮಾಡಿಲ್ಲ. ನಾನು ಯಾವ ತಪ್ಪನ್ನು ಮಾಡಿಲ್ಲ, ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಹೇಗಿರಬೇಕು ಎಂದು ನನ್ನ ಗುರುಗಳಿಂದ ಕಲಿತುಕೊಂಡಿದ್ದೇನೆ. ಈ ಬಗ್ಗೆ ಆರೋಪ ಮಾಡುವ ವ್ಯಕ್ತಿಗಳು ಮೊದಲು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬ್ಯಾಂಕ್ ಆಫ್ ಬರೋಢ ಈಗ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯತ್ ಕಟ್ಟಡದ ತಳ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುವುದು ಶತಸಿದ್ಧ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಮಾಜಿ ಶಾಸಕರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಹಾಲಿ ಶಾಸಕರಾದ ಕಿರಣ ಕೊಡ್ಗಿಯವರೊಂದಿಗೂ ಕೂಡ ಈ ಬಗ್ಗೆ ವಿಷಯ ಪ್ರಸ್ತಾವನೆ ಮಾಡಲಾಗಿದೆ. ಕಟ್ಟಡ ನಿರ್ಮಾಣ ಮಾಡಿ ಬಾಡಿಗೆ ನೀಡಿದರೆ ಗ್ರಾಮ ಪಂಚಾಯತ್‌ಗೆ ಶಾಶ್ವತ ಆದಾಯ ಬರುತ್ತದೆ ಎಂದರು.

ಬ್ಯಾಂಕ್ ಆಫ್ ಬರೋಢ ಈಗ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯತ್ ಕಟ್ಟಡದ ತಳ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುವುದು ಶತಸಿದ್ಧ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಮಾಜಿ ಶಾಸಕರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಹಾಲಿ ಶಾಸಕರಾದ ಕಿರಣ ಕೊಡ್ಗಿಯವರೊಂದಿಗೂ ಕೂಡ ಈ ಬಗ್ಗೆ ವಿಷಯ ಪ್ರಸ್ತಾವನೆ ಮಾಡಲಾಗಿದೆ. ಕಟ್ಟಡ ನಿರ್ಮಾಣ ಮಾಡಿ ಬಾಡಿಗೆ ನೀಡಿದರೆ ಗ್ರಾಮ ಪಂಚಾಯತ್‌ಗೆ ಶಾಶ್ವತ ಆದಾಯ ಬರುತ್ತದೆ ಎಂದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಮಾತನಾಡಿ, 1975ರಲ್ಲಿ ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿಯವರ ನೇತೃತ್ವದಲ್ಲಿ ವಿಜಯ ಬ್ಯಾಂಕ್ ಅಂದಿನ ಚೇರ್ ಮ್ಯಾನ್ ಸುಂದರಾಮ ಶೆಟ್ಟಿಯವರಿಂದ ಉದ್ಘಾಟನೆಗೊಂಡ ಈ ಬ್ಯಾಂಕ್ 2006ರಲ್ಲಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈಗ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಕಟ್ಟಡ ಸಮಸ್ಯೆಗಳ ಅಗರವಾಗಿದೆ. ನೀರಿನ ವ್ಯವಸ್ಥೆಇಲ್ಲ, ಸುಣ್ಣಬಣ್ಣವಿಲ್ಲ, ಲಿಫ್ಟ್ ವ್ಯವಸ್ಥೆ ಇಲ್ಲ, ಇಕ್ಕಟ್ಟಾದ ಮೆಟ್ಟಿಲು ಮಾತ್ರವಲ್ಲದೆ ಪ್ರಥಮ ಮಹಡಿಯಲ್ಲಿ ಅವೈಜ್ಞಾನಿಕವಾಗಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಈಗ ಬ್ಯಾಂಕಿಗೆ ಬರುವವರು ವಯಸ್ಸಾದವರು. ಅವರಿಗೆ ಮೆಟ್ಟಿಲು ಏರಿ ಬರಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಸಮಸ್ಯೆ ಇನ್ನೂ ಗಂಭೀರವಾಗಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿಯಿಂದ ನಿರ್ಮಾಣವಾಗುವ ಹೊಸ ಕಟ್ಟಡದ ತಳ ಅಂತಸ್ತಿಗೆ ಬ್ಯಾಂಕ್ ಸ್ಥಳಾಂತರವಾಗಲೇ ಬೇಕು ಎಂದು ಹೇಳಿದ ಅವರು ಹಾಲಾಡಿ ಗ್ರಾಮ ಪಂಚಾಯತ್ ನಲ್ಲಿ ಯಾವುದೇ ಭೃಷ್ಟಚಾರ ನಡೆದಿಲ್ಲ. ಸ್ವಜನಪಕ್ಷಪಾತ ನಡೆದಿಲ್ಲ. ಸಾಮಾಜಿಕ ಲೆಕ್ಕಪರಿಶೋಧನೆಯಲ್ಲಿ ಸತ್ಯ ಕಂಡುಕೊಳ್ಳಬಹುದು. ಅನವಶ್ಯಕವಾಗಿ ಗ್ರಾಮ ಪಂಚಾಯತ್ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಗೊಳಿ ಮಾತನಾಡಿ, ಹಾಲಾಡಿ ಗ್ರಾಮ ಪಂಚಾಯಿತಿಗೆ ಯಾವುದೇ ಆದಾಯವಿಲ್ಲ. ಹಿಂದೆ ವಿಜಯ ಬ್ಯಾಂಕ್ ಗ್ರಾಮ ಪಂಚಾಯತ್ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ಶಿಥಿಲಗೊಂಡ ಕಾರಣ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕೂಡಲೇ ನಮಗೆ ಹೊಸ ಕಟ್ಟಡ ಮಾಡಲು ಅನುದಾನದ ಲಭ್ಯತೆ ಇರಲಿಲ್ಲ. ಈಗ ಅನುದಾನಗಳ ಹೊಂದಾಣಿಕೆ ಮಾಡಿಕೊಂಡು ಪಂಚಾಯತ್ ಕಟ್ಟಡ ನಿರ್ಮಾಣ ಮಾಡಿದೆ. ಈ ಕಟ್ಟಡಕ್ಕೆ ಬ್ಯಾಂಕ್ ಆಪ್ ಬರೋಢ ಹಾಲಾಡಿ ಶಾಖೆ ಸ್ಥಳಾಂತರವಾಗಲೇ ಬೇಕು ಎಂದರು.

ಹಾಫ್ ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಮಾತನಾಡಿ, ಬ್ಯಾಂಕ್ ಶಾಖೆ ಸ್ಥಳಾಂತರ ಅನಿವಾರ್ಯ. ಹಿರಿಯ ನಾಗರಿಕರಿಗೆ ಮೆಟ್ಟಿಲುಗಳನ್ನು ಏರಿ ಬ್ಯಾಂಕ್‍ಗೆ ಹೋಗಲು ಸಾಧ್ಯವೇ ಇಲ್ಲ. ಬ್ಯಾಂಕುಗಳು ನೆಲ ಮಹಡಿಯಲ್ಲಿಯೇ ಇರಬೇಕು. ಹುಣ್ಣಿಮೆ ದಿನ ಚಂದ್ರನನ್ನು ನೋಡಲು ಯಾರು ಹೇಳಬೇಕಾ? ಎಲ್ಲಾ ಗ್ರಾಹಕರ ಅಪೇಕ್ಷೆಯಂತೆ ಬ್ಯಾಂಕ್ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತವಾಗಲೇಬೇಕು ಎಂದರು.

ಸೂರ್ಯಕಾಂತ ದಾಮ್ಲೆ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು ನೆಲಮಹಡಿಯಲ್ಲಿಯೇ ಗ್ರಾಹಕರಿಗೆ ಸೇವೆ ನೀಡಬೇಕು. ಆರ್ಥಿಕ ವಹಿವಾಟು ಮಾತ್ರವಲ್ಲದೆ ಕೆವೈಸಿಯಂತಹ ಅಗತ್ಯ ಕಾರ್ಯಗಳಿಗೆ ಎಲ್ಲಾ ವಯೋಮಾನದ ನಾಗರಿಕರು ಬ್ಯಾಂಕಿಗೆ ಬರುತ್ತಾರೆ. ಅವರು ಮೆಟ್ಟಲು ಏರಿ ಹೋಗಲು ಸಾಧ್ಯವೇ ಇಲ್ಲ. ಈಗ ಅನಗತ್ಯವಾಗಿ ಆಕ್ಷೇಪ ಹಾಗೂ ಆರೋಪ ಮಾಡಲಾಗುತ್ತಿದೆ. ಅವಿಭಜಿತ ದ,ಕ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಭೃಷ್ಟಚಾರ ನಡೆಯಲು ಸಾಧ್ಯವೇ ಇಲ್ಲ. ಜನರ ಹಿತಾಸಕ್ತಿಯಿಂದ ಪಂಚಾಯತ್ ನಿರ್ಧಾರಕ್ಕೆ ನಾವು ಸಾಥ್ ನೀಡಬೇಕು ಎಂದರು.

ಕೃಷಿಕ ಶಶಿಕಾಂತ ಮಾತನಾಡಿ ಬ್ಯಾಂಕ್ ಆಪ್ ಬರೋಢ ಮರಳಿ ಗೂಡಿಗೆ ಬರಲೇಬೇಕು. ನೆಲಮಹಡಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ನಾಗರಿಕ ಹಿತರಕ್ಷಣ ವೇದಿಕೆಯ ಮೂಲಕ ದೂರು ದಾಖಲಿಸಬೇಕು ಎಂದರು.

ಶಶಿಧರ ಭಟ್ ಚೋರಾಡಿ ಮಾತನಾಡಿ, ಈ ಬ್ಯಾಂಕ್ ಗ್ರಾಹಕರಿಗೆ ತುಂಬಾ ಅನಾನುಕೂಲವಾಗಿದೆ. ಪಿಂಚಣಿದಾರರು ಬ್ಯಾಂಕಿಗೆ ಹೋಗುವುದೇ ಕಷ್ಟ ಎಂದರು.

ರಾಜೇಂದ್ರ ಮಾತನಾಡಿ, ಈಗಿರುವ ಬ್ಯಾಂಕ್ ಶಾಖೆಯಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಬ್ಯಾಂಕಿನ ಗ್ರಾಹಕರು ಬೇರೆ ವಾಣಿಜ್ಯ ಸಂಕೀರ್ಣದ ಬಳಿ ವಾಹನ ಇಟ್ಟು ಬರಬೇಕಾದ ಮುಜುಗರದ ಸ್ಥಿತಿ ಇದೆ. ಇಕ್ಕಾಟ್ಟಾದ ದಾರಿ, ಅಸ್ವಚ್ಛತೆ, ಪ್ರವೇಶ-ನಿರ್ಗಮನ ಒಂದೇ ಕಡೆ ಇರುವುದರಿಂದ ಸಮಸ್ಯೆಯಾಗುತ್ತದೆ ಎಂದರು.

ನಮ್ಮ ಭೂಮಿ ಸಂಸ್ಥೆಯ ಗಣೇಶ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯಿತಿ ಕಾಯ್ದೆ ಪ್ರಕಾರ ಜನರ ನಿರ್ಣಯವೇ ಅಂತಿಮ, ಜನರಿಗಾಗಿ ಪಂಚಾಯತ್ ಗಳು ಮಾಡುವ ನಿರ್ಣಯಗಳಿಗೆ ವಿಶೇಷ ಮಹತ್ವವಿದೆ. ಗ್ರಾ.ಪಂ.ಗಳು ದೈವಸ್ಥಾನವಿದ್ದಂತೆ ಎಂದರು.

ಗುತ್ತಿಗೆದಾರರಾದ ಕುಮಾರದಾಸ, ಭಾರತಿ, ಸುರೇಂದ್ರ ಶೆಟ್ಟಿ, ಮುರಳಿಧರ ಮೊದಲಾದವರು ಸಭೆಯಲ್ಲಿ ಅನಿಸಿಕೆ ಬ್ಯಾಂಕ್ ಶಾಖೆಯನ್ನು ಗ್ರಾಮ ಪಂಚಾಯಿತಿ ಕಟ್ಟಡದ ನೆಲ ಅಂತಸ್ತಿಗೆ ಸ್ಥಳಾಂತರಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅನುರಾಧ ಪಿ.ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್, ಜನಾರ್ದನ ಯಾನೆ ಜಾಣ, ಜಾನಕಿ, ಸಾಧು, ರೇಣುಕಾ, ಹೇಮ ಕುಲಾಲ್, ಗಿರಿಜಾ, ಸಮುದಾಯ ಆರೋಗ್ಯಧಿಕಾರಿ ಸಿದ್ಧನಗೌಡ, ಗ್ರಾಮಾಡಳಿತ ಅಧಿಕಾರಿ ನಾಗರಾಜ, ಶಂಕರನಾರಾಯಣ ಠಾಣೆಯ ಸಬ್ ಇನ್ಸಪೆಕ್ಟರ್ ಐ.ಆರ್ ಗಡ್ಡೆಕರ್, ಹಾಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರೋಶನಿ ಬಿಬಿ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಾಲತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವನಿತಾ ಸ್ವಾಗತಿಸಿ ವಂದಿಸಿದರು.

ಹಾಲಾಡಿ ಗ್ರಾ.ಪಂ.ನಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ
ಗ್ರಾಮ ಪಂಚಾಯತ್ ಭವನ ನಿರ್ಮಾಣ ಕಾಮಗಾರಿಯನ್ನು 2024-25ನೇ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ.20ಲಕ್ಷ, ವರ್ಗ 1ರ ಶಾಸನಬದ್ದ ಅನುದಾನ ಮತ್ತು 15ನೇ ಹಣಕಾಸು ಯೋಜನೆ ಸೇರಿ 31,28,630 ಒಟ್ಟು ರೂ.51,28,630 ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಆಗಿತ್ತು. ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಕೂಲಿಗಾರರ ಸಮಸ್ಯೆಯಿಂದಾಗಿ ನಿಗಧಿತ ಪ್ರಮಾಣದಲ್ಲಿ ಗುರಿ ಸಾಧಿಸಲು ಕಷ್ಟವಾದ್ದರಿಂದ ರೂ.3,87,760 ಕೂಲಿ ಮೊತ್ತ ಪಾವತಿಸಲಾಗಿದೆ. ಈ ವಿಷಯ ಜ.31-2026ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ಕಾಮಗಾರಿಯನ್ನು ಉದ್ಯೋಗ ಖಾತರಿ ಯೋಜನೆಯಿಂದ ಕೈಬಿಡುವುದೆಂದು ಹಾಗೂ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಗ್ರಾಮ ಪಂಚಾಯತ್ ಆರ್ಥಿಕ ಸಂಪನ್ಮೂಲ ಕ್ರೋಢಿಕರಣದ ಹಿತದೃಷ್ಟಿಯಿಂದ ಗ್ರಾಮಸ್ಥರ ಕೋರಿಕೆ ಮೇರೆಗೆ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಬಾಡಿಗೆಗೆ ನೀಡುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಅದರಂತೆ ಇಲ್ಲಿಯವರೆಗೆ ಪಾವತಿಯಾದ ಮೊತ್ತ ರೂ.3,87,760ನ್ನು ಗ್ರಾಮ ಪಂಚಾಯತ್ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತಾದೃಷ್ಟಿಯಿಂದ ಫೆ.3-2026ರಂದು ಬ್ಯಾಂಕ್ ಮೂಲಕ ಪಾವತಿಸಿದ್ದೇನೆ ಎಂದು ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೋರಾಡಿ ಅಶೋಕ್ ಶೆಟ್ಟಿ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!