Sunday, September 8, 2024

ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ: ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟನೆ

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ, ದಿನಾಂಕ: 07.06.2024ರಿಂದ 13.06.2024ರ ವರೆಗೆ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೋಡಿ-ಕನ್ಯಾನ ಇಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟನೆಯನ್ನು ಮಾಡಿ, ಗೀತಾನಂದ ಫೌಂಡೇಶನ್‌ ಮಣೂರು ಇದರ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್‌ ವಿದ್ಯಾರ್ಥಿಗಳು ಸಮಾಜ ಸೇವೆ, ಪರಿಸರ ಸಂರಕ್ಷಣೆಗೆ, ಪರಸ್ಪರ ಹೊಂದಾಣಿಕೆ ಮುಂತಾದ ಉತ್ತಮ ಗುಣಗಳನ್ನು ರೂಢಿಸಲು NSS ಶಿಬಿರ ಅತ್ಯಂತ ಅಗತ್ಯ ಎಂದು ನುಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸ್ಥಳೀಯ ಉದ್ಯಮಿ  ಶಿವ ಎಸ್.‌ ಕರ್ಕೇರ ಇವರು ಗ್ರಾಮೀಣ ಪ್ರದೇಶದಲ್ಲಾಗುತ್ತಿರುವ ಈ ವಾರ್ಷಿಕ ಶಿಬಿರ ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಶಂಕರ ಕುಂದರ್‌, ಉದ್ಯಮಿಗಳು, ರಮೇಶ್‌ ಹೆಚ್‌ ಕುಂದರ್‌, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಕೋಡಿ-ಕನ್ಯಾನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾದ ಶ್ರೀ ರವೀಂದ್ರ ರಾವ್‌, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರ ಅಡಿಗ, ಸೋಮ ಬಂಗೇರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಾಧಿಕಾ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ
ಅಧ್ಯಕ್ಷರಾದ  ಸುದಿನ ಹಾಗೂ ಪ್ರಭಾಕರ ಮೆಂಡನ್ ಇವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುನೀತ ವಿ ವಹಿಸಿದ್ದರು.ಎನ್.ಎಸ್‌.ಎಸ್.‌ ಅಧಿಕಾರಿಗಳಾದ ಡಾ. ಮನೋಜ್‌ಕುಮಾರ್‌ ಎಂ ಸ್ವಾಗತಿಸಿ, ಶ್ರೀಕಾಂತ್‌ ಎ ಪೂಜಾರಿ ವಂದಿಸಿದರು. ಕನ್ನಡ ಉಪನ್ಯಾಸಕರಾದ ಕು. ಮಮತಾ  ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!