spot_img
Saturday, December 7, 2024
spot_img

ಕೋಟೇಶ್ವರ ಪ್ರಥಮದರ್ಜೆ ಕಾಲೇಜಿನಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

ಕುಂದಾಪುರ: ಆದಾಯ ಹಾಗೂ ಹೂಡಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವ ವ್ಯಕ್ತಿಗೆ ಹೆಚ್ಚು ಆದಾಯ ಇರುತ್ತದೋ ಅಂತವರು ಹೆಚ್ಚು ಹೂಡಿಕೆಯನ್ನು ಮಾಡಬೇಕಾಗುತ್ತದೆ. ಆದರೆ ಹೂಡಿಕೆ ಮಾಡುವಾಗ ಸರಿಯಾದ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಮಾತ್ರ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಎಲ್ಟನ್ ಮೆನೆಜಸ್‌ರವರು ಹೇಳಿದರು.

ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ. ಕಾಲೇಜು ಕುಂದಾಪುರ ಕೋಟೇಶ್ವರ ಇಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿ.ವಿ. ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಸಂಘ ಜಂಟಿಯಾಗಿ ಏರ್ಪಡಿಸಿದ ಹೂಡಿಕೆದಾರರ ಜಾಗೃತಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಹೂಡಿಕೆಯ ಭವಿಷ್ಯದ ಕಷ್ಟಗಳನ್ನು ನಿವಾರಿಸಿ, ಜೀವನದಲ್ಲಿ ಸುಖ-ಸಂತೋಷವನ್ನು ನೀಡುತ್ತದೆ. ಹಾಗಾಗಿ ಎಲ್ಲರು ತಮ್ಮ ಆದಾಯದ ಶೇಕಡಾ ೨೦ ರಷ್ಟು ಆದಾಯವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ ಎಂದು ಕಾರ್ಯಕ್ರಮದ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಶ್ರೀ ಲಿಯೋ ಅಮಲ್ ಎ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ವಹಿಸಿದ್ದರು.

ಕಾಲೇಜಿನ ಐಕ್ಯೂ‌ಎಸಿ ಸಂಚಾಲಕರಾದ  ನಾಗರಾಜ ಯು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ ಬಿ ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ವೆಂಕಟರಾಮ ಭಟ್ ವಂದಿಸಿದರು.  ಶ್ರೇಯ ಮತ್ತು ತಂಡ ಪ್ರಾರ್ಥಿಸಿ,  ಅನನ್ಯ ಅಂತಿಮ ಬಿ.ಕಾಂ. ಕಾರ್ಯಕ್ರಮವನ್ನು ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!