spot_img
Thursday, December 5, 2024
spot_img

ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡ್ಲಕಟ್ಟೆ : ವಾರ್ಷಿಕೋತ್ಸವ ಮತ್ತು ಪ್ರತಿಭಾ ಪ್ರದರ್ಶನ

ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡ್ಲಕಟ್ಟೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ‘ಕಲೋತ್ಸವ-2024’ ಮತ್ತು ಕಾಲೇಜಿನ ವಾರ್ಷಿಕೋತ್ಸವ ಕ್ರಮವಾಗಿ 5  ಮತ್ತು 6 ಜೂನ್ ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ವರ್ಣ ರಂಜಿತವಾಗಿ ಜರುಗಿದ ಕಾರ್ಯಕ್ರಮದಲ್ಲಿ 5 ತಂಡಗಳನ್ನಾಗಿ ವಿಂಗಡಿಸಿದ ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಕಲಾ ಮತ್ತು  ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರದರ್ಶನವನ್ನು ನೀಡಿದರು. ಅದ್ಭುತವಾಗಿ ಮೂಡಿ ಬಂದ ಪ್ರತಿಭಾ ಪ್ರದರ್ಶನದಲ್ಲಿ ಯಕ್ಷಗಾನ, ಭರತನಾಟ್ಯ, ಚಂಡೆವಾದನ, ವೀರಗಾಸೆ, ಕಂಗೀಲು, ರಂಗ ಕುಣಿತ, ಸೋಮ ಕುಣಿತ, ಜನಪದ ನೃತ್ಯ, ಕಿರು ನಾಟಕ ಹೀಗೆ ವಿವಿಧ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಅದ್ಭುತ ಪ್ರದರ್ಶನ ನೀಡಿದ ಅಗಸ್ತ್ಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಅದ್ವೈತ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು. ಚಾಣಕ್ಯ ತಂಡದ ಪ್ರಥಮ ಬಿ ಸಿ ಎ ವಿದ್ಯಾರ್ಥಿನಿ ರಶೀತ ಶೆಟ್ಟಿ ಅತ್ಯುತ್ತಮ ನಿರೂಪಕಿಯಾಗಿ ಮೂಡಿಬಂದರು. ಜೂನ್ 6 ರಂದು ನೆಡೆದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಂಡಾರ್ಕರ್ಸ್ ಪಿ. ಯು ಕಾಲೇಜಿನ ಪ್ರಾಂಶುಪಾಲಾರದ ಡಾI ಜಿ. ಎಂ. ಗೊಂಡ ಭಾಗವಹಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿರ್ವದ್ದಿಗೆ ಬೇಕಾದ ಕಾಲೇಜಿನ ಅತ್ಯುತ್ತಮ ಗುಣ ಮಟ್ಟದ ಮೂಲಸೌಕರ್ಯ ಮತ್ತು ಸಂಪನ್ಮೂಲದ ಬಗ್ಗೆ ಪ್ರಶಂಸಸಿದ ಅವರು ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಕಲಿಕೆಯ ಜೊತೆ ಕ್ರೀಡೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ ನೀಡುತ್ತಿರುವ ಕಾಲೇಜಿನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ವಿದ್ಯಾರ್ಥಿಗಳು ಅನುಕರಣೆ ಮಾಡುವ ಬದಲಾಗಿ ಪ್ರೇರಣೆ ಪಡೆದು ಆ ಹಾದಿಯನ್ನು ಅನುಸರಿಸುವುದು ಹೆಚ್ಚು ಸೂಕ್ತ ಎಂದು ಪ್ರತಿಪಾದಿಸಿದರು. ಇನ್ನೊರ್ವ ಅಥಿತಿಯಾಗಿ ಆಗಮಿಸಿದ ಲೆಕ್ಕ ಪರಿಶೋದಕಿ ಮತ್ತು ಪ್ರಸಿದ್ಧ ಕಲಾವಿದೆ ವೃಂದ ಕೊನ್ನಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿಜೀವನದ ವಿಪುಲ ಅವಕಾಶವನ್ನು  ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.ಕಲಿಕೆಯ ಜೊತೆ ಕಲೆ ಹೇಗೆ ಜೀವನದಲ್ಲಿ ಉತ್ಸಾಹ ಮತ್ತು ಬದಲಾವಣೆಯನ್ನು ತರಬಲ್ಲದು ಎನ್ನುವುದನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲೆಯದ ಡಾI ಪ್ರತಿಭಾ ಎಂ ಪಟೇಲ್ ವಾರ್ಷಿಕ ವರದಿಯನ್ನು ನೀಡಿದರು. ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ ರಾಮಕೃಷ್ಣ ಹೆಗ್ಡೆ ಕಾಲೇಜಿನ ಪ್ರಗತಿ ಮತ್ತು ದೂರದ್ರಷ್ಟಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕಾಲೇಜಿಗೆ ಕೀರ್ತಿತಂದ ದ್ವಿತೀಯ ಬಿ ಸಿ ಎ ವಿದ್ಯಾರ್ಥಿ ಸನಿತ್ ಶೆಟ್ಟಿಯನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದ ಕಳೆದ ಸೆಮಿಸ್ಟರ್ ನ ಅಂತಿಮ ಪರೀಕ್ಷೆಯಲ್ಲಿ ವಿಷಯವಾರು ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಪ್ರತಿ ತರಗತಿಯ ಟಾಪರ್  ಹಾಗು ವಿವಿಧ ಕ್ರೀಡಾ, ಸಂಸ್ಕೃತಿಕ ಮತ್ತು ಇತರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಾಪ್ರಾಂಶುಪಾಲಾರದ ಜಯಶೀಲ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಸುಮನಾ ಅತಿಥಿಗಳನ್ನು ಪರಿಚಯಿಸಿದರು. ಬಿ ಸಿ ಎ ವಿಭಾಗದ ಮುಖ್ಯಸ್ತೆ ಶ್ರೀಮತಿ ಸ್ವರ್ಣರಾಣಿ ಬಹುಮಾನ ವಿಜೇತರ ಪಟ್ಟಿ ಓದಿದರು. ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ರಶೀತ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!