spot_img
Saturday, December 7, 2024
spot_img

ಈ ಜನಾದೇಶ ಮೋದಿ ವಿರುದ್ಧ ಎಂಬುದು ಸ್ಪಷ್ಟ | ಮೋದಿಯವರ ನೈತಿಕ ಹಾಗೂ ರಾಜಕೀಯ ಸೋಲಿದು : ಮಲ್ಲಿಕಾರ್ಜುನ್ ಖರ್ಗೆ

ಜನಪ್ರತಿನಿಧಿ (ನವದೆಹಲಿ) : ಈ ಲೋಕಸಭಾ ಚುನಾವಣೆಯ ಫಲಿತಾಂಶ ಜನತೆಯ ಫಲಿತಾಂಶವಾಗಿದೆ. ಈ ಜನಾದೇಶ ಮೋದಿ ವಿರುದ್ಧ ಎಂಬುದು ಸ್ಪಷ್ಟ.ಅವರ ನೈತಿಕ ಹಾಗೂ ರಾಜಕೀಯ ಸೋಲು. ಇದು ಜನರ ಗೆಲುವು, ಪ್ರಜಾಪ್ರಭುತ್ವದ ಗೆಲುವು ಎಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದು ಮೋದಿ, ಜನರ ನಡುವಿನ ಯುದ್ಧ ಎಂದು ನಾವು ಚುನಾವಣೆಗೂ ಮೊದಲೇ ಹೇಳಿದ್ದೆವು. ಈ ಸಲ ಜನ ಯಾರಿಗೂ ಪೂರ್ಣ ಬಹುಮತ ನೀಡಿಲ್ಲ. ಒಬ್ಬ ವ್ಯಕ್ತಿಯ ಮುಖ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿದೆ. ಅದನ್ನು ಜನರು ಸೋಲಿಸಿದ್ದಾರೆ. ಇದು ಬಿಜೆಪಿಯ ನೈತಿಕ ಸೋಲು ಎಂದು ಹೇಳಿದ್ದಾರೆ.

ಜನರ ತೀರ್ಪನ್ನು ನಾವು ಬಹಳ ವಿನಮ್ರತೆಯಿಂದ ಗೌರವಿಸುತ್ತೇವೆ. ಮೋದಿ ನೇತೃತ್ವದ ಎನ್​ಡಿಎಗೆ ದೊಡ್ಡ ನಷ್ಟವಾಗಿದೆ. ಚುನಾವಣೆ ಪ್ರಚಾರದ ವೇಳೆ ಮೋದಿ ಸುಳ್ಳುಗಳನ್ನು ಹೇಳಿದ್ದಾರೆ. ಆಡಳಿತರೂಢ ಸರ್ಕಾರ ಹೆಜ್ಜೆ ಹೆಜ್ಜೆಗೂ ನಮಗೆ ಅಡ್ಡಿ ಮಾಡುತ್ತಿದ್ದರು. ನಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದರು. ನಮ್ಮ ಬಣದ ನಾಯಕರ ಮೇಲೆ ದಾಳಿ ಮಾಡಿಸಿದ್ದರು. ಆದರೆ ಕಾಂಗ್ರೆಸ್ ಪಾಸಿಟಿವ್ ದೃಷ್ಟಿಯಿಂದಲೇ ಕ್ಯಾಂಪೇನ್ ಮಾಡಿ ಜನರ ಮುಂದೆ ಹೋದೆವು. ಜನರು ನಮ್ಮೊಂದಿಗೆ ಸೇರಿದರು, ನಮ್ಮನ್ನು ಬೆಂಬಲಿಸಿದರು. ಮೋದಿ ಮಾಡಿದ ಕ್ಯಾಂಪೇನ್ ಹಾಗೂ ಮಾತುಗಳನ್ನು ಇತಿಹಾಸ ನೆನಪಿಡುತ್ತದೆ. ಕಾಂಗ್ರೆಸ್​ನ ಪ್ರಣಾಳಿಕೆ ವಿರುದ್ಧ ಕೂಡ ಪ್ರಧಾನಿ ಅಪಪ್ರಚಾರ ಮಾಡಿದರು ಎಂದು ಖರ್ಗೆ ಆರೋಪಿಸಿದ್ದಾರೆ.

ಭಾರತ್ ಜೋಡೋ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದು. 5 ನ್ಯಾಯ್ ಹಾಗೂ ನಮ್ಮ ಗ್ಯಾರಂಟಿಗಳು ಮನೆ ಮನೆಗೆ ತಲುಪಿದವು. ಬಿಜೆಪಿಯವರು ಅಹಂಕಾರದಿಂದ ಸಂವಿಧಾನ ದುರ್ಬಳಕೆ ಮಾಡಿಕೊಂಡರು. ಸರ್ಕಾರಿ ಸಂಸ್ಥೆಗಳನ್ನು ದಬ್ಬಾಳಿಕೆಯಿಂದ ತಮ್ಮ ಕಡೆ ಮಾಡಿಕೊಂಡರು. ಇದು ಜನರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಇದು ಮೋದಿ ಹಾಗೂ ಜನರ ನಡುವಿನ ಯುದ್ಧ ಅಂತ ನಾವು ಹೇಳಿದ್ದೆವು. ಈ ಸಲ ಜನರು ಯಾರಿಗೂ ಪೂರ್ಣ ಬಹುಮತ ನೀಡಿಲ್ಲ. ಕಾಂಗ್ರೆಸ್ ಹಾಗೂ ಇಂಡಿಯಾ ಘಟ ಬಂಧನ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿದೆ ಖರ್ಗೆ ಹೇಳಿದ್ದಾರೆ.‌

https://x.com/ANI/status/1797967911145111975

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!