spot_img
Tuesday, February 18, 2025
spot_img

ಲೋಕಸಭಾ ಚುನಾವಣೆ : ನಾನೇ ಗೆಲ್ತೇನೆ ಎನ್ನುವ ವಿಶ್ವಾಸವಿದೆ, ಅದಕ್ಕಾಗಿಯೇ ಸ್ಪರ್ಧೆಗೆ ನಿಂತಿದ್ದೇನೆ : ಜಯಪ್ರಕಾಶ್‌ ಹೆಗ್ಡೆ

ಜನಪ್ರತಿನಿಧಿ (ಚಿಕ್ಕಮಗಳೂರು) : ನಾನು ಎಂದಿಗೂ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಜನರು ಅಭಿವೃದ್ಧಿಯನ್ನು ಗುರುತಿಸುತ್ತಾರೆ. ಕಳೆದ ಬಾರಿ ಸಂಸದನಾಗಿ ಗೆದ್ದಾಗ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಇದ್ದಿತ್ತು. ಕಳೆದ ಭಾರಿ ಸಂಸದನಾಗಿದ್ದಾಗ ಪ್ರಾರಂಭ ಮಾಡಿದ್ದ ಕಾಮಗಾರಿಗಳೂ ಇನ್ನೂ ಬಾಕಿ ಇವೆ ಅದನ್ನು ಸಂಪೂರ್ಣ ಮಾಡುವುದು ನನ್ನ ಪ್ರಥಮ ಆದ್ಯತೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಗೊಂಡ ಮೇಲೆ ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿಗೆ ಆಗಮಿಸಿದ್ದ ಅವರು ವರದಿಗಾರರಿಗೆ ಸ್ಪಂದಿಸಿ ಮಾತನಾಡಿದರು. ಇಲ್ಲಿನ ಜನರು ಅಭ್ಯರ್ಥಿ ಹಾಗೂ ಅವರು ಮಾಡಿರುಯವ ಅಭಿವೃದ್ಧಿ ಕೆಲಸ ನೋಡಿ ಮತ ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದೀರಿ ಎಂದು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಪುನಃ ಪುನಃ ಹೇಳುವ ಅಗತ್ಯವಿಲ್ಲ. ಧ್ಯಮದವರೂ ಕೂಡ ನಾನು ಏನು ಹೇಳಿದ್ದೇನೋ ಅದನ್ನು ಪೂರ್ತಿಯಾಗಿ ನೋಡಿ ಹಾಕಿ ಎಂದು ಕೋರುತ್ತೇನೆ ಎಂದಿದ್ದಾರೆ.

ಜನರು ಯಾರು ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡಬಹುದು ಎಂಬುವುದನ್ನು ಜನರು ನಿರ್ಧರಿಸಬೇಕು. ಕೆಲಸ ಮಾಡುವಂತದ್ದೇ ಸಂಸದನಾಗುವುದಕ್ಕೆ ಬೇಕಾದ ಅರ್ಹತೆ. ನನ್ನನ್ನು ಒಳಗೊಂಡು ಸಜ್ಜನನಾಗಿ ಇದ್ದರಷ್ಟೇ ಸಾಲದು. ಕೆಲಸ ಮಾಡುವುದು ಮುಖ್ಯ. ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ರೂಪುರೇಷೆ ಮುಂದಿಟ್ಟುಕೊಂಡೇ ಜನರಲ್ಲಿ ಮತ ಯಾಚಿಸುತ್ತೇವೆ. ಯಾರನ್ನೋ ದೂಷಿಸಿ ಮತ ಕೇಳುವುದಿಲ್ಲ ಎಂದವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಒಳಗಿರುವ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಅಸಮಧಾನವಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ. ಟಿಕೇಟ್‌ ಕೇಳುವುದರಲ್ಲಿ ತಪ್ಪೇನಿದೆ ? ಪಕ್ಷ ತೆಗೆದುಕೊಂಡ ನಿರ್ಧಾರದಿಂದ ನಾನು ಸ್ಪರ್ಧಿಸುತ್ತಿದ್ದೇನೆ. ಅಂಶುಮಂತ್‌ ನನ್ನ ಪಕ್ಕದಲ್ಲೇ ಕೂತಿದ್ದರು, ಸುಧೀರ್‌ ಮರೋಳಿ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವ ದಿನ ಬೆಂಗಳೂರಿಗೆ ಬಂದಿದ್ದರು ಎಂದು ಹೇಳಿದ್ದಾರೆ.

ಇನ್ನು, ಕರಾವಳಿ, ಮಲೆನಾಡು, ಬಯಲು ಸೀಮೆಯನ್ನು ಹೊಂದಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಿದು, ಭದ್ರಾ ಡ್ಯಾಂ ನಿಂದ ನೀರು ಬೇರೆ ಜಿಲ್ಲೆಗಳಿಗೆ ಹೋಗುವಾಗ ಟನಲ್‌ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಸಮಸ್ಯೆ ಉದ್ಭವವಾಯಿತು. ನಾನೇ ಖುದ್ದಾಗಿ ನೂರೈವತ್ತು ಕೆರೆಗಳಿಗೆ ನೀರು ಪೂರೈಸಿ ಮುಂದಿನ ಜಿಲ್ಲೆಗೆ ಹೋಗಬೇಕು ಎಂದು ತೀರ್ಮಾನ ಮಾಡಿಸಿದೆ. ಈಗ ಯಾವ ಕೆರೆಗಳಲ್ಲೂ ನೀರಿನ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ನನಗೆ ಗೆಲ್ಲುವ ವಿಶ್ವಾಸವಿದೆ. ಗೆಲ್ಲುವ ವಿಶ್ವಾಸ ಇರುವುದರಿಂದಲೇ ಸ್ಪರ್ಧಗೆ ನಿಂತಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!