spot_img
Saturday, December 7, 2024
spot_img

ಜನಸಾಮಾನ್ಯರ ಸಂಕಲ್ಪ ಮತ್ತೊಮ್ಮೆ ಮೋದಿ ಸರ್ಕಾರ ತರುವುದೇ ಆಗಿದೆ : ಬಿ. ವೈ ವಿಜಯೇಂದ್ರ

ಜನಪ್ರತಿನಿಧಿ (ಬೆಂಗಳೂರು) : ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಎಸ್.ಸಿ- ಎಸ್.ಟಿ  ಸಮುದಾಯಗಳಿಗೆ ಆರ್ಥಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಶಕ್ತಿ ಕೊಡುವ ಪ್ರಾಮಾಣಿಕ ಪ್ರಯತ್ನ ನಡೆದಿದ್ದರೆ ಅದು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ  ಅವರ ಆಡಳಿತ ಅವಧಿಯಲ್ಲಿ ಮಾತ್ರ. ಜನಸಾಮಾನ್ಯರ ಸಂಕಲ್ಪ ಮತ್ತೊಮ್ಮೆ ಮೋದಿ ಸರ್ಕಾರ ತರುವುದೇ ಆಗಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು(ಮಂಗಳವಾರ) ಆಯೋಜಿಸಿದ್ದ ರಾಜ್ಯ ಎಸ್.ಸಿ-ಎಸ್‌.ಟಿ ಪ್ರಮುಖ ನಾಯಕರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ವಿಶ್ವಕರ್ಮ’ ಯೋಜನೆಯ ಮೂಲಕ  ಸ್ವಾಭಿಮಾನಿ ಬದುಕು ಕಟ್ಟಿಕೊಡಬೇಕೆನ್ನುವ ನಿಟ್ಟಿನಲ್ಲಿ ನಮ್ಮದು ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರ್ಕಾರ ಎಂದು ತೋರಿಸಿಕೊಟ್ಟವರು ನಮ್ಮ ನರೇಂದ್ರ ಮೋದಿಯವರು. ಆದ್ದರಿಂದ ಅವರನ್ನು ಮಗದೊಮ್ಮೆ ಪ್ರಧಾನಿ ಮಾಡಲು ಸಮುದಾಯಗಳ ಸಂಪೂರ್ಣ ಬೆಂಬಲ ಪಡೆದು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ಸಂಕಲ್ಪ ಮಾಡಿದ್ದೇವೆ ಎಂದು ಅವರು ಹೇಳಿದ್ಧಾರೆ.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್‌ ಜಿ.ವಿ, ರಾಜ್ಯ ಉಪಾಧ್ಯಕ್ಷರಾದ ಎನ್.ಮಹೇಶ್, ಸಂಸದರಾದ ಡಾ. ಉಮೇಶ್‌ ಜಿ ಜಾದವ್‌, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ, ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಸಿಮೆಂಟ್‌ ಮಂಜು, ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!