spot_img
Wednesday, February 19, 2025
spot_img

ವಂಡ್ಸೆಯಲ್ಲಿ ಸೆ.7 ಮತ್ತು 8ರಂದು ವಿಜೃಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

ವಂಡ್ಸೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 22ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.7 ಮತ್ತು ಸೆ.8ರಂದು ನಡೆಯಲಿದೆ.

ಸೆ.7ರಂದು ಬೆಳಿಗ್ಗೆ 9.50ಕ್ಕೆ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12.45ರಿಂದ ದೀಪ್ತಾ ದಿನೇಶ ಕುಂದರ್ ಇವರಿಂದ ಯಕ್ಷಗಾನ ‘ನೃತ್ಯ ವೈಭವ’ ನಡೆಯಲಿದೆ. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ ಜಗ್ಗಾ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ಪೂಜಾ ಕಾರ್ಯಕ್ರಮ, 5.30ಕ್ಕೆ ‘ಭಜನಾ ಕಾರ್ಯಕ್ರಮ’-ಶ್ರೀರಾಘವೇಂದ್ರ ಭಜನಾ ಮಂಡಳಿ ವಂಡ್ಸೆ ಇವರಿಂದ. ಸಂಜೆ 6.30ಕ್ಕೆ ವಂಡ್ಸೆ ಅಂಗನವಾಡಿ ಪುಟಾಣಿಗಳಿಂದ ‘ನೃತ್ಯ ಕಾರ್ಯಕ್ರಮ’ ನಡೆಯಲಿದೆ. 7.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾ ಪುರಸ್ಕಾರವನ್ನು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ನೆರವೇರಿಸಲಿದ್ದಾರೆ. ಮಾಜಿ ಶಾಸಕರಾದ ಬಿ.ಎಮ್.ಸುಕುಮಾರ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಗೀತಾ ಅವಿನಾಶ್, ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ವಾತ್ಸಲ್ಯ ಕಾಂಪ್ಲೆಕ್ಸ್ ಮಾಲೀಕರಾದ ಎನ್.ಆನಂದ ಶೆಟ್ಟಿ ಸಬ್ಲಾಡಿ, ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಗಿಳಿಯಾರು ಶ್ರೀಧರ ಶೆಟ್ಟಿ, ದುರ್ಗಾಶ್ರೀ ಎಂಟರ್ ಪ್ರೈಸಸ್‍ನ ನಿಶ್ಚಿತ್ ಶೆಟ್ಟಿ, ವಂಡ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕೆ.ಶ್ರೀನಿವಾಸ ಪೂಜಾರಿ, ಗ್ರಾ.ಪಂ. ಮಾಜಿ ಸದಸ್ಯ ಗುಂಡು ಪೂಜಾರಿ,ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಬ್ರಹ್ಮಶ್ರೀ ಚಿಕನ್ ಸೆಂಟರ್ ಮಾಲೀಕ ದಿನೇಶ ಬಿಲ್ಲಾ, ಗೋವಾ ಉದ್ಯಮಿ ರಾಘವ ಶೆಟ್ಟಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಗಣೇಶ ಬಳೆಗಾರ್ ಕಟ್ ಬೇಲ್ತೂರು, ವೆಂಕಟೇಶ್ ಶೆಟ್ಟಿ ತೆಂಕೊಡಿಗೆ, ಬೆಂಗಳೂರು ಉದ್ಯಮಿ ನವೀನ ಕುಮಾರ್ ಶೆಟ್ಟಿ, ಬೆಂಗಳೂರು, ಮುಂಬೈ ಉದ್ಯಮಿ ರಾಘವೇಂದ್ರ ಪೂಜಾರಿ, ಮರಿಯಪ್ಪ ಜ್ಯುವೆಲ್ಲರ್ಸ್ ನ ಶೇಷಗಿರಿ ಆಚಾರ್ಯ, ಅವಿನಾಶ್ ಶೆಟ್ಟಿ ವಂಡ್ಸೆ, ಮಮತಾ ಎಸ್.ಕುಂದರ್ ಅರೆಕಲ್ಲು ವಂಡ್ಸೆ, ಗ್ರಾ.ಪಂ ಮಾಜಿ ಸದಸ್ಯ ರಂಜು ಶ್ಯಾಮಿಯಾನದ ಮುಖ್ಯಸ್ಥ ಉದಯ ಕೆ ನಾಯ್ಕ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ಬಿ.ರಾಜೇಂದ್ರ ಗಾಣಿಗ, ರವಿ ಸುವರ್ಣ ಉದ್ದಿನಬೆಟ್ಟು ವಂಡ್ಸೆ (ಬಾರಕೂರು), ಆಶೀರ್ವಾದ್ ಫ್ರೆಂಡ್ಸ್ ನ ಮಹೇಶ ಗಾಣಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ 10 ಗಂಟೆಯಿಂದ ಸ್ಥಳೀಯರಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 11 ಗಂಟೆಗೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಾಟಕ-ವಾಚ್ ಮ್ಯಾನ್ ಪ್ರದರ್ಶನಗೊಳ್ಳಲಿದೆ.

ಸೆ.8ರಂದು ಆದಿತ್ಯವಾರ ಸಂಜೆ ವಿಜೃಂಭಣೆಯ ಪುರಮೆರವಣಿಗೆಯಲ್ಲಿ ಟ್ಯಾಬ್ಲೋ, ಕುಣಿತ ಭಜನೆಯೊಂದಿಗೆ ವಂಡ್ಸೆ ಕಳುವಿನಬಾಗಿಲು ಶ್ರೀ ಚಕ್ರ ನದಿಯಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ಥಂಭನ ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಗಿರೀಶ್ ಎನ್ ನಾಯ್ಕ್, ಗೌರವಾಧ್ಯಕ್ಷರಾದ ಪ್ರಕಾಶ್ ಪೂಜಾರಿ ಜಡ್ಡು, ಕಾರ್ಯದರ್ಶಿ ವಿಠಲ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!