Sunday, October 13, 2024

ರಸ್ತೆಗೆ ಆಯಿಲ್ ಸೋರಿಕೆ: ಸ್ಕಿಡ್ ಆಗಿ ಬಿದ್ದ ದ್ವಿಚಕ್ರ ವಾಹನಗಳು: ಹಲವಾರು ಮಂದಿಗೆ ಗಾಯ

ಕುಂದಾಪುರ: ಕುಂದಾಪುರ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಸಂಚರಿಸಿದ ಟ್ಯಾಂಕರ್‌ನಿಂದ ಆಯಿಲ್ ಸೋರಿದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕುಗಳು ನಿಯಂತ್ರಣಕ್ಕೆ ಸಿಗದೆ ಅಪಘಾತಕ್ಕಿಡಾದ ಘಟನೆ ಕುಂದಾಪುರದಲ್ಲಿ ಶನಿವಾರ ನಡೆದಿದೆ.

ಶುಕ್ರವಾರ ತಡರಾತ್ರಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ತೆಕ್ಕಟ್ಟೆಯಿಂದ ಸಂಗಮ ತನಕ ಆಯಿಲ್ ಸೋರಿಕೆಯಾಗಿದೆ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಸಂಚರಿಸಿದ ವಾಹನಗಳ ಸವಾರರಿಗೆ ಆಯಿಲ್ ಬಿದ್ದಿರುವುದು ಗಮನಕ್ಕೆ ಬಾರದೆ ಅದರ ಮೇಲೆ ಚಲಿಸಿದ ಪರಿಣಾಮ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಹಲವಾರು ಮಂದಿ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದಿದ್ದು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರಂತರವಾಗಿ ವಾಹನಗಳು ಸ್ಕಿಡ್ ಆಗುತ್ತಿರುವುದರಿಂದ ಗಮನಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ತೆಕ್ಕಟ್ಟೆಯಿಂದ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಆಯಿಲ್ ಚೆಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದರು.

ಗಣೇಶ ಚತುರ್ಥಿಯಾದ್ದರಿಂದ ಸಹಜವಾಗಿಯೇ ರಸ್ತೆಯಲ್ಲಿ ವಾಹನ ದಟ್ಟಣಿ ಇತ್ತು. ಆನೆಗುಡ್ಡೆ ಮೊದಲಾದ ದೇವಸ್ಥಾನಕ್ಕೆ ಹೋಗುವ ಭಕ್ತರು ಸಮಸ್ಯೆಗೆ ಸಿಲುಕಿದರು. ಮಧ್ಯಾಹ್ನ ೧೨.೩೦ರ ಸುಮಾರಿಗೆ ಹೆದ್ದಾರಿಯನ್ನು ಸರಿಪಡಿಸಲಾಯಿತು. ಒಟ್ಟಾರೆಯಾಗಿ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯಕ್ಕೆ ಹಲವಾರು ಮಂದಿ ಆಸ್ಪತ್ರೆ ಸೇರುವಂತಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!