spot_img
Saturday, March 14, 2026
spot_img

ಅರಿವೇ ಗುರು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ

“ಸೂರ್ಯ ಜಗತ್ತನ್ನು ಬೆಳಗಿದರೆ ನಮ್ಮ ಅಂತರಂಗವನ್ನು ಬೆಳಗಲು ಗ್ರಂಥಾಲಯಗಳು ಬೇಕು. ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಪಸರಿಸುವ ದಿನದಿಂದ ದಿನಕ್ಕೆ ಬದಲಾವಣೆಯನ್ನು ನಿರ್ವಹಿಸುವ, ಖರ್ಚು ಮಾಡಿದಷ್ಟು ವೃದ್ಧಿಸುವ ಸರಸ್ವತಿಯ ಭಂಡಾರ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಹಾಗೂ ವೃತ್ತಿ ಜೀವನ ಹಾಗೂ ಆದರ್ಶ ವ್ಯಕ್ತಿತ್ವ ರೂಪಿಸುವಲ್ಲಿ ಗ್ರಂಥಾಲಯ ಮಹತ್ವಪೂರ್ಣವಾದುದು. ಸಣ್ಣ ವಯಸ್ಸಿನಲ್ಲಿಯೇ ಓದುವ ಹವ್ಯಾಸ, ಆಸಕ್ತಿ ವಿದ್ಯಾರ್ಥಿಗಳ ಭವ್ಯ ಬದುಕಿಗೆ ಭದ್ರ ಅಡಿಪಾಯವನ್ನು ನೀಡುತ್ತದೆ ” ಎಂದು ವಾಸುದೇವ ಕಾಮತ್ ಸ್ಟಾಕ್ ಬ್ರೋಕರ್ ಆನಂದ ರಾಟಿ ಷೇರ್ಸ್ ಅಂಡ್ ಸ್ಟಾಕ್ಸ್ ಲಿಮಿಟೆಡ್ ಕುಂದಾಪುರ ಇವರು ಹೇಳಿದರು.

ಇವರು ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಯುವ ಬ್ರಿಗೇಡ್ ಸಂಸ್ಥೆಯವರು ನವೀಕರಿಸಿ ನೀಡಿದ ಅರಿವೇ ಗುರು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಸಾಮ್ರಾಟ್ ಶೆಟ್ಟಿ ಗೌರವಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಂಥಾಲಯ ನವೀಕರಣಕ್ಕೆ ಸಹಕರಿಸಿದ ವಾಸುದೇವ ಕಾಮತ್ ಇವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ,ಪ್ರಕಾಶ್ಚಂದ್ರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್, ಪ್ರಮೋದ್ ಶಂಕರನಾರಾಯಣ ಮಾಜಿ ಜಿಲ್ಲಾ ಸಂಚಾಲಕರು ಯುವ ಬ್ರಿಗೇಡ್, ಅಣ್ಣಪ್ಪ ನಾಯಕ್ ಕುಮಟಾ, ಯುವ ಬ್ರಿಗೇಡ್ ದಕ್ಷಿಣ ರಾಜ್ಯ ಸಹ ಸಂಚಾಲಕರು,
ಮಂಜುನಾಥ್ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರು ಉಡುಪಿ , ನಿತ್ಯಾನಂದ ಶೆಟ್ಟಿ ಅಧ್ಯಕ್ಷರು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಕುಂದಾಪುರ, ಶ್ರೀಮತಿ ರಜನಿ .ಎಸ್. ಹೆಗಡೆ ಪ್ರಭಾರ ಮುಖ್ಯೋಪಾಧ್ಯಾಯರು,ಯುವ ಬ್ರಿಗೇಡ್ ನ ಕಾರ್ಯಕರ್ತರಾದ, ಸಂದೀಪ್ ಆಜ್ರಿ,ಭರತ್ ಬಸ್ರೂರು, ಸರ್ವೋತ್ತಮ ಆಚಾರ್ಯ ಹಾಲಾಡಿ, ರಾಘವೇಂದ್ರ ಮರಾಶಿ, ರಾಜೇಂದ್ರ ಕಂಡ್ಲೂರು ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ,ಹಳೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ರಜನಿ ಹೆಗಡೆ ಸ್ವಾಗತಿಸಿ, ಪ್ರಮೋದ್ ಶಂಕರನಾರಾಯಣ ಪ್ರಾಸ್ತಾವಿಕ ಮಾತುಗಳಾಡಿದರು. ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಕ್ಷಕರಾದ ಅಣ್ಣಪ್ಪ .ಎಮ್. ಗೌಡ, ಅಜಯ್ ಕುಮಾರ್ ಶೆಟ್ಟಿ, ಶ್ರೀಮತಿ ಜ್ಯೋತಿ ,ಶ್ರೀಮತಿ ರತ್ನ ,ಶ್ರೀಮತಿ ಲಕ್ಷ್ಮಿ ಶೆಟ್ಟಿ, ಕುಮಾರಿ ಅಶ್ವಿನಿ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!