spot_img
Tuesday, July 28, 2026
spot_img

ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ-ಡಾ.ಜಿ.ಶಂಕರ್ | ಮೊಗವೀರ ಸಂಘಟನೆ ಹಾಲಾಡಿ-ಶಂಕರನಾರಾಯಣ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಶಂಕರನಾರಾಯಣ: ಮೊಗವೀರ ಯುವ ಸಂಘಟನೆ ಸಮಾಜವನ್ನು ಒಗ್ಗೂಡಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜದ ತನ್ನಿಂದಾದ ಸಹಾಯ ನೀಡುವ ಮನಸ್ಸನ್ನು ಹೊಂದಬೇಕು. ಅನವಶ್ಯಕವಾಗಿ ಸಮಾಜಕ್ಕೆ ಟೀಕೆಗಳನ್ನು ಬಂದಾಗ ಒಗ್ಗಟ್ಟಿನಿಂದ ಸಮಾಜದ ಪರವಾಗಿ ನಿಲ್ಲಬೇಕು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಅವರು ಮೊಗವೀರ ಯುವ ಸಂಘಟನೆ ಹಾಲಾಡಿ ಶಂಕರನಾರಾಯಣ ಘಟಕ ಆಶ್ರಯದಲ್ಲಿ ಜು.26ರಂದು ಶ್ರೀಮತಿ ಶಾಲಿನಿ ಜೆ.ಶಂಕರ್ ಕನ್ವೆನ್ಸನ್ ಸೆಂಟರ್ ಹಾಲಾಡಿ ಇಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯುವ ಸಂಘಟನೆಯ 20ನೇ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಮೊಗವೀರ ಸಮಾಜದ ಸಂಘಟನೆ ಕರಾವಳಿ ಭಾಗದಲ್ಲಿ ಉತ್ತಮವಾಗಿ ಬೆಳೆದು ಬಂದಿದೆ. ಮೂಲ ಸಂಪ್ರದಾಯ ಬದ್ದವಾಗಿ ಮೊಗವೀರರು ನಡೆದುಕೊಂಡು ಬರುತ್ತಿದ್ದಾರೆ. ವಿದ್ಯೆ ಹಾಗೂ ಆರ್ಥಿಕವಾಗಿ ಸಮಾಜ ಮುಂದೆ ಬರಬೇಕು. ಸಮಾಜದಲ್ಲಿ ಹಿಂದುಳಿದವರನ್ನು ಮುಂದೆ ತರಬೇಕು. ಸಮುದಾಯದ ನಾಯಕರಿಗೆ ಬೆಂಬಲ ನೀಡುವ ಮೂಲಕ ಅವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಮೊಗವೀರ ಯುವ ಸಂಘಟನೆ ಹಾಲಾಡಿ-ಶಂಕರನಾರಾಯಣ ಘಟಕದ ಅಧ್ಯಕ್ಷ ರಾಘವೇಂದ್ರ ಶಂಕರನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರವೀಶ್ ಎಸ್.ಕೊರವಡಿ, ಮೊಗವೀರ ಮಹಾಜನ ಸಂಘ ದಕ್ಷಿಣ ಕನ್ನಡ ಮತ್ತು ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಉದ್ಯಮಿಗಳಾದ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ, ಹೃದಯ ಬೆಂಗಳೂರು, ಕೇಶವ ಬಿ.ಕಾಂಚನ್ ಬೆಂಗಳೂರು, ಶಿವರಾಮ ಮೊಗವೀರ ಮರೂರು, ಪ್ರಶಾಂತ್ ಕೋಣಿಹರ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಜಯಂತ ಅಮೀನ್ ಕೋಡಿ, ಪ್ರಧಾನ ಕಾರ್ಯದರ್ಶಿ ಶೇಖರ್ ತೋಳಾರ್, ಉಪಾಧ್ಯಕ್ಷ ಸುರೇಶ್ ಕೆ.ಕೋಟ, ಹಾಲಾಡಿ-ಶಂಕರನಾರಾಯಣ ಘಟಕದ ಕಾರ್ಯದರ್ಶಿ ಲೋಕೇಶ್ ಮರಾತೂರು ಉಪಸ್ಥಿತರಿದ್ದರು.
ಹಾಲಾಡಿ-ಶಂಕರನಾರಾಯಣ ಘಟಕದ ನೂತನ ಅಧ್ಯಕ್ಷರಾಗಿ ಶರತ್ ಸೌಡ, ಕಾರ್ಯದರ್ಶಿಯಾಗಿ ರಂಜಿತ್ ಬೈಲೂರು ಹಾಗೂ ಪದಾಧಿಕಾರಿಗಳು ಪದಪ್ರದಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಚಿನ್ನದ ಪದಕ ಪುರಸ್ಕೃತ ಎ.ಎನ್.ಎಫ್ ಪಡೆಯ ರಾಘವೇಂದ್ರ ಕಾಂಚನ್ ಕುಪ್ಪಾರು, ಪಿ.ಎಚ್.ಡಿ ಪದವಿ ಪಡೆದ ಡಾ.ಗುರುಚರಣ್ ಭಾಸ್ಕರ ಮೆಂಡನ್, ಮೆಸ್ಕಾಂ ಜೆ‌ಇ ಶಶಿಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಾರ್ಥನಾ ಬಿ., ಜೆ.ಎನ್ ಜ್ಞಾನ ಪುತ್ರನ್, ಸಂಕೇತ್ ಎಸ್. ಎಂ., ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ಸಹಾಯ ಧನ, ಆರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮೊದಲಾದ ಸೌಲಭ್ಯಗಳನ್ನು ವಿತರಿಸಲಾಯಿತು.
ಮೊಗವೀರ ಯುವ ಸಂಘಟನೆ ಹಾಲಾಡಿ-ಶಂಕರನಾರಾಯಣ ಘಟಕದ ಗೌರವಾಧ್ಯಕ್ಷ ರಘುರಾಮ ಎಂ. ಸ್ವಾಗತಿಸಿದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಗಣೇಶ್ ಕಾಂಚನ್ ಪ್ರಾಸ್ತವಿಕವಾಗಿ ಮಾತನಾಡಿದರು. ಜಗದೀಶ ಬಿದ್ಕಲ್‌ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ರಂಜಿತ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!