spot_img
Monday, April 27, 2026
spot_img

ಕುಂದಾಪುರ: ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಉದ್ಘಾಟನೆ

ಭಾರತೀಯ ಸಂಸ್ಕೃತಿಯು ಅರ್ಧನಾರೀಶ್ವರ ತತ್ವದ ಮೇಲೆ ನಿಂತಿದೆ-ಪಾರ್ವತಿ ಜಿ.ಐತಾಳ್

ಕುಂದಾಪುರ: ”ಮಹಿಳೆಯರನ್ನು ಮಹಿಳಾ ದಿನಾಚರಣೆಯಂದು ಹಾಡಿ ಹೊಗಳುವುದಕ್ಕಿಂತಲೂ ಅವರು ಅಂತರಂಗದಲ್ಲಿ ಅನುಭವಿಸುವ ನೋವುಗಳೇನು ಮತ್ತು ಆ ನೋವಿಗೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಅವರ ಕಷ್ಟಗಳನ್ನು ಸಮಾನವಾಗಿ ಹಂಚಿಕೊಳ್ಳುವ ಕೆಲಸ ಆಗಬೇಕಾಗಿದೆ. ಇತಿಹಾಸ-ಪರಂಪರೆ-ಪದ್ಧತಿಗಳನ್ನು ಅನುಸರಿಸುವ ನೆಪದಲ್ಲಿ ಹೆಣ್ಣಿನ ಮೇಲೆ ಮನೆಯೊಳಗಿನ ಎಲ್ಲರ ಚಾಕರಿ ಮಾಡಿಸುವುದನ್ನು ಇಂದಿನ ಬದಲಾದ ಯುಗದಲ್ಲಿ ನಿಲ್ಲಿಸಬೇಕಾಗಿದೆ. ಮಾನವೀಯ ನೆಲೆಯಿಂದ ಅವಳ ವ್ಯಕ್ತಿತ್ವವನ್ನು ಗುರುತಿಸಿ ಅವಳ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕಾಗಿದೆ. ಭಾರತೀಯ ಭವ್ಯ ಸಂಸ್ಕೃತಿಯು ಅರ್ಧನಾರೀಶ್ವರ ತತ್ವದ ಮೇಲೆ ನಿಂತಿದೆ. ಅಂದ ಮೇಲೆ ಹೆಣ್ಣು-ಗಂಡು ಎಲ್ಲಾ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದೇ ನ್ಯಾಯ. ಈ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಧ್ಯೇಯವಾಗಬೇಕು” ಎಂದು ಖ್ಯಾತ ಲೇಖಕಿ ಪಾರ್ವತಿ ಜಿ. ಐತಾಳ್ ಹೇಳಿದರು.

ಅವರು ಗುರುವಾರ ಕುಂದಾಪುರ ಜನಪ್ರತಿನಿಧಿ ಸಂಸ್ಥೆಯಲ್ಲಿ, ನೂತನವಾಗಿ ಅಸ್ತಿತ್ವಕ್ಕೆ ಬಂದ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ಯನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ರಂಗಭೂಮಿ ಕಲಾವಿದೆ-ಚಿತ್ರನಟಿ-ಲೇಖಕಿ ಪೂರ್ಣಿಮಾ ಸುರೇಶ್, ”ಹೆಣ್ಣು ಸಮಾಜದ ತಾರತಮ್ಯ ಧೋರಣೆಯಿಂದ ಅನುಭವಿಸುವ ಕಷ್ಟಗಳ ಕುರಿತು ಮಾತನಾಡುತ್ತಾ ಕಲಾಕ್ಷೇತ್ರದಲ್ಲೂ ಸಾಹಿತ್ಯ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ತಮಗೆ ಸಹಜವಾಗಿ ಅನ್ನಿಸಿದ್ದನ್ನು ಹೇಳಲು ಭಯಪಡುವಂಥ ಪರಿಸ್ಥಿತಿಯಿದೆ. ಆದರೆ ಕೊಲ್ಲಿರಾಷ್ಟ್ರಗಳನ್ನು ಹೆಣ್ಣನ್ನು ಒಂದು ವಸ್ತುವಿನಂತೆಯೋ ಪ್ರಾಣಿಯಂತೆಯೋ ಕಾಣುವ ತಾತ್ಸಾರ ಭಾವದಿಂದ ನಾವು ಭಾರತೀಯರು ಸಂಪೂರ್ಣ ಮುಕ್ತರಾಗಿದ್ದೇವೆ. ಆ ಮಟ್ಟಿಗೆ ನಾವು ಅದೃಷ್ಟವಂತರು” ಎಂದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ ಲೇಖಕಿ, ಕಲಾವಿದೆ ಸುಪ್ರಸನ್ನ ನಕ್ಕತ್ತಾಯರು ವೇದಿಕೆಗೆ ಶುಭಕೋರಿ ಮಹಿಳೆಯ ಕುರಿತು ತಾವು ಬರೆದ ಕವಿತೆಯನ್ನು ವಾಚಿಸಿದರು. ಉಡುಪಿ ಜಿಲ್ಲಾ ಕ.ಸಾ.ಪ.ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜನಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆಯವರು ಸಂದರ್ಭೋಚಿತ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಚಿತ್ರಕಲಾವಿದೆ ನೇಹಾ ಗಂಗೊಳ್ಳಿಯವರನ್ನು ಸನ್ಮಾನಿಸಲಾಯಿತು.

ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಕಾರ್ಯದರ್ಶಿ ಲೇಖಕಿ ಪೂರ್ಣಿಮಾ ಕಮಲಶಿಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಧಾಕಾರಂತ, ಜಯಲಕ್ಷ್ಮಿ ಕಾರಂತರು ಆರಂಭಗೀತೆ ಹಾಡಿದರು. ಸುಮತಿ ಶೆಣೈ ಅತಿಥಿಗಳ ಪರಿಚಯಿಸಿದರು. ರೇಡಿಯೋ ಕುಂದಾಪುದ ಜ್ಯೋತಿ ಸಾಲಿಗ್ರಾಮ ಸನ್ಮಾನ ಪತ್ರವನ್ನು ವಾಚಿಸಿದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯ ಜತೆ ಕಾರ್ಯದರ್ಶಿ ಜೆಸ್ಸಿ ಎಲಿಜಬೆತ್ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!