


kundapura: ಬಗ್ವಾಡಿ ಕೋಟೆಯಲ್ಲಿದ್ದ ನಾಗಸಾನಿಧ್ಯವನ್ನು ದೇವಸ್ಥಾನದ ಹತ್ತಿರದ ಅಶ್ವತ್ಥಕಟ್ಟೆಯ ಸಮೀಪದಲ್ಲಿ ಸ್ಥಾಪನೆ ಮಾಡುವ ಸಲುವಾಗಿ ಶಿಲಾಮಯ ನಾಗಪೀಠ, ಪ್ರತಿಷ್ಠಾಪನೆಯನ್ನು ಸ್ನೇಹಲತಾ ಮತ್ತು ಚಂದ್ರ ನಾಯ್ಕ್, ವಕೀಲರು ಹೈಕೋರ್ಟ್ ಮಂಬೈ ಹಾಗೂ ಕುಟುಂಬಸ್ಥರು, ಬೆದ್ರಾಡಿಮನೆ ನಾಡ ಇವರು ಸೇವಾ ರೂಪದಲ್ಲಿ ಸಮರ್ಪಿಸಲಿದ್ದು, ಭೂಮಿ ಪೂಜಾ ಕಾರ್ಯಕ್ರಮ ಮಾ.೧೨ರಂದು ನಡೆಯಿತು.
ದೇವಸ್ಥಾನದ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ, ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಮಹಾಜನ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಕೆ ಕಾಂಚನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ, ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಹೆರಿಯಣ್ಣ ಚಾತ್ರಬೆಟ್ಟು, ನಾಗೇಶ ಕಾಂಚನ್ ನಾಡ, ಎಂ.ಎಂ.ಸುವರ್ಣ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಮ್ ಕೆ.ಎಮ್., ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ.ನಾಯ್ಕ ಚಾತ್ರಬೆಟ್ಟು, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್ ಕಳುವಾಡಿ, ಹಾಲಾಡಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಸ್ತ್ರೀಶಕ್ತಿಯ ಅಧ್ಯಕ್ಷೆ ಸುಮಿತ್ರಾ ಆನಂದ, ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಮಾಜಿ ಕಾರ್ಯದರ್ಶಿ ಸುರೇಶ ವಿಠಲವಾಡಿ, ಕೋಶಾಧಿಕಾರಿ ಸುಧಾಕರ ಕಾಂಚನ್, ಗುರಿಕಾರರು ಉಪಸ್ಥಿತರಿದ್ದರು.