Friday, October 18, 2024

ವಾಲ್ಮೀಕಿ, ಮುಡಾ ಹಗರಣಗಳ ಗೊಂದಲ : ಹೈಕಮಾಂಡ್‌ ಭೇಟಿ ಮಾಡಿ ಚರ್ಚಿಸಲಿರುವ ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗುತ್ತಿರವ ಹಗರಣ, ಮಹರ್ಷಿ ವಾಲ್ಮೀಕಿ ನಿಗಮ ಹಗರಣಗಳ ಮಧ್ಯೆ ಮುಂಗಾರು ಅಧಿವೇಶನ ಮುಗಿದಿದೆ. ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿರುವುದರ ಮಧ್ಯೆ ಸರ್ಕಾರದ ಸಿಎಂ ಬದಲಾವಣೆ ವಿಚಾರ ಕೂಡ ಮತ್ತೆ ಮೇಲೆ ಬಂದಿದೆ.

ಇಂತಹ ವಿದ್ಯಮಾನಗಳ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂದಿನ ಮಂಗಳವಾರ ಜುಲೈ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಸೇರಿ ಇತರ ಹಿರಿಯ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕೇಳಿಬರುತ್ತಿರುವ ಹಗರಣಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಈ ಎರಡು ಹಗರಣಗಳ ಆರೋಪಗಳು ಒಂಬತ್ತು ದಿನಗಳ ಸಂಪೂರ್ಣ ಮುಂಗಾರು ಅಧಿವೇಶನವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಂಪೂರ್ಣ ನುಂಗಿಹಾಕಿದೆ.

ಈ ಎರಡು ವಿಚಾರಗಳು ಕಾಂಗ್ರೆಸ್‌ಗೆ ಸದ್ಯಕ್ಕೆ ಹಿನ್ನಡೆಯಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಕೆಲವೇ ದಿನಗಳಲ್ಲಿ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುವ ಬಿಜೆಪಿಯ ಯೋಜನೆ ಕಾಂಗ್ರೆಸ್‌ ಸರ್ಕಾರದ ಆಡಳಿತ ವರ್ಚಸ್ಸಿಗೆ ಕಾರಣವಾಗಬಹುದು.

ಈ ಎರಡು ಹಗರಣಗಳು ಹಾಗೂ ಇತರ ಸಮಸ್ಯೆಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ರಾಜ್ಯ ಸರ್ಕಾರದ ನಾಯಕರು ವಿಧಾನಮಂಡಲದ ಅಧಿವೇಶನದ ಉದ್ದಕ್ಕೂ ಸಮರ್ಥನೆಗೆ ನಿಂತಿರುವುದು ಕೂಡ ಕಂಡು ಬಂತು ಎನ್ನುವುದು ಇಲ್ಲಿ ಮುಖ್ಯಾಂಶ.

ದೆಹಲಿಗೆ ತೆರಳುವ ಮುನ್ನ (ಸೋಮವಾರ ಜುಲೈ 29) ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಕಾವೇರಿ ನದಿಗೆ ‘ಬಾಗಿನ’ ಅರ್ಪಿಸಲಿದ್ದಾರ ಎಂದೂ ಕೂಡ ತಿಳಿದು ಬಂದಿದೆ. ಅದರಲ್ಲಿ ಜಿಲ್ಲೆಯ ಸಚಿವರು ಹಾಗೂ ಇತರ ಕೆಲವು ನಾಯಕರು ಭಾಗವಹಿಸಲಿದ್ದಾರೆ.

ಇಂದು ಸಚಿವ ಸಂಪುಟ ಸಭೆ ಸಾಧ್ಯತೆ: ಈ ನಡುವೆ, ಇಂದು ಸಚಿವ ಸಂಪುಟ ಸಭೆ ಸೇರಿ ಅಗತ್ಯ ವಿಷಯಗಳನ್ನು ಚರ್ಚೆ ಮಾಡುವ ಸಾಧ್ಯತೆಯಿದ್ದು, ವಾಲ್ಮೀಕಿ ಹಾಗೂ ಮುಡಾ ಸಮಸ್ಯೆಗಳ ಬಗ್ಗೆ ಸಚಿವರುಗಳು ಅನೌಪಚಾರಿಕವಾಗಿ ಚರ್ಚಿಸಿ ಸಮಸ್ಯೆಗಳಿಗೆ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆಯಿದೆ.

ವಿಧಾನಮಂಡಲ ಅಧಿವೇಶನ ಇಂದಿನವರೆಗೆ ನಡೆಸಲು ಆರಂಭದಲ್ಲಿ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಅಧಿವೇಶನವನ್ನು ನಿನ್ನೆ ವಿಧಾನಸಭಾ ಸ್ಪೀಕರ್‌ ಯು. ಟಿ ಖಾದರ್‌  ಅನಿರ್ದಿಷ್ಟಾವಧಿಗೆ ಮುಂದೂಡಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!