Friday, November 8, 2024

ಕೊಲ್ಲೂರಿನಲ್ಲಿ ದರ್ಶನ್‌ ಪತ್ನಿ ನವಚಂಡಿಕಾ ಯಾಗ | ಇಂದು ಪೂರ್ಣಾಹುತಿಯಲ್ಲಿ ಭಾಗಿ

ಜನಪ್ರತಿನಿಧಿ (ಕೊಲ್ಲೂರು) : ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಎರಡು ತಿಂಗಳಾಗುತ್ತಾ ಬಂದಿದೆ.

ಈ ಸಂಕಷ್ಟದಿಂದ ಆದಷ್ಟು ಬೇಗನೆ ತನ್ನ ಪತಿ ಹೊರಬರಲಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕೆಯ ಮೋರೆ ಹೋಗಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಪುರಾಣ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ.

ವಿಜಯಲಕ್ಷ್ಮಿ ತಮ್ಮ ಆಪ್ತರೊಂದಿಗೆ ನಿನ್ನೆ(ಗುರುವಾರ) ಅಪರಾಹ್ನ ಕೊಲ್ಲೂರಿಗೆ ಆಗಮಿಸಿ ನರಸಿಂಹ ಅಡಿಗ ಎಂಬುವವರ ಬಳಿ ನವಚಂಡಿಕಾ ಯಾಗವನ್ನು ಮಾಡಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಹೋಮ-ಹವನ ನಡೆಯುತ್ತಿದ್ದು, ಇಂದು(ಶುಕ್ರವಾರ) ಬೆಳಗ್ಗೆ ಪೂರ್ಣಾಹುತಿಯಲ್ಲಿ ವಿಜಯಲಕ್ಷ್ಮೀ ಭಾಗಿ ಆಗಿದ್ದಾರೆ. ದರ್ಶನ್ ಬಂಧನ ಮುಕ್ತಿಗಾಗಿ ವಿಜಯಲಕ್ಷ್ಮೀ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯಲಕ್ಷ್ಮಿ ಆಪ್ತೆಯರೊಂದಿಗೆ ದೇವಸ್ಥಾನದಲ್ಲಿ ನವಚಂಡಿಕಾ ಯಾಗ ಮಾಡಿಸುತ್ತಿರುವ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ.

ದರ್ಶನ್ ಬಂಧನ ಬಳಿಕ ವಾರಕ್ಕೊಮ್ಮೆ ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಹೋಗಿ ಪತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬರುತ್ತಿದ್ದಾರೆ. ಮೊನ್ನೆಯಷ್ಟೇ ಮೈದುನ ದಿನಕರ್ ತೂಗುದೀಪ ಜೊತೆ ವಿಜಯಲಕ್ಷ್ಮಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.

ತಮಗೆ ಕಷ್ಟ, ಆರೋಪಗಳು ಬಂದಾಗ ಅನೇಕ ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಕೊಲ್ಲೂರು ಮೂಕಾಂಬಿಕೆ ಅಮ್ಮನ ಮೊರೆ ಹೋಗುವುದು ಸಾಮಾನ್ಯ, ದೇಶದ 51 ಶಕ್ತಿಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕೆ ಕೂಡ ಒಂದೆಂದು ನಂಬಲಾಗಿದ್ದು, ಇಲ್ಲಿಗೆ ವಿಶೇಷ ಶಕ್ತಿಯೂ ಇದೆ. ಇಂತಹ ಶಕ್ತಿಪೀಠದಲ್ಲಿ ವಿಜಯಲಕ್ಷ್ಮೀ ನವಚಂಡಿಕಾ ಯಾಗ ಮಾಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!