spot_img
Thursday, December 5, 2024
spot_img

ರಾಜ್ಯದಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಸಿದ್ಧಗಂಗಾ ವಿದ್ಯಾಸಂಸ್ಥೆಯ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ !

ಜನಪ್ರತಿನಿಧಿ :  ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ಧಗಂಗಾಮಠ, ತುಮಕೂರು ಇದರ ನಿರ್ವಹಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ಅನುದಾನಿತ ಪ್ರೌಢಶಾಲೆಗಳಲ್ಲಿ ತೆರವಾಗಿರುವ ವಿವಿಧ ವಿಷಯಗಳ ಸಹಶಿಕ್ಷಕರು / ದೈಹಿಕ ಶಿಕ್ಷಣ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಕೆಳಕೆ ನೀಡಿರುವ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಕನ್ನಡ ವಿಷಯ ಸಹಶಿಕ್ಷಕರು 9
ಆಂಗ್ಲ ವಿಷಯ ಸಹಶಿಕ್ಷಕರು 16
ಹಿಂದಿ ವಿಷಯ ಸಹಶಿಕ್ಷಕರು 3
ಗಣಿತ ವಿಷಯ ಸಹಶಿಕ್ಷಕರು 4
ವಿಜ್ಞಾನ ವಿಷಯ ಸಹಶಿಕ್ಷಕರು 8
ಕಲಾ ವಿಷಯಗಳ ಸಹಶಿಕ್ಷಕರು 8
ದೈಹಿಕ ಶಿಕ್ಷಣ ಶಿಕ್ಷಕರು 3
ಒಟ್ಟು ಶಿಕ್ಷಕರುಗಳ ಸಂಖ್ಯೆ 51

 

ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿತ ವಿಷಯಗಳಲ್ಲಿ ಪದವಿ ಹಾಗೂ ಬಿಎಡ್ ಶಿಕ್ಷಣ ತರಬೇತಿಯನ್ನು ಹೊಂದಿರಬೇಕು. ಸರ್ಕಾರದ ಆದೆಶಗಳನ್ವಯ ವಯೋಮಿತಿ ಇರಬೇಕು.

ಅರ್ಜಿ ಸಲ್ಲಿಸುವ ಅರ್ಜಿದಾರರು ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ ರೂ.1000 ಡಿಡಿಯನ್ನು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ.500 ಡಿಡಿ ಅನ್ನು – ಅಧ್ಯಕ್ಷರು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ಧಗಂಗಾಮಠ, ತುಮಕೂರು ಜಿಲ್ಲೆ ಇವರ ಹೆಸರಿಗೆ ಪಡೆದು ಸಲ್ಲಿಸಬೇಕು. ಡಿಡಿ ಮೊಬಲಗಿನ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ ?
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದರೇ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ www.sses.org.in ಗೆ ಭೇಟಿ ನೀಡಬಹುದಾಗಿದೆ. ಅರ್ಜಿ ನಮೂನೆಯನ್ನು ಇದೇ ವೆಬ್‌ಸೈಟ್‌ನಲ್ಲಿ ಪಡೆದುಕೊಂಡು, ಜುಲೈ 24 ರಿಂದ ಮುಂದಿನ 21 ದಿನಗಳೊಳಗೆ ಅರ್ಜಿಯನ್ನು ಸಲ್ಲಿಸಬೇಹುದಾಗಿದೆ. ಹಾಗೂ ಅರ್ಜಿಯ ಪ್ರತಿಯನ್ನು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ತುಮಕೂರು ಜಿಲ್ಲೆ ಇವರಿಗೆ ಸಲ್ಲಿಸಬೇಕು.

ಬೇಕಾದ ದಾಖಲೆಗಳು/ ವಿವರಗಳು
ಅಭ್ಯರ್ಥಿ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ವೈಯಕ್ತಿಕ ವಿವರ, ಕಾರ್ಯಾನುಭವ ವಿವರ ಹಾಗೂ ದಾಖಲೆ, ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಹಾಗೂ ಬಿಎಡ್ ಶಿಕ್ಷಣ ಪ್ರಮಾಣ ಪತ್ರ, ಇತರೆ ದಾಖಲೆಗಳ ಜೆರಾಕ್ಸ್‌ ಪ್ರತಿಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕು.

ಅರ್ಜಿಗಳ ಮುಖಪುಟ ಮತ್ತು ಕವರ್‌ನ ಮೇಲ್ಭಾಗದಲ್ಲಿ ಹುದ್ದೆಯ ಹೆಸರು, ಮೀಸಲಾತಿ ಮತ್ತು ಸಮತಲ ಮೀಸಲಾತಿಯನ್ನು ಸ್ಪಷ್ಟವಾಗಿ, ಕಡ್ಡಾಯವಾಗಿ ಬರೆದಿರಬೇಕು. ಅಸ್ಪಷ್ಟ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಪೂರ್ಣ ಮಾಹಿತಿಗಳುಳ್ಳ ಹಾಗೂ ನಿಗದಿತ ದಿನಾಂಕದ ಬಳಿಕ ಬರುವ ಅರ್ಜಿಗಳನ್ನು ಯಾವ ಹಿಂಬರಹ ನೀಡದೆ ತಿರಸ್ಕರಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!