Saturday, April 20, 2024

ಮರವಂತೆಯ ಮೀನುಗಾರರು ರಾಜ ಮಹಾರಾಜರಂತೆ ಶ್ರೀರಾಮನ ಸೇವೆ ಮಾಡಿದ್ದಾರೆ-ರಾಘವೇಶ್ವರ ಶ್ರೀ

ಮರವಂತೆ: ಮೀನುಗಾರರು ಧರ್ಮಬೀರುಗಳು, ಧರ್ಮಪರರು. ಯಾವ ರಾಜ ಮಹಾರಾಜರಿಗೂ ತಾವು ಕಡಿಮೆ ಇಲ್ಲವೆನ್ನುವಂತೆ ಶ್ರೀರಾಮನಿಗೆ ಸ್ವರ್ಣ ಕಿರೀಟ, ಸ್ವರ್ಣ ಕವಚ ಸಮರ್ಪಣೆ ಮಾಡಿದ್ದಾರೆ. ಮೀನುಗಾರರಿಗೆ ಸಮುದ್ರದಲ್ಲಿ ಆಪತ್ತು ಬರಬಾರದು, ಸಂಪತ್ತು ಬರಬೇಕು. ಆ ನಿಟ್ಟಿನಲ್ಲಿ ಪರಮಾತ್ಮ ಶ್ರೀರಾಮಚಂದ್ರನ ಅನುಗ್ರಹ ಸದಾ ಮೀನುಗಾರರ ಮೇಲೆ ಇರುತ್ತದೆ ಎಂದು ಹೊಸನಗರಶ್ರೀರಾಮಚಂದ್ರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಹೇಳಿದರು.

ಶ್ರೀರಾಮ ಮಂದಿರ, ಮೀನುಗಾರರ ಸೇವಾ ಸಮಿತಿ ಮರವಂತೆ ವತಿಯಿಂದ ಮರವಂತೆ ಶ್ರೀ ರಾಮ ಮಂದಿರದಲ್ಲಿ ಮಾ.31ರ ತನಕ ನಡೆಯಲಿರುವ ರಜತ ಕಾರ್ಯಕ್ರಮ ಶ್ರೀ ರಾಮ ದೇವರ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ರಾಮ ದೇವರಿಗೆ ಸುವರ್ಣ ಕಿರೀಟ, ಕವಚ ಸಮರ್ಪಣೆ, 90ನೇ ವರ್ಷದ ಭಜನ ಮಹೋತ್ಸವ, ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಅಪರಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಈ ಭಾಗದ ಮೀನುಗಾರರ ಸಮಸ್ಯೆಯನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು. ಬ್ರೇಕ್ ವಾಟರ್ ಯೋಜನೆಯನ್ನು ವೇಗವಾಗಿ ಪೂರ್ತಿಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹ ಮಾಡುವುದಾಗಿ ತಿಳಿಸಿದ ಶ್ರೀಗಳು, ಯೋಜನೆಯೊಂದರ ಸದುಪಯೋಗವಾಗಬೇಕಾದರೆ ಯೋಜನೆ ಪೂರ್ಣವಾಗಬೇಕು. ಸಮಸ್ಯೆ ಎಲ್ಲಿದೆ ಎಂದು ಅಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು. ಸಮುದ್ರವನ್ನೇ ಅವಲಂಬಿಸಿಕೊಂಡಿರುವ ಮೀನುಗಾರರಿಗೆ ತೊಂದರೆಯಾಗಬಾರದು ಎಂದರು.

ಸಮುದ್ರ ದೇಶದೇಶಗಳಿಗಿಂತಲೂ ದೊಡ್ಡದು. ಅದರ ಆಳ, ಅಗಲ, ಸಂಪತ್ತು ಕೂಡಾ. ರಾಮನನ್ನು ಸಮುದ್ರಕ್ಕೆ ಹೋಲಿಸುತ್ತಾರೆ. ಕರುಣಾ ಸಮುದ್ರ ಎಂದು ಶ್ರೀರಾಮನನ್ನು ಕರೆಯುತ್ತಾರೆ. ರಾಮನ ಗಾಂಭೀರ್ಯ ಸಮುದ್ರದಂತೆ ಎಂದು ಬಣ್ಣಿಸುತ್ತಾರೆ. ಸಮುದ್ರಕ್ಕೆ ಚಿಂತೆಗಳೆಲ್ಲವನ್ನು ಶಮನ ಮಾಡುವ ಶಕ್ತಿ ಇದೆ ಎಂದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ ಭಜನೆಗೆ ವಿಶೇಷವಾದ ಶಕ್ತಿ ಇದೆ. ಭಜನೆಯಿಂದ ಸುಲಭವಾಗಿ ಭಗವಂತನ ಅನುಗ್ರಹ ಸಂಪಾದಿಸಿಕೊಳ್ಳಬಹುದು. ಮನೆ ಮನೆಯಲ್ಲಿಯೂ ಭಜನೆ ಮೂಲಕ ಭಕ್ತಿ ಪ್ರಸಾರಣೆಯ ಪ್ರಕ್ರಿಯೆ ನಡೆಯಬೇಕು. ಭಜನೆಯಿಂದ ಬದಲಾವಣೆ ಸಾಧ್ಯ ಎಂದರು.

ಶ್ರೀರಾಮ ಮಂದಿರ, ಮೀನುಗಾರರ ಸೇವಾ ಸಮಿತಿ ಮರವಂತೆ ಇದರ ಅಧ್ಯಕ್ಷರಾದ ವಾಸುದೇವ ಖಾರ್ವಿ ಉಪಸ್ಥಿತರಿದ್ದರು. ಮೀನುಗಾರರ ವತಿಯಿಂದ ಶ್ರೀಗಳಿಗೆ ಗೌರವರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಭಾರತಿ ಮತ್ತು ತಂಡದವರು ಪ್ರಾರ್ಥಿಸಿದರು. ಮಾಜಿ ಕಾರ್ಯದರ್ಶಿ ಪ್ರಭಾಕರ ಎಂ.ಕೆ ಸ್ವಾಗತಿಸಿದರು. ಕಾವ್ಯ ವಂದಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!