Wednesday, September 11, 2024

ಕಡಲ್ಕೊರೆತ : ಶಾಶ್ವತ ಪರಿಹಾರ ಮಾಡದಿದ್ದಲ್ಲಿ ಸುದೀರ್ಘ ಹೋರಾಟ : ಗಂಟಿಹೊಳೆ

ಜನಪ್ರತಿನಿಧಿ (ಬೈಂದೂರು) : ತೀವ್ರ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು ಮರವಂತೆ, ಕಂಚುಗೋಡು ಪ್ರದೇಶಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಸ್ಥಳಕ್ಕೆ ಶಾಸಕ ಗುರುರಾಜ್‌ ಗಂಟಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಜನಪ್ರತಿನಿಧಿ ಪತ್ರಿಕೆಗೆ ಸ್ಪಂದಿಸಿದ ಶಾಸಕರು, ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ. ಅನುದಾನ ಬಿಡುಗಡೆಯಾಗುತ್ತಿಲ್ಲ. ಮೀನುಗಾರಿಕೆ ಸಚಿವರು ಮಂಕಾಳ್‌ ವೈದ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಲ್ಲಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಆಗಲೇ ಬೇಕು. ಮನವಿ ಸಲ್ಲಿಸಿಯಾಗಿದೆ. ಚರ್ಚಿಸಿಯೂ ಆಗಿದೆ. ಇನ್ನು ಉಳಿದ ಮಾರ್ಗ ಹೋರಾಟ. ಅನುದಾನ ಬಿಡುಗಡೆಯಾಗದೇ ಇದ್ದಲ್ಲಿ. ಸಚಿವರು ಈ ಬಗ್ಗೆ ಸ್ಪಂದಿಸದಿದ್ದಲ್ಲಿ ಸುದೀರ್ಘ ಹೋರಾಟ ಮಾಡಿ ಇಲಾಖೆಯನ್ನು ಎಚ್ಚರಿಸಿ ಶಾಶ್ವತ ಪರಿಹಾರ ಮಾಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!