spot_img
Friday, January 17, 2025
spot_img

ಶಿರೂರು ಗುಡ್ಡ ಕುಸಿತ | ಲಾರಿ ಡ್ರೈವರ್‌ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿರುವ ಈಶ್ವರ್‌ ಮಲ್ಪೆ ತಂಡ ! 12ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ

ಜನಪ್ರತಿನಿಧಿ (ಕಾರವಾರ) : ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನ ಗುಡ್ಡ ಕುಸಿತ ದುರಂತದ ಮಣ್ಣು ತೆರವು ಕಾರ್ಯಾಚರಣೆ ಇಂದಿಗೆ 12ನೇ ದಿನಕ್ಕೆ ಕಾಲಿಟ್ಟಿದೆ. ಮಣ್ಣು ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಲಾರಿಯನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ.ಹೇಗಾದರೂ ಮಾಡಿ ಲಾರಿ ಮೇಲೆತ್ತಬೇಕು ಎಂಬ ದೃಷ್ಟಿಯಲ್ಲಿ ಹೊಸ ರೂಪದ ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಪ್ಲೊಟಿಂಗ್ ಪ್ಲ್ಯಾಟ್‌ಫಾರ್ಮ್‌ ಹಾಕಿ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ. ಹೀಗಾಗಿ ಗೋವಾದಿಂದ ಪ್ಲೋಟಿಂಗ್ ಪ್ಲ್ಯಾಟ್‌ಫಾರ್ಮ್ ತಂಡ ಆಗಮಿಸ್ತಿದ್ದು ಕಾರ್ಯಾಚರಣೆ ನಡೆಯಲಿದೆ.

ಕಾರ್ಯಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲಕ್ಷಿ ಪ್ರೀಯಾ ಪ್ರತಿಕ್ರಿಯಿದಿ, ಇವತ್ತು ನೇವಿಯವರು ನಮಗೆ ಸಹಕಾರ ಕೊಟ್ಟಿದ್ದಾರೆ. ಇಂದು ಸಂಜೆಯೊಳಗೆ ಟಗ್ ಬೋಟ್ ಬರಲಿದೆ, ಇಂದು ಹೆಚ್ಚುವರಿಯಾಗಿ ಆಗಿ ಮಲ್ಪೆಯಿಂದ ಈಜು ತಜ್ಞರು ಬಂದಿದ್ದಾರೆ. ಈಗ ಅವರನ್ನು ಕೂಡ ಕಾರ್ಯಚರಣೆಗೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಎಲ್ಲಾ ತಂಡಗಳು ಸೇರಿ ಒಟ್ಟಿಗೆ ಕಾರ್ಯಚರಣೆ ಆರಂಭ ಮಾಡುತ್ತಿದ್ದೇವೆ. ಲಾರಿ ಇರುವ ಜಾಗದಲ್ಲಿ ಹೆಚ್ಚಿನ ಮಣ್ಣು ಇರುವುದರಿಂದ ಕಾರ್ಯಚರಣೆಗೆ ಅಡ್ಡಿಯಾಗಿತ್ತು. ಲಾರಿಯಲ್ಲಿ ಇರುವವರು ಜೀವಂತವಾಗಿ ಇದ್ದಾರಾ ಎನ್ನುವ ಬಗ್ಗೆ ಈಗಲೂ ನಂಬಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.

ನಾವು ಟ್ರಕ್ ಅನ್ನು ಮೇಲಕ್ಕೆ ಎತ್ತುವುದಕ್ಕೆ ಹೋಗುವುದಿಲ್ಲ. ಅದರ ಒಳಗಿರುವ ವ್ಯಕ್ತಿಗಳನ್ನು ಎತ್ತುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಲಾರಿ ಇರುವ ಸ್ಥಳಕ್ಕೆ ಹೋಗಿ ಅಲ್ಲಿಂದ ಅವರನ್ನು ಎತ್ತಬೇಕಿದೆ. ಆದರೆ ಯಾವುದೇ ಯಂತ್ರಗಳಿಂದ ಅವರನ್ನ ರೆಸ್ಕ್ಯೂ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು, ನದಿಯಲ್ಲಿ ಮುಳುಗಿ ಲಾರಿ ಪತ್ತೆ ಕಾರ್ಯಾಚರಣೆಗೆ ಉಡುಪಿ ಜಿಲ್ಲೆಯ ಈಶ್ವರ ಮಲ್ಪೆ ನೇತೃತ್ವದ ತಂಡ ಈಗಾಗಲೇ ಆರಂಭ ಮಾಡಿದೆ. ಶಿರೂರಿನ ಗಂಗಾವಳಿ ನದಿ ಬಳಿ ನಡೆಯುತ್ತಿರುವ ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ತಂಡ ನದಿಯಲ್ಲಿ ಮುಳುಗಿ ಲಾರಿ ಸುಳಿವು ಸಿಕ್ಕ ಪ್ರದೇಶದಲ್ಲಿ ಹುಡುಕಾಟ ನಡೆಸಲಿದ್ದಾರೆ.


(ಮುಳುಗು ತಜ್ಞ ಈಶ್ವರ್‌ ಮಲ್ಪೆ ಮತ್ತು ತಂಡ)

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!