Saturday, July 27, 2024

ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ತರಬೇತಿ ಅಗತ್ಯ-ಎಸ್ ರಾಜು ಪೂಜಾರಿ

ಸಹಕಾರಿ ನೌಕರರಿಗೆ ಆಡಳಿತ ನಿರ್ವಹಣಾ ತರಬೇತಿ
ಕುಂದಾಪುರ: ಸಹಕಾರಿ ಕ್ಷೇತ್ರವು ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತದೆ. ಇಲ್ಲಿ ಪ್ರತಿಯೊಂದು ವಿಚಾರಗಳಿಗೂ ನಿಯಮಾವಳಿಗಳು ಇವೆ. ಠೇವಣಿ ಸಂಗ್ರಹ, ಸಾಲದ ನಿಯಮ, ಉಪವಿಧಿಗಳು ಮುಂತಾದ ಅನೇಕ ವಿಚಾರಗಳು ಆಗಿಂದಾಗ ಬದಲಾವಣೆಯಾಗುತ್ತಿರುತ್ತದೆ. ಇದನ್ನು ದೈನಂದಿನ ಆಡಳಿತ ನಿರ್ವಹಣೆಯಲ್ಲಿ ತಿಳಿದುಕೊಳ್ಳಬೇಕಾಗಿದೆ. ಸಹಕಾರಿ ಕ್ಷೇತ್ರದ ಒಂದು ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಲ್ಲ. ಅದು ಸರಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುವ ಒಂದು ಸಂಸ್ಥೆ. ಇಲಾಖೆಯಿಂದ ಆಗಿಂದಾಗ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಇಲಾಖೆ ಹಮ್ಮಿ ಕೊಂಡಿದ್ದ ಕುಂದಾಪುರ ಬೈಂದೂರು ತಾಲೂಕುಗಳ ವಿವಿಧೋದ್ದೇಶ, ಕ್ರೆಡಿಟ್ ಸಹಕಾರಿ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಅಧ್ಯಕ್ಷರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರು ಆದ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿ ಮಾತನಾಡಿ ರಾಷ್ಟ್ರಮಟ್ಟದಲ್ಲಿ ಸಹಕಾರ ಕ್ಷೇತ್ರ ಅನೇಕ ಬದಲಾವಣೆಯನ್ನು ಕಾಣುತ್ತಿದೆ. ಕೇಂದ್ರ ಮಟ್ಟದಲ್ಲಿ ಈ ಬಗ್ಗೆ ವಿಶೇಷವಾದ ಚರ್ಚೆ ನೆಡೆಯುತ್ತಿದೆ. ಸಹಕಾರಿ ಸಂಘಗಳಲ್ಲಿ ಸಿಬ್ಬಂದಿ ಪಾತ್ರ ಬಹಳ ಮುಖ್ಯ. ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳ ಬೇಕು. ಜೊತೆಗೆ ಇಲಾಖಾ ಆಡಿಟ್‌ನ್ನು ಒಮ್ಮೊಮ್ಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಯೂನಿಯನ್ನು ಅನೇಕ ಕಾರ್ಯಕ್ರಮಗಳನ್ನು, ತರಬೇತಿ ಕಾರ್ಯಗಳನ್ನು ನಡೆಸುತ್ತಿದೆ. ಸಿಬ್ಬಂದಿಗಳು ಯಾವ ರೀತಿ ತರಬೇತಿ ಬೇಕು ಎನ್ನುವುದನ್ನು ತಿಳಿಸಬೇಕು. ಅದನ್ನು ಸಹಕಾರಿ ಯೂನಿಯನ್ ಮಾಡುತ್ತದೆ ಎಂದು ಹೇಳಿದ ಅವರು ಈಗಾಗಲೇ ಟಿಡಿಸ್ ವಿಧಿಸುವುದರ ಬಗ್ಗೆ ಹೋರಾಟ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಮಹೇಶ್ ಹೆಗ್ಡೆ ಮೊಳಹಳ್ಳಿ, ಸಹಕಾರಿ ಸಂಘಗಳ ಉಪ ನಿಬಂಧಕರಾದ ಲಕ್ಷ್ಮೀನಾರಾಯಣ ಜಿ. ಎಸ್., ಸಹಾಯಕ ನಿಬಂಧಕರಾದ ಶ್ರೀಮತಿ ಲಾವಣ್ಯ ಆಗಮಿಸಿದ್ದರು. ವೇದಿಕೆಯಲ್ಲಿ ಯೂನಿಯನ್ನಿನ ನಿರ್ದೇಶಕರಾದ ಎನ್. ಮಂಜಯ್ಯ ಶೆಟ್ಟಿ, ಮನೋಜ್ ಎಸ್, ಕರ್ಕೇರ, ಶ್ರೀಧರ ಪಿ. ಎಸ್. ಉಪಸ್ಥಿತರಿದ್ದರು.

ಈ ಒಂದು ದಿನದ ಕಾರ್ಯಾಗಾರದಲ್ಲಿ ಸಹಕಾರಿ ಸಂಘಗಳ ಕಾಯ್ದೆಯ ಮುಖ್ಯಾಂಶಗಳ ಬಗ್ಗೆ ಸಹಕಾರಿ ಸಂಘಗಳ ಉಪನಿಬಂಧಕರಾದ ಲಕ್ಷ್ಮೀ ನಾರಾಯಣ ಜಿ. ಎಸ್. ಉಪನ್ಯಾಸ ನೀಡಿದರು. ಸಾಲ ವಸೂಲಾತಿ ದಾಖಲಾತಿ ನಿರ್ವಹಣೆಯ ಬಗ್ಗೆ ಶ್ರೀಧರ ಪಿ.ಎಸ್. ಉಪನ್ಯಾಸ ನೀಡಿದರು. ಸಹಕಾರ ಸಂಘಗಳಲ್ಲಿ ವ್ಯಕ್ತಿತ್ವ ಅಭಿವೃದ್ದಿ ಮತ್ತು ನಾಯಕತ್ವ ಬೆಳವಣಿಗೆಯ ಮೂಲಕ ಮಾನವ ಸಂಪನ್ಮೂಲ ಅಭಿವೃದ್ದಿ ಎಂಬ ವಿಷಯದ ಬಗ್ಗೆ ಜೇಸಿ‌ಐ ತರಭೇತುದಾರ ಶಿವರಾಮ್ ಕೆ.ಕೆ. ಉಪನ್ಯಾಸ ನೀಡಿದರು.

ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೈಂದೂರು, ಕುಂದಾಪುರ ತಾಲೂಕಿನ ಸಹಕಾರಿ ನೌಕರರು, ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!