

ಕುಂದಾಪುರ: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜಾನ್ಸನ್ ಡಿಅಲ್ಮೇಡಾ, ಉಪಾಧ್ಯಕ್ಷರಾದ ಕಿರಣ್ ಮೆಲ್ವಿನ್ ಲೋಬೊ ಪಡುಕೋಣೆ, ನಿರ್ದೇಶಕ ವಿಲ್ಸನ್ ಡಿಸೋಜಾ ಶಿರ್ವ, ಸಂತೋಷ್ ಓಝೋಲ್ಡ್ ಡಿಸಿಲ್ವಾ ಕಾರ್ಕಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಮೇಬಲ್ ಡಿ’ಆಲ್ಮೇಡಾ ಉಪಸ್ಥಿತರಿದ್ದರು.