Friday, November 8, 2024

ಮೇ.10ರಂದು ಶ್ರೀ ಸಾಂಬಸದಾಶಿವ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಶ್ರೀಮನ್ಮಹಾರಥೋತ್ಸವ

ಶಂಕನರಾಯಣ: ಶಂಕರನಾರಾಯಣ ಗ್ರಾಮದ ಹಳೇಅಗ್ರಹಾರ ಶ್ರೀ ಸಾಂಬಸದಾಶಿವ ಮತ್ತು ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಮೇ 10 ಶುಕ್ರವಾರ ನಡೆಯಲಿದೆ.

ಮೇ 7 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ, ಸಂಜೆ ಬಲಿ ಉತ್ಸವ, ವೃಷಭಾಧಿವಾಸ ಹೋಮ, ಅಂಕುರಾರೋಪಣ, ಮೇ 8ರಂದು ಬೆಳಿಗ್ಗೆ ಧ್ವಜಾರೋಹಣ, ವೇದಪಾರಾಯಣ, ಶತರುದ್ರಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ, ಸಂಜೆ ಬಲಿ ಉತ್ಸವ, ರಾತ್ರಿ ರಂಗಪೂಜಾ, ಬಲಿ ಉತ್ಸವ, ಮೇ.9ರಂದು ಶತರುದ್ರಾಭಿಷೇಕ, ಪ್ರಧಾನಹೋಮ, ಕಲಶಾಭೀಷೇಕ, ಮಹಾಪೂಜಾ, ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ, ಸಂಜೆ ಬಲಿ ಉತ್ಸವ ನಡೆಯಲಿದೆ. ಮೇ 10ರಂದು ಬೆಳಿಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಥಶುದ್ಧಿಹೋಮ, ರಥಶುದ್ಧಿ, ಶ್ರೀದೇವರ ರಥಾರೋಹಣ, ಮಂಗಳಾರತಿ, ಮನ್ಮಹಾರೋತ್ಸವ, ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಂಜೆ ರಥಾವರೋಹಣ, ಅಷ್ಟಾವಧಾನ ಸೇವೆ, ರಾತ್ರಿ ಭೂತ ಬಲಿ, ಶಯನೋತ್ಸವ ನಡೆಯಲಿದೆ.

ಮೇ.11ರಂದು ಪ್ರಭೋಧೋತ್ಸವ, ಅಷ್ಟಾವಧಾನ ಸೇವೆ, ಅಂಕುರ ಪ್ರಸಾದ ವಿತರಣೆ, ಪ್ರಧಾನ ಹೋಮ, ಕಲಶಾಭಿಷೇಕ ಪೂಜೆ, ಬಲಿ, ಸಂಜೆ ಚೂರ್ಣೋತ್ಸವ, ಅವಭೃತೋತ್ಸವ, ಪೂರ್ಣಾಹುತಿ ಹೋಮ, ಧ್ವಜಾವರೋಹಣ ನಡೆಯಲಿದೆ. ಮೇ 12ರಂದು ನವಕುಂಭಸ್ಥಾಪನೆ, ಪ್ರಧಾನ ಹೋಮ, ಕಲಶಾಭಿಷೇಕ ಪೂಜೆ ನಡೆಯಲಿದೆ.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮೇ 8ರಂದು ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮ, ಪ್ರಸ್ತುತಿ: ಶ್ರೀ ನಂದಿ ಚಿಕ್ಕಮ್ಮ ಭಜನಾ ಮಂಡಳಿ ಎಡಮಕ್ಕಿ. ಮೇ.9ರಂದು ಸಂಜೆ 7 ಗಂಟೆಗೆ ಯಕ್ಷಗಾನ ನೂತನ ಪ್ರಸಂಗ, ಪ್ರಸ್ತುತಿ: ಶ್ರೀ ಶಂಕರನಾರಾಯಣ ಕೃಪಾಪೋಷಿತ ಯಕ್ಷಸಿರಿ ಶಂಕರನಾರಾಯಣ ಇವರಿಂದ. ಮೇ 11ರಂದು ಸಂಜೆ 7ರಿಂದ ಭಜನಾ ಕಾರ್ಯಕ್ರಮ, ಪ್ರಸ್ತುತಿ: ಮಹಿಷಾಮರ್ದಿನಿ ಭಜನಾ ಮಂಡಳಿ ಶಂಕರನಾರಾಯಣ ಇವರಿಂದ. ನಂತರ ಓಕುಳಿ ಮತ್ತು ತೆಪ್ಪೋತ್ಸವ (ಹೊಳೆಯಾಣ) ಶ್ರೀ ದೇವರ ಹೊಳೆಯಾಣಕ್ಕಾಗಿ ಜೋಡುದೋಣಿಯ ಸಮರ್ಪಣೆ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಕ್ಕೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅನುವಂಶಿಯ ಆಡಳಿತ ಮೊಕ್ತೇಸರಾದ ದಿ.ರಾಮಚಂದ್ರಯ್ಯ ಹಲ್ಸನಾಡು ಇವರ ಮಕ್ಕಳು ಹಾಗೂ ಶ್ರೀ ಸಾಂಬಸದಾಶಿವ ಪೂಜಾ ಸಮಿತಿ ಅಧ್ಯಕ್ಷರಾದ ಕೆ.ಶಂಕರನಾರಾಯಣ ಭಟ್ ಕೊಂಡಳ್ಳಿ ಹಾಗೂ ಸರ್ವ ಸದಸ್ಯರು, ಶ್ರೀ ಸಾಂಬಸದಾಶಿವ ಪೂಜಾ ಸಮಿತಿ ಮತ್ತು ಊರ, ಪರಊರ ಸಮಸ್ತ ಭಕ್ತರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!