Sunday, May 19, 2024

ರಜಾರಂಗು-24: ಮಕ್ಕಳ ಬೇಸಿಗೆ ಶಿಬಿರದಲ್ಲಿ ಗಮನ ಸಳೆದ ಮಕ್ಕಳ ಸಂತೆ

ತೆಕ್ಕಟ್ಟೆ: ಪ್ರಸ್ತುತ ಕಾಲಘಟ್ಟದ ಮಕ್ಕಳು ವ್ಯವಹಾರದಲ್ಲಿ ಪಳಗಿರುವುದಿಲ್ಲ. ಕಾರಣ ಪೋಷಕರು ಆ ಜವಾಬ್ಧಾರಿಯನ್ನು ಮಕ್ಕಳಿಗೆ ಕೊಡುತ್ತಿಲ್ಲ. ಯಾಕೆಂದರೆ ಮನೆಯಲ್ಲಿ ಒಂದೆರಡು ಮಕ್ಕಳಿರುವ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತ ಎಲ್ಲಾ ಜವಾಬ್ಧಾರಿಯನ್ನು ತಾವೇ ನಿಭಾಯಿಸುತ್ತಾರೆ. ಆದರೆ ಇದರ ಬಗೆಗೆ ಕಲ್ಪನೆಯ ಬೆಳಕು ಚೆಲ್ಲುವುದಕ್ಕೆ ಸಂಸ್ಥೆ ಮಕ್ಕಳ ಸಂತೆಯನ್ನು ಏರ್ಪಡಿಸಿಕೊಂಡಿದ್ದು ನಿಜಕ್ಕೂ ಸ್ತುತ್ಯರ್ಹ. ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವ ವ್ಯವಹಾರ ಕೌಶಲ ಮಕ್ಕಳ ಸಂತೆಯ ಮೂಲಕ ಸಂಪನ್ನಗೊಂಡಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ ಸಂತೆಯನ್ನು ಉದ್ಘಾಟಿಸಿ ಮಾತನ್ನಾಡಿದರು.

ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ಮೇ 4 ರಂದು ರಜಾರಂಗು-24, 24ನೇ ದಿನದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳ ಸಂತೆಯನ್ನು ಉದ್ಘಾಟಿಸಿ, ಸುದರ್ಶನ ಉರಾಳರು ಮಾತನ್ನಾಡಿದರು.

ಸಂತೆಯ ಮೆರುಗು ಮಕ್ಕಳ ಕಲರವದಿಂದ ಕಳೆಗಟ್ಟಿದೆ. ಗದ್ದಲವೇ ಸಂತೆಗೆ ಆಭರಣವಾಗಿತ್ತು. ಮಕ್ಕಳಲ್ಲಿ ವ್ಯವಹರಿಸುವುದೇ ಒಂದು ಸಂತೋಷ. ಮಕ್ಕಳಲ್ಲಿನ ಆತ್ಮವಿಶ್ವಾಸ, ಸ್ಪರ್ಧಾತ್ಮಕ ಮನೋಭಾವ ಮಕ್ಕಳಲ್ಲಿ ಇಮ್ಮಡಿಯಾಗಿಸಿದೆ ಎಂದು ಡಾ. ಗಣೇಶ್ ಯು. ಮುಖ್ಯ ಅತಿಥಿಯಾಗಿ ಮಾತನ್ನಾಡಿದರು.

ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಂಗ ನಿರ್ದೇಶಕ ನಾಗೇಶ್ ಕೆದೂರು, ಅಶೋಕ್ ಮೈಸೂರು, ರಂಜಿತ್ ಕುಮಾರ್ ಶೆಟ್ಟಿ, ದರ್ಶನ್ ಶೇಟ್, ಮಮತಾ, ರೋಶನ್ ಬೈಕಾಡಿ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!